ಇಂದು ಲಂಡನ್ನಿನ ಆಸ್ಪತ್ರೆಯಲ್ಲಿ ಸ್ಯಾಂಡಲ್ ವುಡ್ ನ ಪ್ರಸಿದ್ಧ ನಟರಾದ ಶಿವರಾಜಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಬಲ ಭುಜದ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು ಶಿವಣ್ಣ ಅವರ ಆರೋಗ್ಯ ಬೇಗ ಸುಧಾರಣೆ ಆಗಲೆಂದು ಪ್ರಾರ್ಥಿಸಿ ಇಂದು ಅಭಿಮಾನಿ ಸಂಘಗಳು ಹಲವೆಡೆ ದೇಗುಲಗಳಲ್ಲಿ ವಿಶೇಷ ಪೂಜೆ ಏರ್ಪಡಿಸಿದ್ದಾರೆ. ಬೆಂಗಳೂರಿನ ಪ್ರಸಿದ್ದ ಗವಿ ಗಂಗಾದರೇಶ್ವರ ದೇಗುಲದಲ್ಲಿ ಅಖಿಲ ಕರ್ನಾಟಕ ಶಿವರಾಜಕುಮಾರ್ ಸೇನಾ ಸಮಿತಿ ಮತ್ತು ಗಂಡುಗಲಿ ಶಿವರಾಜಕುಮಾರ್ ಸೇನಾ ಸಮಿತಿ ಸಂಘಗಳ ವತಿಯಿಂದ ವಿಶೇಷ ರುದ್ರಾಭಿಷೇಕ ಮತ್ತು ಹೋಮ ಪೂಜೆ ಹಮ್ಮಿಕೊಳ್ಳಲಾಗಿತ್ತು.

 

 

ಇಂದು ಲಂಡನ್ನಿನ ಆಸ್ಪತ್ರೆಯಲ್ಲಿ ಶಿವರಾಜಕುಮಾರ್ ಅವರಿಗೆ ನಡೆಯುವ ಬಲಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದು ಶಿವಣ್ಣ ಬೇಗ ಗುಣಮುಖರಾಗಲೆಂದು ಈ ವಿಶೇಷ ಪೂಜೆ ಹಮ್ಮಿಕೊಂಡಿರುವುದಾಗಿ ಶಿವರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ನಾರಾಯಣ್ ಅವರು ತಿಳಿಸಿದರು.ಈ ಪೂಜಾ ಕಾರ್ಯಕ್ರಮದಲ್ಲಿ ಡಾ.ಶಿವರಾಜಕುಮಾರ್ ಸಹೋದರರು ಹಾಗೂ ಪ್ರಸಿದ್ದ ನಟ ,ನಿರ್ಮಾಪಕ ರಾಘವೇಂದ್ರ ರಾಜ್‍ಕುಮಾರ್ ಮತ್ತು ಖ್ಯಾತ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಅವರು ಭಾಗವಹಿಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here