ಸಿನಿಮಾ ರಂಗದಲ್ಲಿ ಪ್ರಸ್ತುತ ಕನ್ನಡ ಮಣ್ಣಿನ ನಟಿಯರು ಮಿಂಚುತ್ತಿದ್ದಾರೆ. ನೆರೆಯ ಟಾಲಿವುಡ್ ನಿಂದ ಹಿಡಿದು ಬಾಲಿವುಡ್ ನಲ್ಲೂ ಕೂಡಾ ಕನ್ನಡತಿಯರೇ ಮಿಂಚುತ್ತಿದ್ದಾರೆ. ಅದು ಮಾತ್ರವೇ ಅಲ್ಲದೆ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರ ಕಡೆ ಸಿನಿಮಾ ರಂಗ ನೋಡುತ್ತಿದೆ. ಹೀಗೆ ಸ್ಯಾಂಡಲ್ ವುಡ್ ಎಲ್ಲರ ಗಮನ ಸೆಳೆಯುವಾಗಲೇ, ಸ್ಯಾಂಡಲ್ ವುಡ್ ನಟಿ ಮಣಿಯೊಬ್ಬರು ಟಾಲಿವುಡ್ ಗೆ ಎಂಟ್ರಿ ನೀಡಲು ಸಿದ್ಧವಾಗಿದ್ದು, ಅದಕ್ಕೆ ಈಗಾಗಲೇ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ. ಇಷ್ಟಕ್ಕೂ ಇಲ್ಲಿಂದ ಟಾಲಿವುಡ್ ಗೆ ಹಾರುತ್ತಿರುವ ಕನ್ನಡ ನಟಿ ಯಾರೆಂದು ತಿಳಿಯುವ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಈಗಾಗಲೇ ರಶ್ಮಿಕಾ, ಪೂಜಾ ಹೆಗ್ಡೆ , ಶ್ರದ್ಧಾ ಶ್ರೀ ನಾಥ್, ನಭಾ ನಟೇಶ್ ಅವರು ಟಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಿದ್ದು, ಈಗ ಆ ಸಾಲಿಗೆ ಸೇರ್ಪಡೆಯಾಗುತ್ತಿರುವ ನಟಿ ಸ್ಯಾಂಡಲ್ ವುಡ್ ಮ ಡಿಂಪಲ್ ಕ್ವೀನ್ ಖ್ಯಾತಿಯ ರಚಿತಾ ರಾಮ್. ಹೌದು ರಚಿತಾ ರಾಮ್ ಅವರಿಗೆ ತೆಲುಗು ಸಿನಿಮಾವೊಂದರಲ್ಲಿ ಉತ್ತಮ ಅವಕಾಶ ದೊರೆತಿದೆ. ತೆಲುಗಿನ ಸುಪ್ರಸಿದ್ಧ ನಟ ನಂದಮೂರಿ ಬಾಲಕೃಷ್ಣ ಅವರ ಅಭಿನಯದ 106 ನೇ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಎನ್ನುವುದು ಬಹುತೇಕ ಖಚಿತ ಎನ್ನಲಾಗಿದೆ.

ನಂದಮೂರಿ ಬಾಲಕೃಷ್ಣ ಅವರ ಜೊತೆ ನಟಿಸುವ ಅವಕಾಶವನ್ನು ಯಾರು ತಾನೇ ನಿರಾಕರಿಸಲು ಇಷ್ಟ ಪಡುವರು? ರಚಿತಾರನ್ನು ಈಗಾಗಲೇ ಅಪ್ರೋಚ್ ಮಾಡಲಾಗಿದ್ದು, ಅಫಿಷಿಯಲ್ ಆಗಿ ಘೋಷಣೆ ಮಾಡುವುದೊಂದೇ ಬಾಕಿ ಇದೆ ಎನ್ನಲಾಗಿದೆ. ಎಲ್ಲಾ ಸರಿಯಾಗಿ ನಡೆದರೆ ಇದೇ ಡಿಸೆಂಬರ್ 20ರಿಂದ ಬಾಲಯ್ಯ ಮತ್ತು ರಚಿತಾ ಅವರ ಜೋಡಿಯಲ್ಲಿ ಬೋಯಪಾಟಿ ಶ್ರೀನು ಅವರ ಇನ್ನೂ ಹೆಸರಿಡದ ಸಿನಿಮಾಗೆ ಚಾಲನೆ ಕೊಡಲಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here