ಜಮ್ಮು ಮತ್ತು ಕಾಶ್ಮೀರದ ಶ್ರೀನಗರ  ಹೊರವಲಯದಲ್ಲಿ ಬುಧವಾರ ಸಂಭವಿಸಿದ ಭಯೋತ್ಪಾದಕ ದಾಳಿಯಲ್ಲಿ ಬಿಎಸ್‌ಎಫ್‌ನ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.ಗಡಿಭದ್ರತಾ ಪಡೆಯ ಸಿಬ್ಬಂದಿ ಸೌರಾ ಪ್ರದೇಶದಲ್ಲಿ ಗಸ್ತು ಕಾರ್ಯನಿರ್ವಹಿಸುತ್ತಿದ್ದಾಗ ಈ ಉಗ್ರರ ದಾಳಿ ನಡೆದಿದೆ.

ಶ್ರೀನಗರದಿಂದ 17 ಕಿ.ಮೀ ದೂರದ ಪಂದಾಹ ಎಂಬಲ್ಲಿ ಮೋಟಾರು ಸೈಕಲ್‌ನಲ್ಲಿ ಬಂದ ಉಗ್ರಗಾಮಿಗಳು ಈ ಕೃತ್ಯ ನಡೆಸಿದ್ದು ಗುಂಡೆನೇಟಿಗೆ ತೀವ್ರ ಗಾಯಗೊಂಡ ಭದ್ರತಾ ಪಡೆಯ ಯೋಧರನ್ನು ಆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಗಾಯಾಳು ಭದ್ರತಾ ಯೋಧರಲ್ಲಿ ಓರ್ವರು ಆಸ್ಪತ್ರೆಗೆ ತರುವಷ್ಟರಲ್ಲಿಯೇ ಕೊನೆಯುಸಿರೆಳೆದ್ದಾರೆಂದು ವೈದ್ಯರು ಘೋಷಿಸಿದ್ದರೆ, ಮತ್ತೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರೂ ಯೋಧರು ೩೫ ಹಾಗೂ ೩೬ ವರ್ಷದವರಾಗಿದ್ದು ಉಗ್ರರು ಹಾರಿಸಿದ ಗುಂಡುಗಳು ಅವರ ತಲೆಯೊಳಗೆ ಸೇರಿದ್ದವು.ಏತನ್ಮಧ್ಯೆ ಭದ್ರತಾ ಪಡೆ ಸಿಬ್ಬಂದಿ ಸಂಪೂರ್ಣ ಪ್ರದೇಶವನ್ನು ಸುತ್ತುವರೆದು ಉಗ್ರರಿಗಾಗಿ ಶೋಧ ನಡೆಸುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here