ನಟಿ ಪ್ರೇಮ ಅವರ ಚಿತ್ರ ಜೀವನದಲ್ಲಿ ಮರೆಯಲಾರದ ಹಾಗೂ ಬಹಳ‌ ಪ್ರಮುಖವಾದ ಚಿತ್ರ ಎಂದರೆ ಅದು ಓಂ‌ ಎಂದು ಎಲ್ಲರೂ ಥಟ್ಟನೆ ಹೇಳಿ ಬಿಡುವರು.‌ ಆದರೆ ಇಂತಹ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ ಉಪೇಂದ್ರ ಅವರ ಬಗ್ಗೆ ಮಾತ್ರ ಪ್ರೇಮ ಅವರಿಗೆ ಆಗ ಬಹಳ‌‌ ಕೋಪವಂತೆ. ಓಂ‌ ಪ್ರೇಮ ಅವರ ನಟನೆಯ ಎರಡನೇ ಸಿನಿಮಾ. ಅದಕ್ಕಿಂತ ಮೊದಲು ನಟಿಸಿದ ಸಿನಿಮಾ ಸವ್ಯಸಾಚಿ ಯಶಸ್ಸು ಕಂಡಿರಲಿಲ್ಲ. ಆ ಸಂದರ್ಧದಲ್ಲಿ ಈ ಚಿತ್ರ ಶಿವಣ್ಣ ಹಾಗೂ ಪ್ರೇಮ ಇಬ್ಬರಿಗೂ ಕೂಡಾ ಒಂದು ಮಹತ್ವದ ಚಿತ್ರವಾಗಿತ್ತು‌. ಆದರೆ ಚಿತ್ರದ ನಿರ್ದೇಶಕ ಉಪೇಂದ್ರ ಅವರು ಬಹಳ ಕ್ರೂರಿ ಎಂದು ಪ್ರೇಮ ಅವರು ಬೈದು ಕೊಂಡಿದ್ದು ಉಂಟು.

ಎರಡನೇ ಸಿನಿಮಾದಲ್ಲಿ ಬಣ್ಣ ‌ಎರೆಚಾಡುವುದು, ಜುಟ್ಟು ಹಿಡಿದೆಳೆಯುವುದು ಇಂತಹ ದೃಶ್ಯಗಳೆಲ್ಲಾ ಇದ್ದುದ್ದರಿಂದ, ಉಪೇಂದ್ರ ಅವರು ಎಷ್ಟು ಕ್ರೂರಿ ಎನಿಸಿತ್ತಂತೆ ಪ್ರೇಮ ಅವರಿಗೆ. ಅವರಿಗೆ ಕರುಣೆ ಆಗಲೀ ಹೆಣ್ಣು ಅನ್ನೋ ಭಾವನೆ ಆಗಲೀ ಇಲ್ವಾ ಅಂತ ಬೇಸರ ಪಟ್ಟಿಕೊಂಡಿದ್ದು ಉಂಟಂತೆ. ಉಪೇಂದ್ರ ಅವರಿಗೆ ಹುಡುಗಿಯರನ್ನು ಕಂಡರೆ ಆಗಲ್ಲ, ಬಹಳ‌ ಒರಟು ಎಂದು ಅನಿಸಿತಂತೆ ಅವರಿಗೆ. ಅಲ್ಲದೆ ಪ್ರೇಮ ಅವರಿಗೆ ಉಪೇಂದ್ರ ