ಮಂಗಳವಾರ

ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663218892
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 call/ whatsapp/ mail raghavendrastrology@gmail.com

ಮೇಷ(7 ಆಗಸ್ಟ್, 2018)

ಸಂತೋಷದ ಸುದ್ದಿ ಪಡೆಯುವ ಸಾಧ್ಯತೆಯಿದೆ. ಬಾಕಿಯಿರುವ ವಿಷಯಗಳು ರಹಸ್ಯಮಯವಾಗುತ್ತವೆ ಮತ್ತು ವೆಚ್ಚಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಹಣಕಾಸನ್ನು ನಿರ್ವಹಿಸಿದಲ್ಲಿ ನೀವು ಶೀಘ್ರದಲ್ಲೇ ನಿಮ್ಮ ಬಜೆಟ್ ಮೀರಬಹುದಾದ್ದರಿಂದ ಹಾಗೆ ಮಾಡಲು ಬಿಡಬೇಡಿ. ಇಂದು ನೀವು ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿಯ ಅನುಪಸ್ಥಿತಿಯನ್ನು ಅನುಭವಿಸುತ್ತೀರಿ. ಚಿಂತಿಸಬೇಡಿ, ಕಾಲಕಳೆದಂತೆ ಎಲ್ಲವೂ ಬದಲಾಗುತ್ತದೆ, ನಿಮ್ಮ ಪ್ರಣಯ ಜೀವನವೂ ಸಹ. ಕೆಲವರಿಗೆ ವೃತ್ತಿಪರ ಬೆಳವಣಿಗೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಇಂದು ನಿಮ್ಮ ಜೀವನ ಸಂಗಾತಿಯ ವಟಗುಟ್ಟುವಿಕೆಯಿಂದಾಗಿ ನಿಮಗೆ ಸಿಟ್ಟು ಬರಬಹುದು, ಆದರೆ ಅವನು / ಅವಳು ನಿಮಗೆ ನಿಜವಾಗಿಯೂ ಏನಾದರೂ ಒಳ್ಳೆಯದನ್ನು ಮಾಡುತ್ತಾರೆ.

ಅದೃಷ್ಟ ಸಂಖ್ಯೆ: 5

ವೃಷಭ(7 ಆಗಸ್ಟ್, 2018)

ಒಬ್ಬ ಸ್ನೇಹಿತ ನಿಮ್ಮ ಮುಕ್ತ ಮನಸ್ಸು ಮತ್ತು ಸಹಿಷ್ಣುತೆಯ ಪರಮಾವಧಿಯನ್ನು ಪರೀಕ್ಷಿಸಬಹುದು. ನೀವು ನಿಮ್ಮ ಮೌಲ್ಯಗಳೊಂದಿಗೆ ರಾಜಿಯಾಗದಿರುವಂತೆ ಮತ್ತು ಸಕಾರಣವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ ಮತ್ತು ನಿಮ್ಮ ಸ್ನೇಹಿತರ ಜೊತೆ ಕೆಲವು ಆಹ್ಲಾದಕರ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಿ. ಭೇಟಿ ನೀಡುವ ಸಂಬಂಧಿಗಳು ನೀವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿರಬಹುದು. ಪ್ರೀತಿಯಲ್ಲಿ ನಿಮ್ಮ ಅಸಭ್ಯ ವರ್ತನೆಗೆ ಕ್ಷಮೆ ಕೋರಿ. ನಿಮ್ಮ ಪಾಲುದಾರರನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ನೀವು ಖಾದ್ಯಗಳು ಅಥವಾ ಅಪ್ಪುಗೆಯಂಥ ನಿಮ್ಮ ಜೀವನದ ಸಂಗಾತಿಯ ಸಣ್ಣ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಅವರಿಗೆ ಬೇಸರವಾಗಬಹುದು.

