ಕರಾವಳಿ ಕರ್ನಾಟಕದಲ್ಲಿ ಜನರು ಬಳಸುವ ಭಾಷೆ ತುಳು. ಈ ಭಾಷೆಗೆ ಅಧಿಕೃತವಾಗಿ ಮಾನ್ಯತೆ ಸಿಗಬೇಕೆಂದು ಟ್ವಿಟ್ಟರ್ ನಲ್ಲಿ #TuluOfficialinKA_KL ಎಂಬ  ಅಭಿಯಾನ ಆರಂಭವಾಗಿದ್ದು, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಅಭಿಯಾನ ಇದಾಗಿದ್ದು, ಇದಕ್ಕೆ ಸ್ಯಾಂಡಲ್ ವುಡ್ ನಟರು ಮತ್ತು ರಾಜಕೀಯ ವಲಯದ ನಾಯಕರು ಕೂಡಾ ಸಾಥ್ ನೀಡಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅವರು ಮಾತನಾಡಿ ಈ ಅಭಿಯಾನಕ್ಕೆ ತನ್ನ ಸಂಪೂರ್ಣ ಬೆಂಬಲ ಇದೆಯೆಂದೂ, ತುಳು ಭಾಷೆಗೆ ಅಧಿಕೃತ ಸ್ಥಾನ ಮಾನ ದೊರೆಯಬೇಕೆಂದು ಹೇಳಿದ್ದಾರೆ.

ಇನ್ನು ಈ ಅಭಿಯಾನಕ್ಕೆ ನಿರ್ದೇಶಕ ಅನೂಪ್ ಭಂಡಾರಿ, ನಟರಾದ ಜಗ್ಗೇಶ್, ನಿರೂಪ್ ಭಂಡಾರಿ, ರಕ್ಷಿತ್ ಶೆಟ್ಟಿ ಕಲಾವಿದ ವಿಲಾಸ್ ನಾಯಕ್, ರಾಜಕೀಯ ಪ್ರಮುಖರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಪ್ರಮೋದ್ ಮಧ್ವರಾಜ್, ಅಣ್ಣಾಮಲೈ ಸೇರಿದಂತೆ ಹಲವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ತುಳು ಸಹೋದರರೆ ಉಸಾರ್ ಉಲ್ಲೇರ!ಬೊಕ್ಕ ತುಳು ಭಾಷೆಯ ವಿಷಯ ಯಾನ್ ಲಾ ನಿಮ್ಮೊಟ್ಟಿಗೆ ಬರ್ಪೇ! ಹೌದು ತುಳು ಭಾಷೆ ಭಾರತದ ಸನಾತನ ಭಾಷೆ!ಸನಾತನ ಕನ್ನಡದ ಸಹೋದರ ಭಾಷೆ ಉಳಿಯಲು ತುಳು ಭಾಷೆಯ ಎಲ್ಲಾಪಕ್ಷದ ನಾಯಕರು ಚಿಂತಕರು ಸಾಹಿತಿಗಳು ಮಾಧ್ಯಮದಲ್ಲಿರುವವರು ನಟನಟಿ ಪ್ರಾಮಾಣಿಕವಾಗಿ ಯತ್ನಿಸಬೇಕು! ಭಾಷೆ ಉಳಿದರೆ ಸನಾತನ ಭಾವನೆ ಉಳಿಯುತ್ತದೆ! ಎಂದು ಟ್ವೀಟ್ ಮಾಡಿದ್ದಾರೆ.

ಶಾಸಕಿ ಶೋಭಾ ಕರಂದ್ಲಾಜೆ ಅವರು ಪೊರ್ಲುದ ಭಾಷೆ ತುಳುಗ್ ಅಧೀಕೃತ ಸ್ಥಾನಮಾನ ತಿಕ್ಕೊಡು, ನಮ್ಮ ಅಪ್ಪೆ ಭಾಷೆನ್ ಸಂವಿಧಾನತ 8ನೇ ಪರಿಚ್ಛೇದಗ್ ಸೇರ್ಪಾವುನ ಮಾತ ಪ್ರಯತ್ನಗ್ ಎನ್ನ ಬೆರಿಸಾಯ ಏಪಲಾ ಉಪ್ಪುಂಡು. ತುಳು ಭಾಷೆಗಾದ್ ನಡಪ್ಪುನ ಮಾತ ಹೋರಾಟಕುಲ ಎನ್ನ ಸಾಕಾರ ಏಪಲ ಕೊರ್ಪೆ. ನಮ್ಮ ಭಾಷೆ, ನಮಕ್ ಪೆರ್ಮೆ!ಎಂದು ಟ್ಟೀಟ್ ಮಾಡಿದ್ದಾರೆ.

ಇತಿಹಾಸ ಮತ್ತು ಸಂಪ್ರದಾಯದೊಂದಿಗೆ ಹೆಚ್ಚು ವಿಕಸನಗೊಂಡ ದ್ರಾವಿಡ ಭಾಷೆಗಳಲ್ಲಿ ತುಳು ಕೂಡ ಒಂದು. ತುಳು ಭೂಮಿಯಲ್ಲಿ ಸೇವೆ ಸಲ್ಲಿಸಿದ್ದು ಮತ್ತು ಸಿರಿ ಮತ್ತು ಕೋಟಿ ಮತ್ತು ಚೆನ್ನಯ್ಯ ಮಹಾಕಾವ್ಯದ ಶ್ರೀಮಂತಿಕೆಯನ್ನು ಕಂಡಿರುವುದು ನನ್ನ ಪುಣ್ಯ. ಇದು ಈ ಸೇರ್ಪಡೆಗೆ ಸಮೃದ್ಧವಾಗಿದೆ ಎಂದು ಅಣ್ಣಾಮಲೈ ಅವರು ಟ್ವೀಟ್ ಮಾಡಿದ್ದಾರೆ. ಹೀಗೆ ಹಲವು ಪ್ರಮುಖರು ತುಳು ಭಾಷೆಗೆ ಅಧಿಕೃತ ಸ್ಥಾನ ಮಾನ ಸಿಗಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here