ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಹಾಗೂ ಸೀರಿಯಲ್ ಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಕೂಡಾ ಸ್ಥಗಿತಗೊಳಿಸಲಾಗಿದೆ. ಆದರೆ ಲಾಕ್ ಡೌನ್ ಸರಳಗೊಂಡ ಹಿನ್ನೆಲೆಯಲ್ಲಿ ಜೂನ್​ ಅಥವಾ ಜುಲೈ ವೇಳೆಗೆ ಮತ್ತೆ ಚಿತ್ರೀಕರಣಕ್ಕೆ ಚಾಲನೆ ಸಿಗಬಹುದು ಎನ್ನಲಾಗಿದೆ. ಆದರೆ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಸೆಟ್​ನಲ್ಲಿ ಕೆಲವು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗಿರುವುದು ಕಡ್ಡಾಯವೆಂದು ಸೂಚನೆಯನ್ನು ನೀಡಲಾಗಿದೆ. ಚಿತ್ರೀಕರಣ ಎಂದರೆ ಜನಸಂದಣಿ ಇರುವ ಕಾರಣದಿಂದ ಹೆಚ್ಚು ಗಮನ ವಹಿಸಬೇಕಾದ ಅನಿವಾರ್ಯತೆ ಇದೆ.‌ ಕೊರೊನಾ ಸಾಂಕ್ರಾಮಿಕ ಆಗಿರುವ ಕಾರಣ ಸಿನಿಮಾ ಅಥವಾ ಧಾರಾವಾಹಿಯ ಚಿತ್ರೀಕರಣ ನಡೆಯುವ ಕಡೆ ಹೆಚ್ಚು ನಿಗಾ ವಹಿಸಲೇ ಬೇಕಿದೆ.

ಹೆಚ್ಚು ಜನದಟ್ಟಣೆ ಇರುವ ಕಡೆ ಕೊರೊನಾ ಹರಡುವ ಭೀತಿ ಇದ್ದೇ ಇರುತ್ತದೆ. ಆ ಹಿನ್ನೆಲೆಯಲ್ಲಿ ಪಾಲಿಸಬೇಕಾದ ನೀತಿ ನಿಯಮಗಳ ಕುರಿತಾಗಿ ಟಿವಿ ಆರ್ಟಿಸ್ಟ್ ಅಸೋಸಿಯೆಷನ್​, ಫೆಡರೇಷನ್​ ಆಫ್​ ವೆಸ್ಟರ್ನ್​ ಇಂಡಿಯಾ ಸಿನಿ ಎಂಪ್ಲಾಯಿಸ್​ ಸೋಮವಾರ ಸಭೆಯೊಂದನ್ನು ನಡೆಸಿದೆ. ಈ ಸಂದರ್ಭದಲ್ಲಿ ಅವರು ಶೂಟಿಂಗ್​ ಸೆಟ್​ನಲ್ಲಿ ಯಾವೆಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಪಟ್ಟಿ ಮಾಡಲಾಗಿದ್ದು, ಆ‌ ಮುಖ್ಯವಾದ ಅಂಶಗಳ ಈ ಕೆಳಗಿನಂತೆ ಇವೆ.

1. ಪ್ರತಿ ದಿನ ಕಲಾವಿದರ ಸಹಿತವಾಗಿ ಸೆಟ್​ಗೆ ಬರುವ ಎಲ್ಲರೂ ಕೂಡಾ ತಾವು ಆಗಮಿಸುವುದಕ್ಕೂ ಮುನ್ನ ದೇಹದ ಉಷ್ಣತೆ ಪರೀಕ್ಷಿಸುವುದು ಕಡ್ಡಾಯವಾಗಿದೆ.
2. ಧಾರಾವಾಹಿಗೆ ಸಂಬಂಧಿಸಿದ ಕಲಾವಿದರು ಮೇಕಪ್ ಅನ್ನು ಸೆಟ್ ನಲ್ಲಿ ಅಲ್ಲದೆ ಅವರವರ ಮನೆಯಲ್ಲೇ ಮಾಡಿಕೊಂಡು ಬರುವುದು.
3. ಕಲಾವಿದರು ತಮ್ಮ ಜೊತೆಯಲ್ಲಿ ಸೆಟ್​ಗೆ ಒಬ್ಬ ಮೇಕಪ್​ ಮೆನ್​ ಅನ್ನು ಮಾತ್ರ ಕರೆದುಕೊಂಡು ಬರಬಹುದಾಗಿದೆ.‌
4. ಶೂಟಿಂಗ್ ಸೆಟ್ ಗಳಲ್ಲಿ ವೈದ್ಯರು ಮತ್ತು ನರ್ಸ್​​ಗಳು ಕಡ್ಡಾಯವಾಗಿ ಹಾಜರಾಗಿರಬೇಕು.
5. 12 ಗಂಟೆಯ ಕಾಲ ಶೂಟಿಂಗ್​ ಇದ್ದರೆ, ಪ್ರತಿ ಸದಸ್ಯನಿಗೂ ಕೂಡಾ ತಲಾ ನಾಲ್ಕು ಮಾಸ್ಕ್​ಗಳನ್ನು ನೀಡಬೇಕಾಗಿದೆ.
6. ಮೊದಲ 3 ತಿಂಗಳ ಕಾಲ 60 ವಯಸ್ಸು ಮೀರಿದವರನ್ನು ಕೆಲಸಕ್ಕೆ ಆಯ್ದುಕೊಳ್ಳುವಂತಿಲ್ಲ.
7. ಸೆಟ್​ನಲ್ಲಿರುವ ಪ್ರತಿಯೊಬ್ಬರ ಹೆಸರಲ್ಲೂ ವಿಮೆ ಮಾಡಿಸುವುದು ಕಡ್ಡಾಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here