ಕೇರಳದ ಶಬರಿಮಲೈನ ಅಯ್ಯಪ್ಪನ ಸನ್ನಿಧಾನಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ. ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆ ಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್‌ 28 ರಂದು ಎಲ್ಲಾ ವಯೋಮಾನದ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆದರೆ ಈ ತೀರ್ಪನ್ನು ವಿರೋಧಿಸಿ ಕೇರಳದಲ್ಲಿ ಹೋರಾಟಗಳು ನಡೆಯಿತು. ಮಹಿಳೆಯಿರಬ್ಬರು ಪೊಲೀಸ್ ಬೆಂಗಾವಲಿನಲ್ಲಿ ಅಯ್ಯಪ್ಪ ಸನ್ನಿಧಾನವನ್ನು ಪ್ರವೇಶಿಸಿ, ದರ್ಶನ ಪಡೆದ ಮೇಲೆ ಪರಿಸ್ಥಿತಿ ಮತ್ತಷ್ಟು ವಿಷಮವಾಗಿ, ನಾಯರ್ ಸಮಾಜ, ತಿರುವಾಂಕೂರು ದೇವಸ್ವ ಮಂಡಳಿ ಮತ್ತು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ನ ತೀರ್ಪಿನ ಮರುಪರಿಶೀಲನೆಗೆ 65 ಪುನರ್ ಪರಶೀಲನೆ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಈಗ ಎಲ್ಲಾ ವಿಚಾರಣೆ ಮುಗಿದು, ಇಂದು ಸುಪ್ರಿಂ‌ಕೋರ್ಟ್ ನಲ್ಲಿ ಸಿಜೆಐ ರಂಜನ್ ಗೊಗಯ್ ನೇತೃತ್ವದ ನ್ಯಾಯ ಪೀಠ ಮಹತ್ವದ ತೀರ್ಮಾನವನ್ನು ನೀಡುತ್ತದೆ ಎಂಬ ನಿರೀಕ್ಷೆ ಇತ್ತು. ಇಂದು ತುಂಬಿ ತುಳುಕುತ್ತಿದ್ದ ವಕೀಲರ ಮುಂದೆ ನಿರ್ಣಾಯಕವಾದ ತೀರ್ಪನ್ನು ಕೋರ್ಟ್ ನೀಡುತ್ತದೆ ಎಂದೇ ತಿಳಿಯಲಾಗಿತ್ತು. ಸಿಜೆಐ ರಂಜನ್ ಗೊಗಾಯ್ ಅವರು ಓದಿದ ತೀರ್ಪಿನಲ್ಲಿ ಧಾರ್ಮಿಕ ವಿಚಾರಕ್ಕೆ ಬಂದಾಗ ಎಲ್ಲರಿಗೂ ಅವರದ್ದೇ ಆದ ಹಕ್ಕಿದೆ ಎಂದು ತಮ್ಮ ಮೊದಲನೇ ಸಾಲಿನಲ್ಲೇ ಹೇಳಿದ್ದಾರೆ. ದೇವಸ್ಥಾನದ ಪ್ರವೇಶಕ್ಕೆ ಎಲ್ಲರಿಗೂ ಹಕ್ಕಿದೆ. ಮಹಿಳೆಯರು ದೇವಸ್ಥಾನದ ಪ್ರವೇಶ ಮಾಡಬಹುದು ಎಂದಿದೆ ನ್ಯಾಯಪೀಠ. ದೇವಾಲಯವನ್ನು ಪ್ರವೇಶಿಸಲು ಯಾರನ್ನೂ ತಡೆಯುವಂತಿಲ್ಲ, ಇದು ಮಸೀದಿ ಮತ್ತು ಪಾರ್ಸಿ ಮಂದಿರಗಳಿಗೂ ಇದು ಅನ್ವಯವಾಗುತ್ತೆ ಎಂದಿದ್ದರು.

ಮಸೀದಿ, ಪಾರ್ಸಿ ಮಂದಿರಗಳಿಗೂ ಕೂಡಾ ಮಹಿಳೆಯರಿಗೆ ಪ್ರವೇಶ ಇದೆ ಎನ್ನುವ ಮೂಲಕ ಅಯ್ಯಪ್ಪ ದೇಗುಲ ಮಾತ್ರವಲ್ಲ ಇತರೆ ಧರ್ಮಗಳಿಗೂ ಅನ್ವಯ ಇದೆ ಎಂದಿದ್ದು, ಪಂಚ ನ್ಯಾಯಮೂರ್ತಿಗಳ ಪೀಠದಲ್ಲಿ ಇಬ್ಬರು ನ್ಯಾಯಮೂರ್ತಿಗಳು ಇದಕ್ಕೆ ಭಿನ್ನವಾದ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಶಬರಿ ಮಲೈ ದೇಗುಲದ ಈ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ಅಂದರೇ ಏಳು ಸದಸ್ಯರ ಪೀಠಕ್ಕೆ ವರ್ಗಾಯಿಸಿದೆ. ಅಂದರೆ ಸದ್ಯಕ್ಕೆ ಈ ವಿಷಯಕ್ಕೆ ತೀರ್ಪು ಇಲ್ಲ. ಇನ್ನು ಸದ್ಯದಲ್ಲೇ ಆರಂಭವಾಗುವ ಮಂಡಲ ಪೂಜೆಗೆ ಮಹಿಳೆಯರ ಪ್ರವೇಶ ಆಗುವುದೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here