ರೈಲಿನಲ್ಲಿ ಒಂದು ಮಿನಿ ದೇವಾಲಯ ಇದ್ದರೆ ಹೇಗೆ? ಬಹುಶಃ ಈ ಆಲೋಚನೆಯೇ ಬಹಳ ವಿಶೇಷ ಎನಿಸುವುದು ಮಾತ್ರವೇ ಅಲ್ಲದೇ ಇದು ಸಾಧ್ಯವಾ? ಎನಿಸದೇ ಕೂಡಾ ಇರಲಾರದು. ಆದರೆ ಈಗ ಒಂದು ಎಕ್ಸಪ್ರೆಸ್ ರೈಲಿನಲ್ಲಿನ ಸೀಟ್ ಮಿನಿ ದೇಗುಲವಾಗಿ ಪರಿವರ್ತನೆಯಾಗಿದೆ ಎಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಹಾಗಾದರೆ ಬನ್ನಿ ಎಲ್ಲಿ ಇಂತಹ ಒಂದು ವಿಶೇಷ ಮಿನಿ ದೇವಾಲಯ ನಮಗೆ ನೋಡಲು ಸಿಗುತ್ತದೆ, ಅದಾವ ರೈಲು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ವಾರಣಾಸಿ ಮತ್ತು ಇಂದೋರ ನ ನಡುವೆ ಸಂಚರಿಸುವ ಮಹಾಕಾಳ ಎಕ್ಸ್ ಪ್ರೆಸ್ ರೈಲಿನ ಒಂದು ಸೀಟು ಈಗ ಮಿನಿ ದೇವಾಲಯವಾಗಿದೆ.

ಕಾಶಿ ಮಹಾಕಾಳ ಎಕ್ಸ್ ಪ್ರೆಸ್ ರೈಲು ತನ್ನ ಸಂಚಾರದ ಮಾರ್ಗದಲ್ಲಿ ಮೂರು ಜ್ಯೋತಿರ್ಲಿಂಗಗಳಾದ ಇಂದೋರ್ ನ ಓಂಕಾರೇಶ್ವರ, ಉಜ್ಜೈನಿಯ ಮಹಾಕಾಳೇಶ್ವರ ಹಾಗೂ ಕಾಶಿಯ ವಿಶ್ವನಾಥನ ನಡುವೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾಕಾಳ ಎಕ್ಸ್‌ಪ್ರೆಸ್ ರೈಲಿನ ಉದ್ಘಾಟನೆಯನ್ನು ಕೂಡಾ ನೆರವೇರಿಸಿದ್ದಾರೆ. ಈ ರೈಲು ಇದೇ ಫೆಬ್ರವರಿ 20 ರಿಂದ ತನ್ನ ಸಂಚಾರವನ್ನು ಕೂಡಾ ಆರಂಭಿಸಲಿದೆ. ಈ ರೈಲಿನ ಬಿ-5 ಕೋಚಿನ ಸೀಟ್ ಸಂಖ್ಯೆ 64 ಈಗ ವಿಶೇಷ ಎನಿಸಿದೆ.

ಈ ಸೀಟ್ ವಿಶೇಷ ಏಕೆ ಎಂದರೆ ಇದೇ ಸೀಟ್ ಈಗ ಮಿನಿ ದೇವಾಲಯವಾಗಿ ಪರಿವರ್ತನೆಯಾಗಿದೆ. ರೈಲಿನ ಸಿಬ್ಬಂದಿ ಇಲ್ಲಿ ಮಹಾಶಿವನ ಫೋಟೋ ಇಟ್ಟು, ಶಿವನ ಆರಾಧನೆ ಮಾಡಿದ್ದು, ಮುಂದೆ ಈ ಸೀಟನ್ನು ಆ ಪರಶಿವನಿಗಾಗಿಯೇ ಮೀಸಲಿಡುವ ಪ್ರಯತ್ನವನ್ನು ಮಾಡುವುದಾಗಿ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ರೈಲಿನಲ್ಲಿ ಸಂಚರಿಸುವ ಭಕ್ತವೃಂದ ಮುಂಬರುವ ದಿನಗಳಲ್ಲಿ ತಮ್ಮ ಆರಾಧ್ಯ ದೈವವನ್ನು ಪೂಜಿಸಲು ಅವಕಾಶ ಆಗಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here