ಅದೃಷ್ಟ ಸಂಖ್ಯೆ: 4

ಮಿಥುನ(7 ಆಗಸ್ಟ್, 2018)

ಮಕ್ಕಳ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವುದಿಲ್ಲ -ಹಾಗೂ ಇದು ನಿಮಗೆ ಕೋಪ ತರುತ್ತದೆ. ಅನಿಯಂತ್ರಿತ ಕೋಪ ಸಾಮಾನ್ಯವಾಗಿ ಎಲ್ಲರನ್ನೂ, ಹಾಗೂ ವಿಶೇಷವಾಗಿ ಕೋಪಗೊಂಡವರನ್ನು ಹೆಚ್ಚು ಘಾಸಿಗೊಳಿಸುತ್ತದೆ. ಏಕೆಂದರೆ ಇದು ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಡಿಮೆಯಾಗಿಸುತ್ತದೆ. ಇದು ವಿಷಯಗಳನ್ನು ಇನ್ನೂ ಕಷ್ಟಕರಗೊಳಿಸುತ್ತದೆ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ. ನಿಮ್ಮ ಜೊತೆಗಿರುವ ನಿಮ್ಮೊಂದಿಗೆ ಬಹಳ ಸಂತೋಷದಿಂದಿರುವುದಿಲ್ಲ – ನೀವು ಅವರನ್ನು ಸಂತೋಷಗೊಳಿಸಲು ಏನೇ ಮಾಡಿದರೂ ಕೂಡ. ನಿಮ್ಮ ಪ್ರೀತಿ ಅಸಮ್ಮತಿಯನ್ನು ಆಮಂತ್ರಿಸಬಹುದು. ಮಾರುಕಟ್ಟೆ ಕ್ಷೇತ್ರವನ್ನು ಸೇರುವ ಧೀರ್ಘಕಾಲೀನ ಮಹತ್ವಾಕಾಂಕ್ಷೆ ಸಫಲವಾಗಬಹುದು. ಇದು ನಿಮಗೆ ಪ್ರಚಂಡ ಸಂತೋಷ ನೀಡುತ್ತದೆ ಮತ್ತು ನೀವು ಕೆಲಸ ಪಡೆಯುವಾಗ ಎದುರಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಈ ದಿನ ವೈವಾಹಿಕ ಜೀವನದಲ್ಲಿನ ಒಂದು ಕಠಿಣ ಹಂತದ ನಂತರ ನಿಮಗೆ ಬಿಡುವನ್ನು ಒದಗಿಸುತ್ತದೆ.

ಅದೃಷ್ಟ ಸಂಖ್ಯೆ: 2

ಕರ್ಕಾಟಕ(7 ಆಗಸ್ಟ್, 2018)

ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಆಸ್ಪತ್ರೆಗೆ ಭೇಟಿ ನೀಡಬೇಕಾಗಬಹುದು. ಆವತ್ತಿಗಾಗಿ ಮಾತ್ರ ಬದುಕುವ ಮತ್ತು ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿಯನ್ನು ನಿಯಂತ್ರಿಸಿ. ಸ್ನೇಹಿತರ ಸಮಸ್ಯೆಗಳು ನಿಮಗೆ ಕೆಟ್ಟದೆನಿಸುವಂತೆ ಮಾಡಬಹುದು. ನಿಮ್ಮ ಪ್ರೀತಿಪಾತ್ರರನ್ನು ಸಂತೋಷಪಡಿಸುವುದು ಕಷ್ಟವಾಗುತ್ತದೆ. ನೀವು ಯಾವುದೇ ದುಬಾರಿ ಸಾಹಸಕ್ಕೆ ಕೈಹಾಕುವ ಮೊದಲು ನಿಮ್ಮ ವಿವೇಚನೆ ಬಳಸಿ. ನೀವು ಶಕ್ತಿಶಾಲಿ ಸ್ಥಳಗಳಲ್ಲಿರುವವರ ಜೊತೆ ಒಡನಾಡುವ ಅಗತ್ಯವಿದೆ. ಇಂದು, ನಿಮ್ಮ ಸಂಗಾತಿಯ ಜೊತೆಗಿನ ಒಂದು ಜಗಳದಿಂದಾಗಿ ನಿಮ್ಮ ವೈವಾಹಿಕ ಬಂಧ ಶಿಥಿಲಗೊಂಡಿದೆಯೆಂದು ನೀವು ಭಾವನಾತ್ಮಕವಾಗಿ ಭಾವಿಸಬಹುದು.

