ಅದೃಷ್ಟ ಎಂಬುದು ಯಾರಿಗೆ ಹೇಗೆ ಒಲಿಯುತ್ತದೆ ಎಂಬುದನ್ನು ಯಾರೂ ಕೂಡಾ ಊಹಿಸಲು ಸಾಧ್ಯವಿಲ್ಲ. ಆದರೆ ಅದು ಒಲಿದಾಗ, ನೊಂದವನ ಬಾಳಲ್ಲಿ ಆಶಾಕಿರಣ ಮೂಡುವುದು ಮಾತ್ರವಲ್ಲದೇ, ಇಷ್ಟು ದಿನಗಳು ಪಟ್ಟ ಕಷ್ಟ ಕಳೆದು ಸುಖ ಸಿಗುವ ಸಮಯ ಬಂದೇ ಬಿಡುತ್ತದೆ. ಅಂತಹುದೇ ಒಂದು ಘಟನೆಯಲ್ಲಿ ಬಡತನದಲ್ಲಿ ಬೇಗೆಯಲ್ಲಿ ಬಳಲುತ್ತಿದ್ದ, ಬ್ಯಾಂಕ್ ನಲ್ಲಿ ಈಗಾಗಲೇ ಸಾಲ ಮಾಡಿ ಅದರ ಹೊರೆಯನ್ನು ಕೂಡಾ ಹೊತ್ತು, ಸಂಸಾರವನ್ನು ನಡೆಸಲು ಕಷ್ಟ ಪಡುತ್ತಿದ್ದ ವ್ಯಕ್ತಿಯೊಬ್ಬರ ಮನೆ ಬಾಗಿಲನ್ನು ತಟ್ಟಿದೆ ಅದೃಷ್ಟ. ಆತ ಖರೀದಿಸಿದ ಒಂದು ಲಾಟರಿ ಆತನನ್ನು ಕೋಟಿಗಳ ಒಡೆಯನನ್ನಾಗಿ ಮಾಡಿದೆ‌.

ರಂಜನ್ ಎಂಬ 53 ವರ್ಷದ ವ್ಯಕ್ತಿ ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ. ಇವರು ರಬ್ಬರ್ ಟ್ಯಾಪರ್ ವೃತ್ತಿಯಲ್ಲಿ ನಿರತರಾಗಿದ್ದಾರೆ. ಆದರೆ ಅದರಿಂದ ಅವರ ಜೀವನ ಮಟ್ಟ ಉತ್ತಮವಾಗೇನೂ ಇರಲಿಲ್ಲ. ರಂಜನ್ ಅವರು ಈಗಾಗಲೇ ಬ್ಯಾಂಕ್ ನಲ್ಲಿ ಮೂರು ಸಾಲವನ್ನು ಮಾಡಿದ್ದಾರೆ. ಈಗಾಗಲೇ ಬ್ಯಾಂಕ್ ನಲ್ಲಿ 7 ಲಕ್ಷ ರೂಪಾಯಿಗಳ ಸಾಲವನ್ನು ಮಾಡಿದ್ದಾರೆ. ಆದರೆ ತೀರಿಸುವುದು ಕಷ್ಟವಾಗಿದೆ. ಮತ್ತೊಮ್ಮೆ ಬ್ಯಾಂಕ್ ನಿಂದ ಸಾಲ ದೊರೆಯಬಹುದೇನೋ ಎಂಬ ನಿರೀಕ್ಷೆ ಹೊತ್ತು ಇತ್ತೀಚಿಗೆ ಮತ್ತೊಮ್ಮೆ ಸಾಲ ಪಡೆಯಲು ಹೋದಾಗ ಬ್ಯಾಂಕ್ ಮ್ಯಾನೇಜರ್ ಅದಕ್ಕೆ ನಿರಾಕರಿಸಿದ್ದಾರೆ. ಸಾಲ ಸಿಗಲಿಲ್ಲ ಎಂದು ಬೇಸರ ಮಾಡಿಕೊಂಡು ಬ್ಯಾಂಕ್ ನಿಂದ ಮರಳಿ ಬರುವಾಗ ತನ್ನ ಬಳಿ ಇದ್ದ 300 ರೂಪಾಯಿ ನೀಡಿ ರಂಜನ್ ಅವರು ಲಾಟರಿ ಖರೀದಿ ಮಾಡಿದ್ದಾರೆ.

ಖರೀದಿ ಮಾಡಿದ್ದ ಲಾಟರಿಯ ಫಲಿತಾಂಶ ಕಳೆದ ಸೋಮವಾರ ಘೋಷಣೆಯಾದಾಗ ಆಶ್ಚರ್ಯ ಕಾದಿತ್ತು. ಲಾಟರಿ ಯಲ್ಲಿ ಮೊದಲ ಬಹುಮಾನ ರಂಜನ್ ಅವರಿಗೆ ಬಂದಿದ್ದು, ಬರೋಬ್ಬರಿ 12 ಕೋಟಿಯನ್ನು ಲಾಟರಿಯಲ್ಲಿ ಗಳಿಸಿದ್ದಾರೆ ರಂಜನ್ ಅವರು. ಅವರು ತನಗೆ ಲಾಟರಿ ಬಂದ ವಿಷಯವನ್ನು ಮನೆಯಲ್ಲಿ ಹೇಳಿದಾಗ ಮೊದಲಿಗೆ ಅವರ ಕುಟುಂಬದವರಿಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಆದರೆ ಅನಂತರ ಎಲ್ಲರೂ ಸಂತೋಷದಿಂದ ಸಂತಸದ ಕ್ಷಣಗಳನ್ನು ಸಂಭ್ರಮಿಸಿದ್ದಾರೆ. ಈಗ ಬಂದಿರುವ ಹಣದಲ್ಲಿ ತೆರಿಗೆಯೆಲ್ಲಾ ಹೋಗಿ ರಂಜನ್ ಅವರಿಗೆ ಸುಮಾರು ಏಳರಿಂದ ಎಂಟು ಕೋಟಿ ಬರುತ್ತದೆ ಎನ್ನಲಾಗಿದೆ. ರಂಜನ್ ಅವರು ತನಗೆ ಹಣ ಬಂದ ಕೂಡಲೇ ಬ್ಯಾಂಕ್ ನಲ್ಲಿ ತಾನು ಮಾಡಿರುವ ಏಳು ಲಕ್ಷ ಸಾಲವನ್ನು ತೀರಿಸುವುದಾಗಿ ರಂಜನ್ ಹೇಳಿದ್ದಾರೆ. ಅದೃಷ್ಟ ಎಂದರೆ ಇದಲ್ಲವೇ?? ಸಾಲ ಕೇಳಲು ಹೋದವನು ಕೋಟ್ಯಾಧೀಶನಾಗುವುದು ಎಂದರೆ ಆಶ್ಚರ್ಯವೇ ಸರಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here