ಬೆಂಗಳೂರು ನಗರದ ಕೆ.ಜಿ ಹಳ್ಳಿಯಲ್ಲಿ ನಡೆದಂತಹ ಘಟನೆಗೆ ಸಂಬಂಧಿಸಿದ ಹಾಗೆ ವರದಿಯನ್ನು ಹೈಕಮಾಂಡ್ ಗೆ ಸಲ್ಲಿಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ದೆಹಲಿಗೆ ತೆರಳಿದ್ದಾರೆ. ಅವರು ಇಂದು ದೆಹಲಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರು ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯವರ ಭೇಟಿಗೂ ಸಹಾ ಅವಕಾಶವನ್ನು ಕೋರಿದ್ದಾರೆ ಎನ್ನಲಾಗಿದೆ.

ಅವರ ಭೇಟಿಯ ನಂತರ ಡಿ.ಕೆ.ಶಿವಕುಮಾರ್ ಅವರು ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಆಗಿರುವಂತಹ ಕೆ.ಸಿ.ವೇಣುಗೋಪಾಲ್ ಹಾಗೂ ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್​ ಅವರನ್ನು ಭೇಟಿ ಮಾಡಿ ಪ್ರಮುಖ ವಿಚಾರಗಳ ಕುರಿತಾಗಿ ಚರ್ಚೆಯನ್ನು ಮಾಡಲಿದ್ದಾರೆ. ಕೆ.ಜಿ.ಹಳ್ಳಿಯಲ್ಲಿ ನಡೆದಂತಹ ಪ್ರಕರಣಕ್ಕೆ ಸಂಭಂದಿಸಿದ ಹಾಗೆ ತಮ್ಮ ಪಕ್ಷದ ಕಾರ್ಪೋರೇಟರ್​ಗಳ ಬಂಧನ ಹಾಗೂ ಪಕ್ಷದ ನಾಯಕರ ಮೇಲೆ ಬಂದಿರುವ ಆರೋಪಗಳ ವಿಚಾರದಲ್ಲಿ ಯಾವ ರೀತಿ ಪಕ್ಷವು ಮುಂದಿನ ಹೆಜ್ಜೆ ಇಡಬೇಕೆಂಬುದಕ್ಕೆ ಡಿಕೆಶಿ
ಹಿರಿಯ ನಾಯಕರಿಂದ ಸ್ಪಷ್ಟನೆ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಡಿ.ಕೆ ಶಿವಕುಮಾರ್​​ ಅವರ ದೆಹಲಿ ಭೇಟಿಯಲ್ಲಿ ಅವರ ಜೊತೆ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್​ ಕೂಡ ದೆಹಲಿಗೆ ಹೊರಟಿದ್ದು, ಅವರು ಕೂಡಾ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಅವರು ಇಂದು ಹಾಗೂ ನಾಳೆ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಮುಖ ನಾಯಕರ ಗಳನ್ನು ಭೇಟಿ ಮಾಡಿ, ವಿಚಾರಗಳನ್ನು ಚರ್ಚೆ ಮಾಡಿ, ನಾಳೆ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಮರಳಿ ಬರಲಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here