ಜೀ ಕನ್ನಡದ ಸರಿಗಮಪದ ಈ ಸೀಸನ್ ವಿಶೇಷವೇ ಸರಿ‌‌. ಅದರಲ್ಲೂ ರತ್ನಮ್ಮ ಹಾಗೂ ಮಂಜಮ್ಮ ಎಂಬ ಅಂಧ ಸಹೋದರಿಯರ ಜೀವನ ಹಾಗೂ ಅವರ ಪ್ರತಿಭೆಯನ್ನು ಈ ಬಾರಿ ಈ ಕಾರ್ಯಕ್ರಮ ಅನಾವರಣಗೊಳಿಸಿ, ನಾಡಿನ ಜನರ ಕಣ್ಣಲ್ಲಿ ಆ ಅಕ್ಕ ತಂಗಿಯರನ್ನು ನೋಡಿ ಕಣ್ಣೀರು ಬಂದಿದ್ದು ಕೂಡಾ ವಾಸ್ತವ. ಇರುಳು ಕಳೆದು ಹಗಲಾಗುವ ವೇಳೆಗೆ ರತ್ನಮ್ಮ ಮತ್ತು ಮಂಜಮ್ಮ ಎಲ್ಲರ ಮನೆ ಮಾತಾದರು. ಅವರ ಹಾಡಿನ ಪ್ರತಿಭೆಯನ್ನು ಪೋಷಿಸಲು, ಪ್ರೋತ್ಸಾಹಿಸಲು ಜೀ ವಾಹಿನಿ ಕೂಡಾ ಅವರನ್ನು ವಿಶೇಷ ಸ್ಪರ್ಧಿಗಳಾಗಿ ಶೋ ನ ಕೊನೆಯವರೆಗೆ ಉಳಿಸಿಕೊಳ್ಳುವ ನಿರ್ಧಾರ ಮಾಡಿತು.

ಆ ಸಹೋದರಿಯರು ಹಸಿವು ತಾಳಲಾರದೆ ದೇವಸ್ಥಾನದ ಮುಂದೆ ಹಾಡಿ ಸಂಪಾದನೆ ಮಾಡುತ್ತಿದ್ದೆವು ಎಂದಾಗ ಅರ್ಜುನ್ ಜನ್ಯ ಅವರು ಇನ್ನು ಮುಂದೆ ತಾನೇ ಅವರಿಗೆ ಅಗತ್ಯವಿರುವ ದವಸ ಧಾನ್ಯ ಕೊಡಿಸುವುದಾಗಿ ಹೇಳಿದರು‌. ಇನ್ನು ಅವರ ಮನೆ ಕೂಡಾ ಸುಸ್ಥಿತಿಯಲ್ಲಿ ಇಲ್ಲ ಎಂದ ತಿಳಿದಾಗ, ನವರಸ ನಾಯಕ ಜಗ್ಗೇಶ್ ಅವರು ಕೂಡಲೇ ಮುಂದೆ ಬಂದು ಆ ಸಹೋದರಿಯರಿಗೆ ಭದ್ರವಾದ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು. ಜಗ್ಗೇಶ್ ಅವರ ಈ ಸಹಾಯದ ಬಗ್ಗೆ ತಿಳಿಸ ಅಸಂಖ್ಯಾತ ಜನ ಮೆಚ್ಚುಗೆಯನ್ನು ಸೂಚಿಸಿದರು. ಜಗ್ಗೇಶ್ ಅವರು ಕೊಟ್ಟ ಮಾತಿನಂತೆ ಮನೆ ನಿರ್ಮಾಣ ಕಾರ್ಯ ಬಹು ಬೇಗ ಆರಂಭವಾಯಿತು.

ಮಂಜಮ್ಮ ಹಾಗೂ ರತ್ನಮ್ಮ ಅವರ ಹಳೆಯ ಮನೆಯ ಜಾಗದಲ್ಲಿ ಈಗ ಒಂದು ಹೊಸ ಮನೆ ಸಿದ್ಧವಾಗಿದೆ. ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಇಬ್ಬರೂ ಮನೆಯ ಗೃಹ ಪ್ರವೇಶಕ್ಕೆ ತೆರಳುತ್ತಿದ್ದು ಈ ವಿಷಯವನ್ನು ಖುದ್ದು ಜಗ್ಗೇಶ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೋ ಹಾಕಿ ಹಂಚಿಕೊಂಡಿದ್ದಾರೆ. ಅವರು ತನ್ನ ಪೋಸ್ಟ್ ನಲ್ಲಿ
“ಜೀ ಕನ್ನಡ ಸರಿಗಮಪ ಅಂಧಕಲಾವಿದರಿಗೆ
ಇಂದು ಮನೆ ಗೃಹಪ್ರವೇಶಕ್ಕೆ ಮಡದಿಯೊಂದಿಗೆ
ಮಧುಗಿರಿ ಗೆ ಪ್ರಯಾಣ..ಗುರುವಾರ ರಾಯರದಿನ…ಶುಭದಿನ” ಎಂದು ಬರೆದುಕೊಂಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here