ಕರುನಾಡ ಚಕ್ರವರ್ತಿ ಡಾ.ಶಿವರಾಜ್​ ಕುಮಾರ್​ ಈಗ ಚಂದನವನದ ನಾಯಕತ್ವ ಹೊತ್ತುಕೊಂಡಿದ್ದು ಶಿವಣ್ಣನವರ  ಮೇಲೆ ಅತಿಯಾದ ಜವಾಬ್ದಾರಿ ಇದೆ. ಅದರಲ್ಲೂ ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಗಳು ಇನ್ನು ಜಾಸ್ತಿಯಾಗಿದೆ. ಇತ್ತೀಚೆಗಷ್ಟೆ ಚಿತ್ರರಂಗದ ಗಣ್ಯರೆಲ್ಲಾ ಸೇರಿ ಶಿವರಾಜ್ ಕುಮಾರ್ ಅವರಿಗೆ ಸಿನಿಮಾರಂಗದ ನಾಯಕತ್ವವನ್ನು ಒಕ್ಕೂರಲಿನಿಂದ ನೀಡಿ, ಈ ಮೂಲಕ ನಾವೆಲ್ಲಾ ಶಿವಣ್ಣನ ಜೊತೆಗೆ ಇದ್ದೀವಿ ಅಂತ ಹೇಳಿಕೊಂಡಿದ್ರು.ಹಾಗೇ ಶಿವಣ್ಣ ಸಹ ನಾಯಕತ್ವ ವಹಿಸಿಕೊಂಡ ಎರಡೇ ದಿನಕ್ಕೆ ಚಿತ್ರರಂಗದ ಟಾಪ್ ನಾಯಕ ನಟರನ್ನು ಮನೆಗೆ ಕರೆಸಿಕೊಂಡಿದ್ದರು. ಆ ಸಭೆಗೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರನ್ನು ಆಹ್ವಾನಿಸಿ ಚರ್ಚಿಸಿದರು. ಇಂದೂ ಸಹ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ವಿವಿಧ ಮುಖಂಡರುಗಳು ಶಿವರಾಜಕುಮಾರ್ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಇಂದು ನಡೆದ ಸಭೆಯಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಿಎಂ ಅವರನ್ನು ಸಹ ಭೇಟಿ ಮಾಡಲು ನಿಶ್ಚಯಿಸಿದ್ದಾರೆ.ಸರ್ಕಾರದಿಂದ ಚಿತ್ರೋದ್ಯಮ ನಿರೀಕ್ಷಿಸುತ್ತಿರುವ ಸಹಾಯ, ಚಿತ್ರೋದ್ಯಮದ ಭವಿಷ್ಯ. ಸರ್ಕಾರ ಮತ್ತು ಚಿತ್ರೋದ್ಯಮದ ನಡುವೆ ಸಮನ್ವಯ ಹೀಗೆ ಹಲವು ವಿಷಯಗಳ ಬಗ್ಗೆ ಶಿವರಾಜ್ ಕುಮಾರ್ ಅವರು ಸಿಎಂ ಯಡಿಯೂರಪ್ಪ ಬಳಿ ಚರ್ಚಿಸಲಿದ್ದಾರೆ. ಶಿವಣ್ಣ ಅವರ ಜೊತೆಗೆ ಇನ್ನೂ ಕೆಲವು ಚಿತ್ರರಂಗದ ಪ್ರಮುಖರೊಂದಿಗೆ ಸಿಎಂ ಯಡಿಯೂರಪ್ಪ ಅವರನ್ನು ಮಂಗಳವಾರ ಅವರ ಅಧಿಕೃತ ಕಚೇರಿಯಲ್ಲಿ ಭೇಟಿ ಮಾಡಲಿದ್ದಾರೆ.

ಮಂಗಳವಾರ ಕರುನಾಡ ಚಕ್ರವರ್ತಿ  ಡಾ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಮುಖ್ಯಮಂತ್ರಿ ಜೊತೆಗಿನ  ಸಭೆಯಲ್ಲಿ ಚಿತ್ರೋದ್ಯಮಕ್ಕೆ ಪ್ಯಾಕೇಜ್ ನೀಡಲು ಮನವಿ ಮಾಡಲಿದ್ದು, ಅದರಲ್ಲಿಯೂ ಚಿತ್ರೋದ್ಯಮದಲ್ಲಿ ದುಡಿಯುತ್ತಿರುವ ಕಾರ್ಮಿಕ ವರ್ಗಕ್ಕೆ ಸಹಾಯವನ್ನು ಶಿವರಾಜ್ ಕುಮಾರ್ ಅವರು ಯಡಿಯೂರಪ್ಪ ಅವರ ಬಳಿ ಕೇಳಲಿದ್ದಾರೆ ಎನ್ನಲಾಗಿದೆ. ಜೊತೆಗೆ ಚಿತ್ರಮಂದಿರ ಮತ್ತೆ ತೆರೆಯುವುದರ ಕುರಿತು ಪ್ರಮುಖ ವಿಚಾರವನ್ನು ಮುಖ್ಯಮಂತ್ರಿ ಜೊತೆಗೆ ಶಿವರಾಜ್ ಕುಮಾರ್ ಚರ್ಚಿಸಲಿದ್ದಾರೆ. ಜೊತೆಗೆ ಕುಮಾರಸ್ವಾಮಿ ಅವಧಿಯಲ್ಲಿ ಘೋಷಿಸಲಾಗಿದ್ದ ಫಿಲಂ ಸಿಟಿ ಕುರಿತು ಸಹ ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here