ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವುದು ಕಂಡು ಬರುತ್ತಿರುತ್ತದೆ. ಕಾನೂನು ತಮಗಲ್ಲವೆಂಬಂತೆ ಇರುತ್ತದೆ ಅವರ ವರ್ತನೆ.‌ ಹಾಗೇನಾದರೂ ಸಿಕ್ಕಿಬಿದ್ದರೂ ಕೂಡಾ ತಮ್ಮ ಅಧಿಕಾರವನ್ನು, ಯಾರೋ ಪ್ರಭಾವಿಗಳ ಸಂಪರ್ಕದಿಂದಲೋ ಅದರಿಂದ ಪಾರಾಗಿ ಬಿಡುತ್ತಾರೆ. ಆದರೆ ಇಂತಹ ಚಟುವಟಿಕೆಗಳನ್ನು ತಡೆಯಲು ನಿರ್ಧರಿಸಿದ್ದಾರೆ ದೆಹಲಿ ಸಂಚಾರಿ ಪೋಲಿಸರು. ಅವರು ಉನ್ನತ ಅಧಿಕಾರಿಗಳು ಸ್ವತಃ ಚಾಲನೆ ಮಾಡುತ್ತಾ ಅಥವಾ ಅವರ ಚಾಲಕರು ವಾಹನವನ್ನು ಚಲಾಯಿಸುವಾಗ ರಸ್ತೆ ನಿಯಮವನ್ನು ಉಲ್ಲಂಘನೆ ಮಾಡಿದರೆ, ಈಗ ಹೆಚ್ಚಿಸಿರುವ ನೂತನ ದಂಡದ ದುಪ್ಪಟ್ಟು ದಂಡವನ್ನು ಅಧಿಕಾರಿಗಳಿಗೆ ವಿಧಿಸಲಾಗುವುದು ಎಂದಿದ್ದಾರೆ.

ಮೋಟಾರು ವಾಹನ ಕಾಯ್ದೆ, 1988ರ 210-ಬಿ ವಿಧಿಯನ್ವಯ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ. ದೆಹಲಿ ಸಂಚಾರ ಪೊಲೀಸರು ಈ ವಿಧಿಯನ್ನು 2013 ರ ಏಪ್ರಿಲ್ ನಲ್ಲಿ 22 ರಂದು ತಿದ್ದುಪಡಿ ಮಾಡಿದ್ದರು, ಮತ್ತೊಮ್ಮೆ 2014 ರ ಆಗಸ್ಟ್ ನ 14 ರಂದು ಇದನ್ನು ಮರುತಿದ್ದುಪಡಿ ಮಾಡಲಾಗಿದೆಯೆನ್ನಲಾಗಿದೆ.
ಈ ಮರುತಿದ್ದುಪಡಿಯ ಪ್ರಕಾರ ಸಂಚಾರ ನಿಯಮ ಉಲ್ಲಂಘಿಸಿರುವ ಸರ್ಕಾರಿ ಅಧಿಕಾರಿಗಳು, ಅವರು ಪ್ರಯಾಣಿಸುತ್ತಿರುವ ವಾಹನಗಳ ಚಾಲಕರು, ಪೋಲಿಸ್ ಇಲಾಖೆ, ಪೊಲೀಸ್​ ಸಿಬ್ಬಂದಿಗೆ ಹಾಲಿ ಇರುವ ಜುಲ್ಮಾನೆಗಿಂತ ಎರಡು ಪಟ್ಟು ಜುಲ್ಮಾನೆ ವಿಧಿಸಲು ಅವಕಾಶವಿದೆ.

ಈ ವಿಚಾರವನ್ನು ದೆಹಲಿ ಪೊಲೀಸ್​ನ ಜಂಟಿ ಆಯುಕ್ತೆ (ಸಂಚಾರ ಕಾರ್ಯಾಚರಣೆ) ಮೀನು ಚೌಧರಿ ಹೇಳಿದ್ದಾರೆ. ದೆಹಲಿಯಲ್ಲಿ ಪೋಲಿಸ್ ಪಡೆಯ ಸಿಬ್ಬಂದಿಯೇ ಹೆಚ್ಚು ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿ ಸಿಕ್ಕಿ ಬಿದ್ದಿರುವ ಕಾರಣದಿಂದ, ಇಂತಹುದೊಂದು ಆದೇಶವನ್ನು ಹೊರಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಮೂಲಕ ರಸ್ತೆ ನಿಯಮ ಉಲ್ಲಂಘನೆ ಮಾಡಿದ ಅಧಿಕಾರಿಗಳು ಸಾಮಾನ್ಯ ಜನರು ತೆರುವ ದಂಡದ ದುಪ್ಪಟ್ಟು ದಂಡವನ್ನು ತೆರಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here