Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದು ಬ್ರಿಟನ್ 3ನೇ ಚಾರ್ಲ್ಸ್ ದೊರೆ ಪಟ್ಟಕ್ಕೆ ಕ್ಷಣಗಣನೆ.!

 

ಬ್ರಿಟನ್: 1952ರ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್‌ ರಾಜನೊಬ್ಬ ಸಿಂಹಾಸಾರೂಢರಾಗುತ್ತಿದ್ದಾರೆ. 6ನೇ ಜಾರ್ಜ್‌ ನಿಧನದ ಬಳಿಕ 70ವರ್ಷಗಳ ಕಾಲ ರಾಣಿ ಎಲಿಜಬೆತ್‌ ಪಾರುಪತ್ಯದ ನಂತರ ಇದೀಗ ಆಕೆ ಪುತ್ರ 3ನೇ ಚಾರ್ಲ್ಸ್‌ ದೊರೆ ಇಂದು ಪಟ್ಟಕ್ಕೇರುತ್ತಿದ್ದಾರೆ.

ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆಗೆ ರಾಜ ಹಾಗೂ ರಾಣಿಯರ ಮೆರವಣಿಗೆ ಆರಂಭವಾಗಲಿದ್ದು, ಸಂಜೆ 6ರಿಂದ ಪಟ್ಟಾಭಿಷೇಕ ಸಮಾರಂಭ ಶುರುವಾಗಲಿದೆ. ಪಟ್ಟಾಭಿಷೇಕ ಪ್ರಯುಕ್ತ ಬ್ರಿಟನ್‌ ಸಶಸ್ತ್ರ ಪಡೆಗಳಿಗೆ ಚಾರ್ಲ್ಸ್‌ 4 ಲಕ್ಷ ಮೆಡಲ್‌ ನೀಡಲಿದ್ದಾರಂತೆ.!