ರಾಜ್ಯದಲ್ಲಿ ಬಿಜೆಪಿ ತನ್ನ ಸಚಿವ ಸಂಪುಟವನ್ನು ರಚಿಸಿದ ನಂತರ, ರಾಜ್ಯ ಆಡಳಿತವನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಹೈಕಮಾಂಡ್ ರಾಜ್ಯಕ್ಕೆ ಮೂರು ಜನ ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡಿದೆ. ಈ ಬಗ್ಗೆ ಈಗಾಗಲೇ ವಿರೋಧಿ ಪಾಳೆಯದಿಂದ ವ್ಯಾಪಕ ಟೀಕೆಗಳು ಎದುರಾಗುವಾಗಲೇ, ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಇನ್ನೂ ಎರಡು ಡಿಸಿಎಂ ಸ್ಥಾನವನ್ನು ಸೃಷ್ಟಿಸಲು ಮುಂದಾಗಿದ್ದಾರೆನ್ನಲಾಗಿದೆ. ಈ ಸಲ ಡಿಸಿಎಂ ಗಳ ಹುದ್ದೆಗೆ ಪರಿಶಿಷ್ಟ ವರ್ಗ(ಎಸ್ಟಿ) ಹಾಗೂ ಕುರುಬ ಸಮುದಾಯದ ಇಬ್ಬರು ಪ್ರಭಾವಿ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರೊಂದಿಗೆ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ನೀಡುವ ಉದ್ದೇಶವನ್ನು ನೀಡುವುದಾಗಿ ಹೇಳಲಾಗಿದೆ.

ಡಿಸಿಎಂ ಹುದ್ದೆಗಾಗಿ ಪರಿಶಿಷ್ಟ ವರ್ಗಗಳ ಸಮುದಾಯದಿಂದ ಬಿ.ಶ್ರೀರಾಮುಲು ಅಥವಾ ಅನರ್ಹಗೊಂಡಿರುವ ಬೆಳಗಾವಿಯ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಬೇಕೆಂಬ ಚಿಂತನೆ ವರಿಷ್ಠರಲ್ಲಿದೆ. ಇನ್ನು ಕುರುಬ ಸಮುದಾಯಕ್ಕೆ ಬಂದರೆ ಅಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ , ಅಥವಾ ಅನರ್ಹಗೊಂಡಿರುವ ಕೆ.ಆರ್.ಪುರಂನ ಭೈರತಿ ಬಸವರಾಜ್, ಜೆಡಿಎಸ್ ನಿಂದ ಗೆದ್ದಿದ್ದ ಹುಣಸೂರಿನ ಎಚ್.ವಿಶ್ವನಾಥ್ ಈ ಮೂವರಲ್ಲೊಬ್ಬರಿಗೆ ಡಿಸಿಎಂ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ‌.

ಈಗಾಗಲೇ ಅನರ್ಹ ಶಾಸಕರ ಅನರ್ಹತೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದ್ದು, ಅದು ಇದೇ ಸೆಪ್ಟೆಂಬರ್ 11ರಂದು ವಿಚಾರಣೆಗೆ ಬರಲಿದ್ದು, ಅಂದು ಒಂದು ಪಕ್ಷ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರು ಶಾಸಕರನ್ನು ಅನರ್ಹಗೊಳಿಸಿದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದರೆ, ಶಾಸಕರ ರಾಜೀನಾಮೆಯನ್ನು ಸ್ವೀಕರಿಸುವಂತೆ ಹಾಲಿ ಸ್ಪೀಕರ್ ಅವರಿಗೆ ಆದೇಶ ನೀಡಿದರೆ ಸಚಿವ ಸಂಪುಟ ವಿಸ್ತರಣೆಯಾಗುವುದು ಕೂಡಾ ಬಹುತೇಕ ಖಚಿತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here