ಪ್ರಜಾಕೀಯ ಮೂಲಕ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ದಿಂದ ಉಪೇಂದ್ರ ಹೊರ ನಡೆಯುವ ಸಾಧ್ಯತೆ ಇದೆ. ಚುನಾವಣೆಯನ್ನು ಎದುರಿಸುವ ಮುನ್ನವೇ, ಸಾಕಷ್ಟು ಕನಸುಗಳನ್ನು ಹೊತ್ತು ರಾಜಕೀಯಕ್ಕೆ ಧುಮುಕಿದ ನಟ ಉಪೇಂದ್ರ ಈ ಪಕ್ಷದಿಂದ ಹೊರ ಬರುವ ಸಾಧ್ಯತೆ ಇದೆ.

ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಪಕ್ಷದಲ್ಲಿ ಇಂಥದ್ದೊಂದು ಬೆಳವಣಿಗೆ ಕಂಡು ಬಂದಿದ್ದು, ಟಿಕೆಟ್ ವಿಚಾರಣದಲ್ಲಿ ಈ ಇಬ್ಬರ ನಡುವೆ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ, ಎನ್ನಲಾಗಿದೆ.ಇಂದೇ ಕೆಪಿಜೆಪಿ ನಿರ್ಣಾಯಕ ಸಭೆ ನಡೆಯಲಿದ್ದು, ಉಪೇಂದ್ರ ಅವರ ತೀರ್ಮಾನ ಹೊರ ಬೀಳಲಿದೆ. ಈಗ ತಾನೇ ಹುಟ್ಟಿಕೊಂಡು, ಚುನಾವಣೆ ಎದುರಿಸುವ ಮುನ್ನವೇ ಪಕ್ಷದಲ್ಲಿ ಇಂಥದ್ದೊಂದು ಬಿರುಕು ಮೂಡಿದ್ದು, ಅಭ್ಯರ್ಥಿಗಳ ಆಯ್ಕೆ ಗೊಂದಲವೇ ಇವಕ್ಕೆ ಕಾರಣ.

ಮಹೇಶ್​ ಗೌಡ ಹೆಸರಿನಲ್ಲಿ ಕೆಪಿಜೆಪಿ ನೋಂದಾವಣೆಯಾಗಿದೆ. ನಿನ್ನೆ ನಡೆದ ಮೀಟಿಂಗ್‌ನಲ್ಲಿ ಮಹೇಶ್​ ಗೌಡ-ಉಪ್ಪಿ ನಡುವೆ ಘರ್ಷಣೆ ನಡೆದಿತ್ತು.
ಚುನಾವಣಾ ಪ್ರಚಾರಕ್ಕೆ ತೆರಳುವ ವಿಚಾರದಲ್ಲಿ ಜಟಾಪಟಿ ನಡೆದಿತ್ತು. ಈ ವೇಳೆ ಉಪೇಂದ್ರರನ್ನು ಪಕ್ಷದಿಂದ ಉಚ್ಛಾಟಿಸುವುದಾಗಿ ಮಹೇಶ್​ ಗೌಡ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳಿನ ಅಭ್ಯರ್ಥಿಗಳ ಸಭೆ ಕುರಿತಾಗಿ ಗೊಂದಲ ಮೂಡಿದೆ.

ಕೆಪಿಜೆಪಿಯನ್ನು ಪಕ್ಷವನ್ನಾಗಿಸಿಕೊಂಡ ಉಪ್ಪಿ ನೂತನ ಪಕ್ಷ ಸ್ಥಾಪನೆಗೆ ಬರೋಬ್ಬರಿ ವರ್ಷ ಬೇಕಾಗಿತ್ತು. ಆದರೆ, ಕೆಪಿಜೆಪಿಯಿಂದಲೇ ಉಪ್ಪಿಗೆ ಸಿಕ್ಕಿತ್ತು ನೀಡಿದ ಹಿನ್ನೆಲೆಯಲ್ಲಿ ಕೆಪಿಜೆಪಿಯನ್ನೇ ತನ್ನ ಪಕ್ಷವನ್ನಾಗಿಸಿಕೊಂಡಿದ್ದರು. ಮಹೇಶ್​ ಗೌಡ ಜೊತೆ ಉತ್ತಮ ಬಾಂಧವ್ಯ ಸಂಬಂಧ ಹೊಂದಿದ್ದ ಉಪ್ಪಿ ಅವರು ಇದೀಗ ಟಿಕೆಟ್ ಹಂಚಿಕೆ ವಿಚಾರವಾಗಿ ಮುನಿಸಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here