ಕೊನೆಗೂ ರಿಯಲ್ ಸ್ಟಾರ್ ತಮ್ಮ ಕನಸಿನ ಮತ್ತು ಇಷ್ಟಪಟ್ಟ ಪ್ರಜಾಕೀಯ ಮಾಡಲು ನಿರ್ಧಾರ ಮಾಡಿದ್ದಾರೆ.ಇಂದು ತಮ್ಮ ರುಪ್ಪೀಸ್ ರೆಸಾರ್ಟ್ ನಲ್ಲಿ ತಮ್ಮ ಬೆಂಬಲಿಗರ ಜೊತೆ ಸುದೀರ್ಘ ಸಭೆ ನಡೆಸಿದ ಉಪೇಂದ್ರ ತಮ್ಮ ನಿರ್ಧಾರ ತಿಳಿಸಿದರು.ನೆನ್ನೆ ತಾನೇ ಕೆಪಿಜೆಪಿ ಯಿಂದ ಹೊರಬರುವುದಾಗಿ ತಿಳಿಸಿದ್ದ ಉಪೇಂದ್ರ ಇಂದು ತಮ್ಮ ಕನಸಿನ ಪ್ರಜಾಕೀಯ ಪಕ್ಷ ಕಟ್ಟಲು ತೀರ್ಮಾನಿಸಿದ್ದಾರೆ.

ಕೆಲವರು ಉಪೇಂದ್ರ ಅವರು ಬಿಜೆಪಿ ಪಕ್ಷಕ್ಕೆ ಹೋಗುತ್ತಾರೆ ಎನ್ನುವ ಸುದ್ದಿ ಹಬ್ಬಿಸಿದ್ದರು. ಆದರೆ ತಮ್ಮನ್ನೇ ನಂಬಿರುವ ಬೆಂಬಲಿಗರ ಮಾತಿಗೆ ಮನ್ನಣೆ ನೀಡಿ ಪ್ರಜಾಕೀಯ ಸ್ಥಾಪಿಸುವುದಾಗಿ ತಿಳಿಸಿದರು.ಉಪೇಂದ್ರ ಒಂದು ವೇಳೆ ಬೇರೆ ಪಕ್ಷಕ್ಕೆ ಹೋದರೆ ನನ್ನನ್ನು ನಂಬಿರುವ ಬೆಂಬಲಿಗರು ಉಪ್ಪಿ ವಿರುದ್ದ ತಿರುಗಿಬೀಳುವ ಸಂಭವ ಇತ್ತು.ಆದರೆ ಉಪೇಂದ್ರ ಪ್ರಜಾಕೀಯ ಪಕ್ಷ ಸ್ವಂತವಾಗಿ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರಿಂದ ಉಪೇಂದ್ರ ಅಭಿಮಾನಿಗಳು ಮತ್ತು ಬೆಂಬಲಿಗರು ಸಂಭ್ರಮದಲ್ಲಿದ್ದಾರೆ.

ಇನ್ನು ಮುಂದೆ ಕೆಪಿಜೆಪಿಗೂ ನಮಗೂ ಸಂಭಂದವಿರುವುದಿಲ್ಲ.ಇಂದಿನಿಂದಲೇ ಹೊಸ ಪಕ್ಷದ ಕಾರ್ಯಾರಂಭ ಆಗಲಿದ್ದು ನಮ್ಮ ಧ್ಯೇಯಗಳು ಮುಂದುವರಿಯಲಿದ್ದು ನಮ್ಮ ಪ್ರಜಾಕೀಯ ಪಕ್ಷ ಸದ್ಯದಲ್ಲೇ ಅಧಿಕೃತವಾಗಿ ಸ್ಥಾಪಿತವಾಗಲಿದ್ದು ನಾನು ಯಾವುದೇ ಕಾರಣಕ್ಕೂ ಪ್ರಜಾಕೀಯ ಬಿಟ್ಟು ರಾಜಕೀಯ ಮಾಡುವುದಿಲ್ಲ.ಸಾಧ್ಯವಾದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ ಉಪೇಂದ್ರ ಒಂದು ವೇಳೆ ಈಗ ಸಾಧ್ಯವಾಗದಿದ್ದರೆ ಬರುವ ಗ್ರಾಮ ಪಂಚಾಯತಿ ,ಬಿಬಿಎಂಪಿ ಚುನಾವಣೆಗಳಲ್ಲಿ ಸ್ಪರ್ಧಿಸುವುದಾಗಿ ಉಪೇಂದ್ರ ತಿಳಿಸಿದರು.ಇಂಡಿಪೆಂಡೆಂಟ್‌ ಆಗಿ ನಾವು ಯಾರು ಚುನಾವಣೆಗೆ ಸ್ಪರ್ಧಿಸುವುದಿಲ್ಲ.

ಪ್ರಜಾಕೀಯ ದಿಂದಲೇ ನಾವು ಎಲ್ಲಾರು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.ಅದಲ್ಲದೇ ಚುನಾವಣೆ ಹತ್ತಿರ ಇರುವುದರಿಂದ ಪ್ರಜಾಕೀಯ ಪಕ್ಷಕ್ಕೆ ಅನುಮತಿ ಸಿಗುವುದು ಅನುಮಾನ ಇದೆ.ಆದರೆ ನಾವು ವಕೀಲರ ಜೊತೆ ಕಾನೂನು ರೀತಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ.ಈಗಾಗಲೇ ಪ್ರಜಾಕೀಯ ಪಕ್ಷದ ನೂರಾರು ಅಭ್ಯರ್ಥಿಗಳು ತಮ್ಮ ಜೊತೆ ಇದ್ದಾರೆ. ನಾವು ಯಾವುದೇ ಅಡೆತಡೆಗಳಿಗೆ ತಲೆಕೆಡಿಸಿಕೊಳ್ಳವುದಿಲ್ಲ ರಂದ ಉಪೇಂದ್ರ ತನ್ನ ಜೊತೆ ಇರುವ ನೂರು ಬೆಂಬಲಿಗರು ಮೂರು ಜನಕ್ಕೆ ಇಳಿದರೂ ಅಸ ಮೂರು ಜನರಿಂದ ಲಕ್ಷ ಬೆಂಬಲಿಗರನ್ನು ಸೃಷ್ಟಿ ಮಾಡುತ್ತೇನೆ ಎಂದು ಉಪೇಂದ್ರ ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here