ಅದೃಷ್ಟ ಸಂಖ್ಯೆ: 5

ಸಿಂಹ(7 ಆಗಸ್ಟ್, 2018)

ಉತ್ತಮ ಆರೋಗ್ಯ ಏನಾದರೂ ಅಸಾಮಾನ್ಯವಾಗಿದ್ದನ್ನು ಸಾಧಿಸಲು ಸಾಧ್ಯವಾಗಿಸುವ ಒಂದು ವಿಶೇಷ ದಿನ. ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಮನೆಯ ವಿಷಯಗಳು ಮತ್ತು ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ನೀವು ಇಂದು ಪ್ರೀತಿ ಮಾಡುವ ಅವಕಾಶವನ್ನು ಕಳೆದುಕೊಳ್ಳದಿದ್ದಲ್ಲಿ, ನಿಮ್ಮ ಇಡೀ ಜೀವನದಲ್ಲಿ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ. ಮನರಂಜನೆ ಮತ್ತು ಉಲ್ಲಾಸಕ್ಕಾಗಿ ಒಳ್ಳೆಯ ದಿನವಾದರೂ ನೀವು ಕೆಲಸ ಮಾಡುತ್ತಿದ್ದಲ್ಲಿ ನೀವು ನಿಮ್ಮ ವ್ಯವಹಾರಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ನಿಮ್ಮ ಜೀವನದ ಸಂಗಾತಿಯ ಆಂತರಿಕ ಸೌಂದರ್ಯ ಇಂದು ಎದ್ದು ಕಾಣುತ್ತದೆ.

ಅದೃಷ್ಟ ಸಂಖ್ಯೆ: 4

ಕನ್ಯಾ(7 ಆಗಸ್ಟ್, 2018)

ನಿಮ್ಮ ಹಠಾತ್ ಪ್ರವೃತ್ತಿ ನಿಮಗೆ ಗಂಭೀರವಾದ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು. ಇಂದು ನೀವು ಭೂಮಿ, ವಸತಿ, ಅಥವಾ ಸಾಂಸ್ಕೃತಿಕ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಬೇಕು. ಒಬ್ಬ ದೂರದ ಸಂಬಂಧಿಯಿಂದ ಒಂದು ಅನಿರೀಕ್ಷಿತ ಸಂದೇಶ ಇಡೀ ಕುಟುಂಬಕ್ಕೆ ಸಂಭ್ರಮ ತರುತ್ತದೆ. ನಿಮ್ಮ ವಿಚಿತ್ರ ವರ್ತನೆ ನಿಮ್ಮ ಪ್ರೀತಿಪಾತ್ರರ ಜೊತೆಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಯಾವುದೇ ಪ್ರಮಾಣವನ್ನು ನೀವು ಪೂರೈಸುವ ಖಚಿತತೆಯಿಲ್ಲದಿದ್ದರೆ ಅಂಥ ಪ್ರಮಾಣ ಮಾಡಬೇಡಿ. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ಇದು ಕಠಿಣವಾದ ದಿನವಾಗಲಿದೆ; ಆದರೆ ತಾಳ್ಮೆ ಮತ್ತು ಶಾಂತಿ ಎಲ್ಲ ಅಡಚಣೆಯನ್ನೂ ಗೆಲ್ಲಬಹುದು.

