ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಎಂದರೆ ಅದೊಂದು ದೊಡ್ಡ ತಲೆ ನೋವು ಎಂದೇ ದಿನ ನಿತ್ಯ ಆ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುವವರು ಹೇಳುವ ಮಾತು. ಇನ್ನು ಟ್ರಾಫಿಕ್ ಕಂಟ್ರೋಲ್ ಎಂಬುದು ಟ್ರಾಫಿಕ್ ಪೋಲಿಸರಿಗೆ ಒಂದು ದೊಡ್ಡ‌ ಸವಾಲಿದ್ದಂತೆ. ರಸ್ತೆಯಲ್ಲಿ ನಿಂತು ಬಿಸಿಲು, ಗಾಳಿ,ಮಳೆ ಎಂಬುದನ್ನು ಲೆಕ್ಕಿಸದೆ ವಾಹನಗಳನ್ನು ಸರಿಯಾಗಿ ಹೋಗಲು ಅನುವು ಮಾಡಿಕೊಡಬೇಕಾದ ಗುರುತರ ಜವಾಬ್ದಾರಿ ಅವರ ಮೇಲಿರುತ್ತದೆ. ಹೀಗೆ ವಾಹನ ಸವಾರರಿಗೂ, ಟ್ರಾಫಿಕ್ ಪೋಲಿಸರಿಗೂ ಕೂಡಾ ಒಂದು ರೀತಿಯ ತಲೆ ನೋವಾಗಿರುವ ಈ ಟ್ರಾಫಿಕ್ ನಲ್ಲಿ ಕೂಡಾ ಒಂದು ಮನರಂಜನೆ ಸಿಕ್ಕರೆ ಹೇಗಿರುತ್ತದೆ ?

ಟ್ರಾಫಿಕ್ ನಲ್ಲಿ ಮನರಂಜನೆಯೇ? ಇದೆಂತ ಮಾತು ಎನ್ನುವುದಾದರೆ, ಇದಕ್ಕೆ ಉತ್ತರ ಇಲ್ಲಿದೆ. ಇಲ್ಲೊಬ್ಬರು ಟ್ರಾಫಿಕ್ ಪೋಲಿಸ್ ತಮ್ಮ ಜವಾಬ್ದಾರಿಯನ್ನು ಕೂಡಾ ಬಹಳ ಆಕರ್ಷಕ ಮಾಡಿದ್ದಾರೆ. ಅವರಿಗೆ ಕರ್ತವ್ಯ ನಿರ್ವಹಣೆ ಆಸಕ್ತಿ ಎನಿಸಿದರೆ, ಅವರ ಕರ್ತವ್ಯ ನಿರ್ವಹಣೆ ವಾಹನ ಸವಾರರಿಗೆ ಮನರಂಜನೆ ಎನಿಸಿದೆ. ಹೌದು ಇಂತಹ ವಿಶೇಷವಾದ ಘಟನೆ ನಡೆಯುತ್ತಿರುವುದು ಛತ್ತೀಸ್ ಘಡ್ ನಲ್ಲಿ. ಇಲ್ಲೊಬ್ಬರು ಟ್ರಾಫಿಕ್ ಪೋಲಿಸ್ ಅಧಿಕಾರಿಯು ಸಂಗೀತದ ಮೂಲಕ ಟ್ರಾಫಿಕ್ ನಿಯಂತ್ರಣ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಿತೇಂದರ್ ಶರ್ಮಾ ಎನ್ನುವವರು ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಟ್ರಾಪಿಕ್ ಪೊಲಿಸ್ ಮೈಕ್ ಹಿಡಿದು ಹಾಡು ಹೇಳುವ ಮೂಲಕ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದಾರೆ. ಜಿತೇಂದರ್ ಶರ್ಮಾ ಅವರು ಶೇರ್ ಮಾಡಿರುವ ವಿಡಿಯೋವನ್ನು ಈಗಾಗಲೇ 46,000 ಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದು, ಸಹಸ್ರಗಳ ಸಂಖ್ಯೆಯಲ್ಲಿ ಜನರು ಮೆಚ್ಚುಗೆಯನ್ನು ನೀಡುತ್ತಾ‌ ಸಾಗಿದ್ದಾರೆ. ನಿಜಕ್ಕೂ ಟ್ರಾಫಿಕ್ ಪೋಲಿಸ್ ಅವರ ಈ ಹೊಸ ತಂತ್ರ ಬಹಳ ಆಕರ್ಷಕ ಹಾಗೂ ಮನರಂಜನಾತ್ಮಕವಾಗಿ ಕೂಡಾ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here