ವಿಕ್ರಂ ರವಿಚಂದ್ರನ್ ಬೆಳ್ಳಿ ತೆರೆಯ ಮೇಲೆ ತಮ್ಮ‌‌ ಖದರನ್ನು ತೋರಿಸೋದಕ್ಕೆ, ಖಡಕ್ಕಾಗಿ ಎಂಟ್ರಿ ಕೊಡೋದಿಕ್ಕೆ ಸಿದ್ಧವಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಂ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿಯನ್ನು ಕೊಡೋದಿಕ್ಕೆ ಸಿದ್ಧವಾಗ್ತಿರೋ ಅದ್ದೂರಿ ಸಿನಿಮಾ ತ್ರಿವಿಕ್ರಮ. ಸಿನಿಮಾ ಆರಂಭವಾದಾಗಿನಿಂದ ಕೂಡಾ ಜನರ ಗಮನವನ್ನು ಸೆಳೆದಿರುವ ಈ ಸಿನಿಮಾದ ಟೀಸರನ್ನು ವಿಕ್ರಂ ರವಿಚಂದ್ರನ್ ಅವರ ಜನ್ಮದಿನದ ಅಂಗವಾಗಿ ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ ಚಿತ್ರ ತಂಡ. ತ್ರಿವಿಕ್ರಮನ ಪ್ರತಾಪವನ್ನು ತೋರಿಸುವ ಈ ಸಖತ್ ಟೀಸರ್ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಒಂದು ನಿಮಿಷ 23 ಸೆಕೆಂಡ್ ಗಳ ಈ ಟೀಸರ್ ನಲ್ಲಿ ಅದ್ಬುತವಾದ ದೃಶ್ಯಾವಳಿ ಹಾಗೂ ನಾಯಕ ನಟ ವಿಕ್ರಂ ಅವರ ಸೂಪರ್ ಲುಕ್ ನೋಡಿದವರಿಗೆ ಸ್ಯಾಂಡಲ್ ವುಡ್ ಗೆ ಒಬ್ಬ ಹ್ಯಾಂಡ್ಸಮ್ ಹಾಗೂ ಮಾಸ್ ಲುಕ್ ಎರಡೂ ಇರೋ ನಾಯಕ ಸಿಕ್ಕ ಅನ್ನುವ ಭರವಸೆಯನ್ನು ನೀಡುತ್ತಿದೆ. ವಿಕ್ರಂ ಅವರ ಮಾಸ್ ಅಂಡ್ ಕ್ಲಾಸ್ ಲುಕ್, ಆ್ಯಕ್ಷನ್ ಸೀನ್ ಗಳು ಹಾಗೂ ಭರ್ಜರಿ ದೃಶ್ಯ ವೈಭವ ಈ ಟೀಸರ್ ನಲ್ಲಿ ಕಾಣುತ್ತಿದ್ದು, ಟೀಸರ್ ನೋಡಿದರೆ ಸಿನಿಮಾ ಕುರಿತಾಗಿ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುವುದು ಮಾತ್ರ ಖಚಿತ.

ಗೌರಿ ಎಂಟ್ರಟೈನರ್ಸ್ ಬ್ಯಾನರ್ ನ ಅಡಿಯಲ್ಲಿ ಸಿದ್ಧವಾಗ್ತಿರೋ ಈ ಸಿನಿಮಾಕ್ಕೆ ಸೋಮಣ್ಣ ಅವರು ನಿರ್ಮಾಪಕರಾಗಿದ್ದು, ಸಹನ ಮೂರ್ತಿ ನಿರ್ದೇಶನ ಸಾರಥ್ಯವನ್ನು ವಹಿಸಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ನೀಡಿದ್ದಾರೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು. ಈ ಸಿನಿಮಾದಲ್ಲಿ ವಿಕ್ರಂ ಅವರೊಟ್ಟಿಗೆ ಆಕಾನ್ಷ ಶರ್ಮಾ, ಅಕ್ಷರ ಗೌಡ, ಚಿಕ್ಕಣ್ಣ, ಸಾಧು ಕೋಕಿಲ ಅವರು ಕೂಡಾ ಸಿನಿಮಾ ದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಸಿದ್ದಾರೆ. ಈಗ ವಿಕ್ರಂ ಅವರ ಜನ್ಮದಿನಕ್ಕೆ ಬಿಡುಗಡೆ ಆಗಿರುವ ಟೀಸರ್ ನಲ್ಲಿ ಪಕ್ಕಾ ಮಾಸ್ ಆಗಿ ಸೂಪರ್ ಲುಕ್ ನಲ್ಲಿ ವಿಕ್ರಂ ರವಿಚಂದ್ರನ್ ಅವರು ಮಿಂಚಿದ್ದಾರೆ.ಟೀಸರ್ ಇಲ್ಲಿದೆ ನೋಡಿ 👇👇👇

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here