ಇಂದು ದೇಶಾದ್ಯಂತ ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಅನೇಕ ಕಡೆ ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಚಲಾಯಿಸುವ ಮೂಲಕ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಇನ್ನು ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಇಂದು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಈ ಸಂಬಂಧ ಈಗಾಗಲೇ ತಮ್ಮ ಮತದಾನದ ಕ್ಷೇತ್ರವಾದ ಗಾಂಧಿನಗರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ನಿವಾಸಕ್ಕೆ ಆಗಮಿಸಿ ತಾಯಿಯ ಆಶೀರ್ವಾದ ಪಡೆದಿದ್ದಾರೆ. ನರೇಂದ್ರ ಮೋದಿಯವರು ತಮ್ಮ ಸ್ವನಿವಾಸಕ್ಕೆ ಆಗಮಿಸುತ್ತಿದ್ದಂತೆ ಮನೆಯಲ್ಲಿ ಸಂಭ್ರಮ ಏರ್ಪಾಡಾಗಿತ್ತು‌. ತಾಯಿಯ ಕಾಲಿಗೆ ನಮಸ್ಕರಿಸಿದ ಮೋದಿಯವರಿಗೆ ಅಮ್ಮನಿಂದ ಮೋದಿಗೆ ಸಿಹಿ ಸಿಕ್ಕಿತ್ತು.

ಮಗ ಮನೆಗೆ ಬಂದ ಸಂಭ್ರಮದಲ್ಲಿ ತಾಯಿ ಮಗನಿಗೆ ಕೈತುತ್ತು ತಿನ್ನಿಸಿ ಸಂಭ್ರಮಿಸಿದರು‌.ನಂತರ ಮತಗಟ್ಟೆಗೆ ತೆರಳಿದ ನರೇಂದ್ರ ಮೋದಿಯವರು ತಮ್ಮ ಹಕ್ಕು ಚಲಾಯಿಸದರು. ದೇಶದಲ್ಲಿ ಮೂರನೆಯ ಹಂತದ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿ ವರಿಷ್ಠ ಲಾಲ್‌ಕೃಷ್ಣ ಆಡ್ವಾಣಿ ಗುಜರಾತಿನ ಅಹಮದಾಬಾದಿನಲ್ಲಿ ಮತದಾನ ಮಾಡಲಿದ್ದಾರೆ.ಗಾಂಧಿ ನಗರ ಲೋಕ ಸಭಾ ಕ್ಷೇತ್ರದಡಿಯಲ್ಲಿ ಬರುವ ರಾಣಿಪ್‌ನಲ್ಲಿರುವ ನಿಶಾವ್ ವಿದ್ಯಾಲಯದಲ್ಲಿ ಮೋದಿ ಮತ ಚಲಾಯಿಸಲಿದ್ದಾರೆ. ಗಾಂಧಿ ನಗರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಣಕ್ಕಿಳಿದಿದ್ದಾರೆ.

 

ಲಾಲ್‌ಕೃಷ್ಣ ಆಡ್ವಾಣಿ ಇಲ್ಲಿಯ ಹಾಲಿ ಸಂಸದರಾಗಿದ್ದಾರೆ. ಮಾಹಿತಿಗಳ ಪ್ರಕಾರ ಶಾ ನಾರಣಾಪುರದಲ್ಲಿನ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲಿದ್ದಾರೆ. ಆಡ್ವಾಣಿ ಖಾನ್ಪುರದ ಶಾಲೆಯೊಂದರಲ್ಲಿ ಮತದಾನ ಮಾಡಲಿದ್ದರೆ. ಜೇಟ್ಲಿ ರಾಜಮಾರ್ಗದಲ್ಲಿರುವ ಕಾಲೇಜೊಂದರಲ್ಲಿ ಮತ ಹಾಕಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಾಂಧಿನಗರದ ತಾಯಿಯ ಮನೆಗೆ ತೆರಳಿ ಆಶೀರ್ವಾದ ಪಡೆದಿದ್ದದು ನಂತರ ಅವರು ಅಹಮದಾಬಾದ್​ಗೆ ತೆರಳಿ ಮತದಾನ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here