ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೇ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ. ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳ ಈ ಸರಣಿಯಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಅಬ್ಬರ ಇರುತ್ತದೆ. ಪ್ರತಿ ಐಪಿಎಲ್ ಟೂರ್ನಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಸ್ಫೋಟಕ ಬ್ಯಾಟಿಂಗ್, ಆಕರ್ಷಕ ಶತಕಗಳು ಚುಟುಕು ಕ್ರಿಕೆಟ್ ಟೂರ್ನಿಯ ಕಳೆ ಹೆಚ್ಚಿಸಿದೆ. ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸುವುದು ಸುಲಭದ ಮಾತಲ್ಲ. ಕೆಲ ಬ್ಯಾಟ್ಸ್‌ಮನ್‌ಗಳು ಐಪಿಎಲ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಗರಿಷ್ಠ ಶತಕ ಸಿಡಿಸಿದ ಸಾಧಕರ ಲಿಸ್ಟ್ ಇಲ್ಲಿದೆ.

1 ಕ್ರಿಸ್ ಗೇಲ್
ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತೀಯರ ನೆಚ್ಚಿನ ಕ್ರಿಕೆಟಿಗನಾಗಿರುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್, ಗರಿಷ್ಠ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಕಳೆದ 11 ಆವೃತ್ತಿಗಳಲ್ಲಿ ಗೇಲ್ ಒಟ್ಟು 6 ಶತಕ ಸಿಡಿಸಿದ್ದಾರೆ.ಈ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

2 ವಿರಾಟ್ ಕೊಹ್ಲಿ
ಶತಕದ ಲಿಸ್ಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ 4 ಶತಕ ಸಿಡಿಸಿದ್ದಾರೆ. ವಿಶೇಷ ಅಂದರೆ 2016ನೇ ಆವೃತ್ತಿಯಲ್ಲಿ ಕೊಹ್ಲಿ 4 ಶತಕ ಸಿಡಿಸಿದ್ದಾರೆ.


3 ಶೇನ್ ವಾಟ್ಸನ್
ಐಪಿಎಲ್ ಟೂರ್ನಿಯ ಯಶಸ್ವಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಶೇನ್ ವ್ಯಾಟ್ಸ್‌ನ್ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಬುತ ಪ್ರದರ್ಶನ ನೀಡಿದ್ದರು. ಸಿಎಸ್‌ಕೆ, ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಅಬ್ಬರಿಸಿರುವ ವ್ಯಾಟ್ಸ್‌ನ್ 4 ಸೆಂಚುರಿ ಸಿಡಿಸಿದ್ದಾರೆ.


4 ಎಬಿ ಡಿವಿಲಿಯರ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಮನೆ ಮಾತಾಗಿದ್ದಾರೆ. ಮೊದಲು ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿದ್ದ ಎಬಿಡಿ, ಆರ್‌ಸಿಬಿ ತಂಡದಲ್ಲಿ ಫಾರ್ಮ್ ಕಂಡುಕೊಂಡರು. ಎಬಿಡಿ ಐಪಿಎಲ್ ಟೂರ್ನಿಯಲ್ಲಿ 3 ಶತಕ ಸಿಡಿಸಿದ್ದಾರೆ.


5 ಡೇವಿಡ್ ವಾರ್ನರ್
ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 2009 ರಿಂದ 2013ರ ವರೆಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದರು. 2010ರಲ್ಲಿ ಮೊದಲ ಸೆಂಚುರಿ ಸಿಡಿಸಿದ ವಾರ್ನರ್, 2014ರಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡರು. ಐಪಿಎಲ್ ಟೂರ್ನಿಯಲ್ಲಿ ವಾರ್ನರ್ ಒಟ್ಟು 3 ಶತಕ ದಾಖಲಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here