ವಿಶ್ವದ ಗಮನ ಸೆಳೆದಿದ್ದ, ಐತಿಹಾಸಿಕ ಎನಿಸಿದ್ದ, ಭಾರತೀಯರ ಬಹು ವರ್ಷಗಳ ನಿರೀಕ್ಷೆಯಾಗಿದ್ದ ಅಯೋಧ್ಯೆ ತೀರ್ಪು ಹೊರಬಿದ್ದಿದೆ. ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠದ ನ್ಯಾಯಾಧೀಶರಲ್ಲಿ ಏಕಮಾತ್ರ ಮುಸ್ಲಿಂ ಸದಸ್ಯರಾಗಿದ್ದಾರೆ ನ್ಯಾ. ಅಬ್ದುಲ್ ನಜೀರ್ ಅವರು. ವಿಶೇಷ ಎಂದರೆ ಅಬ್ದುಲ್ ನಜೀರ್ ಅವರು ಕರ್ನಾಟಕದವರು ಎಂಬ ವಿಷಯ ಹಲವರಿಗೆ ತಿಳಿದೇ ಇಲ್ಲ. ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದಲ್ಲಿರುವ ಬೆಳುವಾಯಿ ಗ್ರಾಮದವರು. ಇವರು ಜನಿಸಿದ್ದು ಜನವರಿ 05, 1958 ರಂದು.

ನಜೀರ್ ಅವರು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು. ಅನಂತರ ಅವರು ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು. ಪದವಿ ಪಡೆದ ನಂತರ ಕರ್ನಾಟಕ ಹೈಕೋರ್ಟ್ ನಲ್ಲಿ ಅವರು ತಮ್ಮ ಅಭ್ಯಾಸವನ್ನು ಆರಂಭಿಸಿದ್ದು, 1983 ರಲ್ಲಿ. ಅನಂತರ ಅವರು ವಕೀಲರಾಗಿ ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ 2003 ರವರೆಗೆ ಸೇವೆ ಸಲ್ಲಿಸಿದ್ದರು. ಅದಾದ ನಂತರ 2003 ರಲ್ಲಿ ಹೈಕೋರ್ಟ್ ನ ನ್ಯಾಯಾಧೀಶರಾಗಿ ಆಯ್ಕೆಯಾದವರು ಅಬ್ದುಲ್ ನಜೀರ್ ಅವರು.

ಹೀಗೆ ಹಂತ ಹಂತವಾಗಿ ಮೇಲೇರಿದ ಇವರು 2017 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದರು. ತ್ರಿವಳಿ ತಲಾಖ್ ಪ್ರಕರಣದ ಪಂಚ ಸದಸ್ಯರ ಪೀಠದಲ್ಲಿ ಕೂಡಾ ಇವರು ಏಕಮಾತ್ರ ಮುಸ್ಲಿಂ ನ್ಯಾಯಾಧೀಶರಾಗಿದ್ದರು. ಅದೇ ರೀತಿ ಈಗ ರಾಮ ಜನ್ಮ ಭೂಮಿ ವಿವಾದ ಇತ್ಯರ್ಥ ಮಾಡಲು ರೂಪಿಸಲಾಗಿದ್ದ ಪಂಚ ಸದಸ್ಯ ನ್ಯಾಯಾಧೀಶರ ಪೀಠದಲ್ಲಿ ಕೂಡಾ ಸ್ಥಾನವನ್ನು ಪಡೆದ ಏಕಮಾತ್ರ ಮುಸ್ಲಿಂ ನ್ಯಾಯಾಧೀಶರು ಅಬ್ದುಲ್ ನಜೀರ್ ಅವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here