
ನೆನ್ನೆ ಮೈತ್ರಿ ಸರ್ಕಾರಕ್ಕೆ ಮೈತ್ರಿ ಸರ್ಕಾರದ 11 ಜನ ಶಾಸಕರು ರಾಜೀನಾಮೆ ಕೊಡುವ ಮೂಲಕ ದೇಶಾದ್ಯಂತ ನಾಡಿನ ರಾಜಕೀಯದ ಸುದ್ದಿ ಚರ್ಚರಯಲ್ಲಿರುವಂತೆ ಮಾಡಿದ್ದರು. ನೆನ್ನೆ ಶಾಸಕರು ಕೊಟ್ಟಿರುವ ರಾಜಿನಾಮೆಯಿಂದ ಮೈತ್ರಿ ಸರ್ಕಾರದ ನಾಯಕರು ಶಾಕ್ ಗೆ ಒಳಗಾಗಿದ್ದು ಸರ್ಕಾರವನ್ನು ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅತ್ತ ಕೆಲ ಶಾಸಕರು ಮುಂಬಯಿ ನಗರದ ಖಾಸಗಿ ಹೋಟೆಲ್ ನಲ್ಲಿ ಮುಂದಿನ ನಡೆಯ ಬಗ್ಹೆ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತ ರಾಜ್ಯದ ಕಾಂಗ್ರೆಸ್ ನಾಯಕರು ಸರ್ಕಾರ ಉಳಿಸಿಕೊಳ್ಳುವ ದಾರಿ ಹುಡುಕುತ್ತಿರುವಾಗಲೇ ಮತ್ತೊಂದು ಸುದ್ದಿ ಮೈತ್ರಿ ಸರ್ಕಾರದ ನಾಯಕರಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ.
ಈಗಾಗಲೇ 14 ಜನ ಶಾಸಕರು ದೋಸ್ತಿ ಪಾಳಯದಿಂದ ಹೊರ ನಡೆದಿದ್ದಾರೆ. ದೋಸ್ತಿ ಸರಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದು ಸೋಮವಾರ ಮತ್ತೆ 10 ಜನ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಗಟ್ಟಿಯಾಗುತ್ತಿವೆ.ಇದಕ್ಕೆ ಪೂರಕವೆಂಬಂತೆ ನಾಳೆ ರಾಜಿನಾಮೆ ನೀಡುವ ಶಾಸಕರ ಹೆಸರುಗಳು ಸಹ ಬಹಿರಂಗವಾಗಿದ್ದು ನಾಳೆಗೆ ಮತ್ತಷ್ಟು ಶಾಸಕರು ಮೈತ್ರಿಯ ನಾಯಕರಿಗೆ ತಲೆನೋವಾಗಲಿದ್ದಾರೆ.
ಹಾಗಾದರೆ ರಾಜೀನಾಮೆ ನೀಡಲಿರುವ 10 ಶಾಸಕರು ಯಾರು? ರಾಜೀನಾಮೆ ನೀಡಲಿರುವ ಸಂಭಾವ್ಯರ ಪಟ್ಟಿ ಇಲ್ಲಿದೆ..
1. ಎಸ್.ಎನ್ ಸುಬ್ಬಾರೆಡ್ಡಿ -ಬಾಗೇಪಲ್ಲಿ – ಕಾಂಗ್ರೆಸ್
2. ಅಂಜಲಿ ನಿಂಬಾಳ್ಕರ್- ಖಾನಾಪುರ – ಕಾಂಗ್ರೆಸ್
3. ಶ್ರೀಮಂತ ಪಾಟೀಲ್-ಕಾಗವಾಡ – ಕಾಂಗ್ರೆಸ್
4. ಅನಿಲ್ ಚಿಕ್ಕಮಾದು-ಎಚ್.ಡಿ.ಕೋಟೆ – ಕಾಂಗ್ರೆಸ್
5. ಗಣೇಶ್ ಹುಕ್ಕೇರಿ- ಚಿಕ್ಕೋಡಿ -ಸದಲಗಾ – ಕಾಂಗ್ರೆಸ್
6. ಡಾ. ಕೆ.ಸುಧಾಕರ್-ಚಿಕ್ಕಬಳ್ಳಾಪುರ – ಕಾಂಗ್ರೆಸ್
7. ಎಷ್.ಎನ್.ನಾರಾಯಣಸ್ವಾಮಿ -ಬಂಗಾರಪೇಟೆ ಕಾಂಗ್ರೆಸ್
8. ನಾಗೇಂದ್ರ- ಬಳ್ಳಾರಿ ಕಾಂಗ್ರೆಸ್
9. ನಿಸರ್ಗ ನಾರಾಯಣಸ್ವಾಮಿ-ದೇವನಹಳ್ಳಿ – ಜೆಡಿಎಸ್
10. ಕೆ.ಶ್ರೀನಿವಾಸ ಗೌಡ-ಕೋಲಾರ – ಜೆಡಿಎಸ್
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.