ಅದೃಷ್ಟ ಸಂಖ್ಯೆ: 2

ತುಲಾ(7 ಆಗಸ್ಟ್, 2018)

ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ನೀವು ಇಂದು ನಿಮ್ಮ ಮನೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ. ರಹಸ್ಯ ಪ್ರಣಯಗಳು ನಿಮ್ಮ ಖ್ಯಾತಿಯನ್ನು ನಾಶಮಾಡಬಹುದು. ನಿಮ್ಮ ಸಹೋದ್ಯೋಗಿಗಳು ಎಂದಿಗಿಂತಲೂ ಉತ್ತಮವಾಗಿ ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ. ಶಾಪಿಂಗ್ ಮತ್ತು ಇತರ ಚಟುವಟಿಕೆಗಳು ನಿಮ್ಮನ್ನು ದಿನವಿಡೀ ಬಿಡುವಿಲ್ಲದಂತಿಡುತ್ತವೆ. ವೈವಾಹಿಕ ಜೀವನ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ; ನೀವು ಕೆಲವನ್ನು ಇಂದು ಎದುರಿಸಬೇಕಾಗಬಹುದು.

ಅದೃಷ್ಟ ಸಂಖ್ಯೆ: 5

ವೃಶ್ಚಿಕ(7 ಆಗಸ್ಟ್, 2018)

ನಿರಾಶಾದಾಯಕ ಮನೋಭಾವವು ಕೇವಲ ನಿಮ್ಮ ಅವಕಾಶಗಳನ್ನು ಸೀಮಿತಗೊಳಿಸುವುದಷ್ಟೇ ಅಲ್ಲದೇ ದೇಹದ ಸಾಮರಸ್ಯವನ್ನೂ ಭಂಗಪಡಿಸುವುದರಿಂದ ಅವುಗಳನ್ನು ತಡೆಯಬೇಕು. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮ ಸ್ನೇಹಿತರು ನಿಮಗೆ ಅವರ ಅವಶ್ಯಕತೆ ಅತ್ಯಂತ ಹೆಚ್ಚಿದ್ದಾಗ ನಿಮ್ಮನ್ನು ನಿರಾಸೆಗೊಳಿಸಬಹುದು. ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ. ಇಂದು ನಿಮಗೆಲ್ಲರಿಗೂ ತುಂಬ ಸಕ್ರಿಯವಾದ ಮತ್ತು ಹೆಚ್ಚು ಸಾಮಾಜಿಕವಾದ – ಜನರು ನಿಮ್ಮಿಂದ ಸಲಹೆ ಪಡೆಯಬಯಸುತ್ತಾರೆ ಮತ್ತು ನೀವು ಏನೇ ಹೇಳಿದರೂ ಅದನ್ನು ಒಪ್ಪುತ್ತಾರೆ. ನಿಮ್ಮ ವಸ್ತುಗಳ ಬಗ್ಗೆ ಅಸಡ್ಡೆ ಹೊಂದಿದ್ದಲ್ಲಿ ನಷ್ಟ ಅಥವಾ ಕಳ್ಳತನ ಆಗಬಹುದು. ಇದು “ಉನ್ಮತ್ತತೆಯ” ದಿನ! ನೀವು ನಿಮ್ಮ ಸಂಗಾತಿಯ ಜೊತೆಗೆ ಪ್ರೀತಿ ಮತ್ತು ಪ್ರೇಮದ ಉತ್ಕಟತೆಯನ್ನು ತಲುಪುತ್ತೀರಿ.

