ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ನ ಸನ್ನಿಧಾನ ಎಂದರೆ ಅಲ್ಲಿ ಸದಾ ಕಾಲ ಭಕ್ತರು ತುಂಬಿರುತ್ತಾರೆ. ಶ್ರೀ ವೆಂಕಟೇಶ್ವರನ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಬರುವ ಅಸಂಖ್ಯಾತ ಭಕ್ತರು ತುಂಬಿ ತಿರುಮಲ ಸದಾ ಕಾಲ ಭಕ್ತರಿಂದ ಕಂಗೊಳಿಸುತ್ತಿರುತ್ತದೆ. ಸದಾ ಭಕ್ತರಿಂದ ತುಂಬಿರುವ ಈ ಆಲಯದಲ್ಲಿ ವಿಐಪಿಗಳು ಆಗಮಿಸಿದಾಗ ಅವರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಅವರು ಯಾವುದೇ ಸರತಿ ಸಾಲು ಇಲ್ಲದೇ, ನೇರವಾಗಿ ಶ್ರೀ ವೆಂಕಟೇಶ್ವರ ನ ದರ್ಶನ ಮಾಡಲು ಅವಕಾಶವನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಆದರೆ ಈಗ ಅಲ್ಲಿ ಒಂದು ಮಹತ್ವದ ಬದಲಾವಣೆ ಆಗಿದೆ. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನೂತನ ಮುಖ್ಯಸ್ಥರಾದ ವೈ.ವಿ. ಸುಬ್ಬಾರೆಡ್ಡಿ ಅವರು ವಿಐಪಿ ದರ್ಶನ ರದ್ದುಗೊಳಿಸುವ ಸಂಬಂಧ ಕಳೆದ ವಾರ ನಿರ್ಧಾರ ಕೈಗೊಂಡಿದ್ದರು. ಅದು ನಿನ್ನೆಯಿಂದ ಅಂದರೆ ಗುರುವಾರದಿಂದ ಜಾರಿಯಾಗಿದೆ. ಈ ಬದಲಾವಣೆಯ ಬಗ್ಗೆ ಹೇಳುತ್ತಾ, ಇದು ಹಿರಿಯರ, ಗಣ್ಯರ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶವಲ್ಲ ಬದಲಾಗಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಭಗವಂತನ ಆಲಯದಲ್ಲಿ ಆತನ ಎಲ್ಲ ಭಕ್ತರೂ ಸಮಾನರು ಎಂಬುದಷ್ಟೇ ಈ ವ್ಯವಸ್ಥೆಯ ಹಿಂದಿನ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಅತಿಗಣ್ಯರಿಗೆ ಮಾತ್ರ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಸುಬ್ಬಾರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದುವರೆವಿಗೂ ವಿಐಪಿ ಗಳಿಗೆ ನೀಡಲಾಗುತ್ತಿದ್ದ ಮೂರು ರೀತಿಯ ಸರತಿಗಳ ಮೂಲಕ ಅಥವಾ ವ್ಯವಸ್ಥೆಯ ಮೂಲಕ ವೆಂಕಟೇಶ್ವರನ ದರ್ಶನ ಪಡೆಯಲು ಅವಕಾಶ ಕಲ್ಪಿಸಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here