ಇಂದು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂವರೀಶ್ ಅವರ 28ನೇ ವಿವಾಹ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ತಾವು ತಮ್ಮ ಪತಿ ಅಂಬಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಸುಮಲತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅಂಬರೀಶ್ ಮತ್ತು ಸುಮಲತಾ ಅವರು 1991ರ ಡಿಸೆಂಬರ್ 8 ರಂದು ದಾಂಪತ್ಯ ಎಂಬ ಮಧುರ ಬಂಧನದಲ್ಲಿ ಬಂಧಿಸಲ್ಪಟ್ಟರು‌. ಅವರ ಕನಸಿನ ಜೀವನ ಅಂದು ಆರಂಭವಾಯಿತು. ಇಂದಿಗೆ ಅವರ ಮದುವೆಯಾಗಿ 28 ವಸಂತಗಳು ಕಳೆದಿವೆ. ಇಂದು ಸುಮಲತಾ ಅವರು ಅಗಲಿದ ತಮ್ಮ ಪ್ರೀತಿಯ ಪತಿಯನ್ನು ನೆನಪಿಸಿಕೊಂಡು, ಹಿಂದಿನ ಸ್ಮರಣೆ ಗಳನ್ನು ಮೆಲುಕು ಹಾಕಿದ್ದಾರೆ.

ಸಂಸದೆ ಸುಮಲತಾ ಅವರು ತಮ್ಮ ಜೀವನದ ಒಂದು ಮಹತ್ವದ ದಿನವಾದ ಇಂದು ಟ್ವೀಟ್ ಮಾಡುವ ಮೂಲಕ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯವನ್ನು ಕೋರಿದ್ದಾರೆ. ಸುಮಲತ ಅವರು ತಮ್ಮ ಟ್ವೀಟ್ ನಲ್ಲಿ “1991ರ ಡಿಸೆಂಬರ್ 8 ರಂದು ವಿವಾಹವಾಗಿದ್ದು, ಈಗ 28 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ, ಸುಖ ದುಃಖಗಳ ಹಂಚಿಕೆ, ಕಾಳಜಿಯ, ನಗುವ, ಅಳುವ, ಕಳೆದು ಹೋಗುವ, ಹುಡುಕುವ, ಕತ್ತಲೆಯ, ಬೆಳಕಿನ, ಹತಾಶೆ, ಸಂತೋಷ, ಪ್ರೀತಿ ಎಲ್ಲೆದರಲ್ಲೂ 28 ವರ್ಷಗಳೂ ಜೊತೆಯಾಗಿಯೇ ಇದ್ದವು. ಇವೆಲ್ಲವೂ ಸದಾ ಶಾಶ್ವತ, ಎಂದೆಂದಿಗೂ ನಿಮ್ಮನ್ನು ಪ್ರೀತಿಸುವೆ ಎಂದು ಪೋಸ್ಟ್ ಮಾಡಿದ್ದಾರೆ.

ಇದರ ಜೊತೆಗೆ ಸುಮಲತ ಅವರು ಮತ್ತೊಂದು ಟ್ವೀಟ್ ಮಾಡಿ “ನಮ್ಮ 28ನೇ ವಿವಾಹ ವಾರ್ಷಿಕೋತ್ಸವ. ಈ ನೆನಪು ಒಂದು ಮುಗುಳ್ನಗುವನ್ನು ತರುತ್ತದೆ” ಎಂದು ಬರೆದು, ಅದರ ಜೊತೆಗೆ ಅಂಬರೀಶ್ ಅವರ ಜೊತೆ ತಾವು ಅಭಿನಯಿಸಿರುವ ‘ತಾಯಿಗೊಬ್ಬ ಕರ್ಣ’ ಸಿನಿಮಾದ ಒಂದು ಸುಂದರವಾದ ಹಾಡನ್ನು ಶೇರ್ ಮಾಡಿದ್ದಾರೆ.
ಅಲ್ಲದೆ ತಮ್ಮ ಹಾಗೂ ಅಂಬರೀಶ್ ಅವರ ಫೋಟೋಗಳ ಮತ್ತು ಜೊತೆಗೆ ಡಾನ್ಸ್ ಮಾಡಿರುವ ವಿಡಿಯೋವೊಂದನ್ನು ಒಟ್ಟಿಗೆ ಸೇರಿಸಿ ಒಂದು ವಿಡಿಯೋ ಮಾಡಿ ಅದನ್ನು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here