ಅದೃಷ್ಟ ಸಂಖ್ಯೆ: 6

ಧನಸ್ಸು(7 ಆಗಸ್ಟ್, 2018)

ಕೆಲವು ಬಿಕ್ಕಟ್ಟುಗಳು ಮತ್ತು ಭಿನ್ನಾಭಿಪ್ರಾಯಗಳು ನಿಮಗೆ ಕಿರಿಕಿರಿ ಹಾಗೂ ಆತಂಕವನ್ನು ತರಬಹುದು. ನಿಮ್ಮ ಅವಾಸ್ತವಿಕ ಯೋಜನೆ ಹಣದ ಕೊರತೆಗೆ ಕಾರಣವಾಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ನಿಮ್ಮನ್ನು ಚಿಂತೆಗೀಡುಮಾಡಬಹುದು. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ಪ್ರಮುಖ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರ ಒತ್ತಡಕ್ಕೆ ಮಣಿಯಬೇಡಿ. ನಿಮ್ಮ ದಾರಿಯಲ್ಲಿ ಯಾರೇ ಬಂದರೂ ಸಭ್ಯರೂ ಮತ್ತು ಆಕರ್ಷಕರೂ ಆಗಿರಿ – ನಿಮ್ಮ ಇಂದ್ರಜಾಲದಂಥ ಆಕರ್ಷಣೆಯ ಹಿಂದಿನ ರಹಸ್ಯ ಕಲವರಿಗೆ ಮಾತ್ರವೇ ತಿಳಿದಿದೆ. ಇಂದು ನೀವು ಮತ್ತು ನಿಮ್ಮ ಸಂಗಾತಿ ಪ್ರೀತಿಗೆ ಸಾಕಷ್ಟು ಸಮಯ ಪಡೆಯುತ್ತೀರೆಂದು ತೋರುತ್ತಿದೆ.

ಅದೃಷ್ಟ ಸಂಖ್ಯೆ: 3

ಮಕರ(7 ಆಗಸ್ಟ್, 2018)

ನೀವು ಕೆಲವು ಉನ್ನತ ವ್ಯಕ್ತಿಗಳನ್ನು ಭೇಟಿಯಾಗಬಹುದಾದ್ದರಿಂದ ಗಾಬರಿಯಾಗಬೇಡಿ ಮತ್ತು ವಿಶ್ವಾಸ ಕಳೆದುಕೊಳ್ಳದಿರಿ. ಇದು ವ್ಯಾಪಾರಕ್ಕೆ ಬಂಡವಾಳದಂತೆ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ. ಮನರಂಜನೆ ಮತ್ತು ವೈಭೋಗಗಳ ಮೇಲೆ ಅತಿಯಾಗಿ ಖರ್ಚು ಮಾಡಬೇಡಿ. ಸ್ನೇಹಿತರು ಮತ್ತು ಹತ್ತಿರದವರು ನಿಮಗೆ ತಮ್ಮ ಸಹಾಯ ಹಸ್ತ ಚಾಚುತ್ತಾರೆ. ಪ್ರೀತಿಯ ಜೀವನ ಇಂದು ನಿಜವಾಗಿಯೂ ಸುಂದರವಾಗಿ ಅರಳುತ್ತದೆ. ನೀವು ಸಮಯವೇ ಹಣವೆಂದು ನೀವು ನಿಮ್ಮ ಅತ್ಯುತ್ತಮ ಸಂಭಾವ್ಯತಯನ್ನು ತಲುಪಲು ಹೆಜ್ಜೆಗಳನ್ನಿಡಬೇಕು. ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಸಂಗಾತಿಯ ಜೊತೆ ಇಂದು ನೀವು ನಿಜವಾಗಿಯೂ ರೋಮಾಂಚಕಾರಿಯಾದದ್ದನ್ನು ಮಾಡುತ್ತೀರಿ .

