ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿ ಎಲ್ಲರೂ ಮನೆಯಲ್ಲಿ ಇರಬೇಕೆಂಬ ನಿಯಮ ಇದ್ದರೂ ಸಹ ಹಲವಾರು ಜನ ನಿಯಮ ಉಲ್ಲಂಘಿಸಿ ಬೇರೆಯವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.ಅದರಲ್ಲೂ ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾದವರು ಮನೆಯಲ್ಲಿ ಇರದೇ ರಸ್ತೆಯಲ್ಲಿ ಅಡ್ಡಾಡುತ್ತಿರುವುದರಿಂದ ಜನರಿಗೆ ಮತ್ತು ಅಧಿಕಾರಿಗಳಿಗೆ ತಲೆಬಿಸಿ ತರುತ್ತಿದೆ. ಅಂತಹವರ ವಿರುದ್ಧ ಪೊಲೀಸರು ಸಹ ಹದ್ದಿನ ಕಣ್ಣಿಟ್ಟಿದ್ದಾರೆ. ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾದ ವ್ಯಕ್ತಿಗಳು ಹೊರಗಡೆ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ನಡುವೆ ಉಡುಪಿಯಲ್ಲಿ ಕ್ವಾರಂಟೈನ್ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಉಡುಪಿಯ ಜಿಲ್ಲಾಧಿಕಾರಿ ಕ್ವಾರಂಟೈನ್ ವಿರುದ್ಧ ಕಿಡಿಕಾರಿದ್ದಾರೆ.
ಕೊರೋನಾದ ಸೀಲು ಹೊತ್ತಿಸಿಕೊಂಡಿದ್ದರೂ ಸಹ ಮನೆಯಲ್ಲಿ ಇರದೇ ಊರೆಲ್ಲಾ ಸುತ್ತಾಡಿದ್ದಲ್ಲದೆ ಹೋಂ ಕ್ವಾರಂಟೇನ್ ಮುರಿದು ಕ್ರಿಕೆಟ್‌ ಆಟ ಆಡುತ್ತಿದ್ದ ಉಡುಪಿ ಜಿಲ್ಲೆಯ ಕಾಪು ಮೂಲದ ವ್ಯಕ್ತಿಯ ವಿರುಧ್ಧ ಕಿಡಿಕಾರಿರುವ ಉಡುಪಿ‌ ಜಿಲ್ಲೆಯ ಜಿಲ್ಲಾಧಿಕಾರಿ

ಜಿ.ಜಗದೀಶ್ ಅವರು ಇತನಿಂದ ಯಾರಿಗಾದರೂ ಒಂದು ವೇಳೆ ಸೋಂಕು ತಗುಲಿದರೆ ಆ ಎಲ್ಲಾ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಈತನೇ ಭರಿಸಬೇಕು ಎಂದು ಖಡಕ್ಕಾಗಿ ಆತನ ವಿರುದ್ಧ ಗುಡುಗಿದ್ದಾರೆ. ಮಾದ್ಯಮದ ಜೊತೆ ಮಾತನಾಡಿದ ಅವರು ಈ ಬಗ್ಗೆ ಆ ವ್ಯಕ್ತಿಯ ಬಗ್ಗೆ ಕ್ರಿಮಿನಲ್ ಕೇಸು ಸಹ ದಾಖಲಿಸುತ್ತೇವೆ.ಇಡೀ ಊರಿನ ಕೊರೋನಾ ರೋಗಿಗಳ ಚಿಕಿತ್ಸೆಯ ವೆಚ್ಚವನ್ನು ಸಹ ಈತನೇ ಭರಿಸಬೇಕು ಎಂದರಲ್ಲದೇ ಹೋಂ‌ ಕ್ವಾರಂಟೈನ್ ನಲ್ಲಿ ಇರಬೇಕಾದವರು ಯಾರೇ ಆದರೂ ‌ಮನೆಯಲ್ಲಿ ‌ಇರದೆ ಈ ರೀತಿಯ ಉದ್ದಟತನದಿಂದ ವರ್ತಿಸಿದರೆ ಎಲ್ಲರಿಗೂ ಸಹ ಇದೇ ರೀತಿ ದಂಡ ವಸೂಲಿ ಮಾಡಲಾಗುವುದು

ಅಷ್ಟೇ ಅಲ್ಲ‌ ಎರಡು ವರ್ಷಗಳ ಜೈಲು ವಿಧಿಸುವ ಹಕ್ಕು ಕಾನೂನಿನಲ್ಲಿ ಇರುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಈಗಾಗಲೇ ವಿದೇಶದಿಂದ ಬಂದ ವ್ಯಕ್ತಿ ಒಬ್ಬರು ಉದ್ದಟತನ ತೋರಿದ್ದು ಕೋಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ.ಈತನ ಜೊತೆಗೆ ಇನ್ನೂ ಎಂಟು ಮಂದಿಯ ಮೇಲೆ ಪ್ರಕರಣವನ್ನು‌ ಉಡುಪಿ ಜಿಲ್ಕೆಯಾದ್ಯಂತ ದಾಖಲು ಆಗಿದ್ದು ಹೋಂ ಕ್ವಾರಂಟೇನ್ ಇರುವ ವ್ಯಕ್ತಿಯ ಮನೆಯವರು ಆ ವ್ಯಕ್ತಿಗಳು ಮನೆಯ ಹೊರಗೆ ಬಾರದ ಹಾಗೆ ನೋಡಿಕೊಳ್ಳಬೇಕು ಎಂದು ಅವರ ಕುಟುಂಬದವರಿಗೆ ಕಿವಿಮಾತನ್ನು ಸಹ ಹೇಳಿದರು. ಉಡುಪಿಯ ಈ ಜಿಲ್ಲಾಧಿಕಾರಿಯವರ ಖಡಕ್ ಆದೇಶದ ಮಾತಿನಿಂದ ಆದರೂ ಸಹ ಇನ್ನು‌ ಮುಂದ ಹೋಂ ಕ್ವಾರಂಟೇನ್ ನಲ್ಲಿ ಇರುವಂತಹ ವ್ಯಕ್ತಿಗಳು ಬುದ್ಧಿ ಕಲಿತು ಮನೆಯಲ್ಲಿಯೇ ಇರುತ್ತಾರೆಯೇ ತಮ್ಮ ಅವಧಿ ಮುಗಿಯುವವರೆಗೂ ಎಂದು ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here