ನಿರ್ಭಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ಕು ಜನ ಅಪರಾಧಿಗಳಿಗೆ ನಾಳೆ ಗಲ್ಲು ಶಿಕ್ಷೆ ಪಕ್ಕಾ ಆಗಿದೆ‌. ಕಳೆದ ಕೆಲವು ವರ್ಷಗಳಿಂದಲೂ ಈ ಅಪರಾಧಿಗಳ ಶಿಕ್ಷೆ ಆಗಬೇಕೆಂದು ಅಸಂಖ್ಯ ಭಾರತೀಯರು ಕೋರಿದ್ದರು‌. ಮರಣ ದಂಡನೆಗೆ ತಡೆ ನೀಡಬೇಕೆಂದು ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಪಟಿಯಾಲ ಕೋರ್ಟ್ ತಿರಸ್ಕಾರ ಮಾಡಿದೆ. ಆದ ಕಾರಣ ಈ ಮೊದಲೇ ನೀಡಿದ್ದ ಆದೇಶದಂತೆ ನಾಳೆ ಬೆಳಿಗ್ಗೆ 5:30 ಕ್ಕೆ ನಾಲ್ಕು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಲ್ಲದೆ ನಿರ್ಭಯಾ ಹಂತಕರ ಶಿಕ್ಷೆಗಾಗಿ ಹೋರಾಟ ಮಾಡಿದ್ದವರಿಗೊಂದು ಉತ್ತರ ನಾಳೆ ಸಿಗುವುದು ಖಚಿತ ಎನ್ನಲಾಗಿದ್ದು, ಇದು ನಿರ್ಭಯಾ ಅವರ ತಾಯಿಯ ಕಣ್ಣೀರಿಗೆ ಉತ್ತರವಾಗಲಿದೆ.

ನಿರ್ಭಯಾ ಪ್ರಕರಣದ ನಾಲ್ಕು ಜನ ಅಪರಾಧಿಗಳು ಅಕ್ಷಯ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ ಹಾಗೂ ಮುಖೇಶ್ ಸಿಂಗ್ ಈ ನಾಲ್ಕು ಜನ ಅಪರಾಧಿಗಳಿಗೂ ನಾಳೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ತಮಗೆ ಇನ್ನೂ ಕಾನೂನಿನ ಅವಕಾಶಗಳು ಇದ್ದು, ಗಲ್ಲು ಶಿಕ್ಷೆಗೆ ತಡೆಯನ್ನು ನೀಡಬೇಕು ಎಂದು ಅಪರಾಧಿಗಳು ಕೋರ್ಟ್ ಮುಂದೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹ್ಮದ್ ಅವರು ಸದ್ಯಕ್ಕೆ ಕಾನೂನಿನ ಯಾವುದೇ ಅವಕಾಶ ಕೂಡಾ ಬಾಕಿ ಇಲ್ಲ ಎಂದು ತಿಳಿಸಿದ್ದಾರೆ.

ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ನ ಎರಡನೇ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ಪರಿಗಣಿಸಿಲ್ಲವೆಂದು ಅವರು ಕೋರ್ಟ್ ಗೆ ತಿಳಿಸಿದ್ದಾರೆ. ಕೋರ್ಟ್ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಕಾರಣದಿಂದ ನಾಳೆ ಬೆಳಿಗ್ಗೆ ಈ ನಾಲ್ಕು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪಕ್ಕಾ ಎಂದೇ ಹೇಳಲಾಗಿದೆ. ಈ ಮೂಲಕ ನಿರ್ಭಯಾ ಪ್ರಕರಣಕ್ಕೆ ನ್ಯಾಯ ಸಿಗಲಿದೆ ಎಂಬುದು ಈಗ ಎಲ್ಲರ ಅಭಿಪ್ರಾಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here