ಅದೃಷ್ಟ ಸಂಖ್ಯೆ: 3

ಕುಂಭ(7 ಆಗಸ್ಟ್, 2018)

ನಿಮ್ಮ ಜಗಳಗಂಟ ನಡವಳಿಕೆ ನಿಮ್ಮ ಸಂಬಂಧವನ್ನು ಶಾಶ್ವತವಾಗಿ ಹಾಳು ಮಾಡಬಹುದಾದ್ದರಿಂದ ಅದನ್ನು ನಿಯಂತ್ರಣದಲ್ಲಿಡಿ. ನೀವು ತೆರೆದ ಮನಸ್ಸನ್ನು ಹೊಂದುವ ಮೂಲಕ ಮತ್ತು ಯಾರಾದರ ವಿರುದ್ಧ ಪೂರ್ವಾಗ್ರಹವನ್ನು ಕೈಬಿಡುವ ಮೂಲಕ ಇದರಿಂದ ಹೊರಬರಬಹುದು. ದೀರ್ಘಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕು. ತಪ್ಪು ಸಮಯದಲ್ಲಿ ತಪ್ಪು ವಿಷಯಗಳನ್ನು ಹೇಳದಿರಲು ಪ್ರಯತ್ನಿಸಿ – ನೀವು ಪ್ರೀತಿಸುವವರನ್ನು ನೋಯಿಸದಂತೆ ಎಚ್ಚರ ವಹಿಸಿ. ನಿಮ್ಮ ಪ್ರೀಪಾತ್ರರಲ್ಲಿ ತಪ್ಪು ಹುಡುಕುತ್ತ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಕೆಲವರಿಗೆ ವೃತ್ತಿಪರ ಬೆಳವಣಿಗೆ. ನಿಮ್ಮ ಸಂವಹನ ತಂತ್ರಗಳು ಮತ್ತು ಕೆಲಸದ ಕೌಶಲಗಳು ಪರಿಣಾಮಕಾರಿಯಾಗಿರುತ್ತವೆ. ನಿಮ್ಮ ಸಂಗಾತಿ ನಿಮ್ಮ ಜೊತೆ ಸ್ವಲ್ಪ ವಿಚಿತ್ರವಾಗಿ ನಡೆದುಕೊಳ್ಳಬಹುದು. ನಿಮ್ಮ ತಾಳ್ಮೆ ಕದಡಲು ಬಿಡಬೇಡಿ.

ಅದೃಷ್ಟ ಸಂಖ್ಯೆ: 1

ಮೀನ(7 ಆಗಸ್ಟ್, 2018)

ನಿಮ್ಮ ಮುಖದಲ್ಲಿ ನಿರಂತರವಾದ ನಗುವಿರುವ ಮತ್ತು ಅಪರಿಚಿತರೂ ಪರಿಚಿತರಂತೆ ತೋರುವ ಒಂದು ದಿನ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ನೀವು ನಂಬುವ ಯಾರಾದರೂ ನಿಮಗೆ ಸಂಪೂರ್ಣ ನಿಜ ಹೇಳದಿರಬಹುದು – ಇತರರು ಮನವೊಲಿಸುವ ನಿಮ್ಮ ಸಾಮರ್ಥ್ಯ ಬರುವ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಏಕಪಕ್ಷೀಯ ವ್ಯಾಮೋಹ ನಿಮಗೆ ಕೇವಲ ಎದೆಗುದಿ ತರುತ್ತದೆ. ಇದು ಕಠಿಣವಾದ ದಿನವಾಗಲಿದೆ; ಆದರೆ ತಾಳ್ಮೆ ಮತ್ತು ಶಾಂತಿ ಎಲ್ಲ ಅಡಚಣೆಯನ್ನೂ ಗೆಲ್ಲಬಹುದು. ಇಂದು ನೀವು ಪ್ರಮುಖ ಸಮಸ್ಯೆಗಳ ಮೇಲೆ ಗಮನ ನೀಡಬೇಕು. ನಿಮ್ಮ ಸಂಗಾತಿಯ ವರ್ತನೆ ಇಂದು ನಿಮ್ಮ ವೃತ್ತಿಪರ ಸಂಬಂಧಗಳಿಗೆ ತೊಂದರೆಯನ್ನುಂಟುಮಾಡಬಹುದು.

ಅದೃಷ್ಟ ಸಂಖ್ಯೆ: 8

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here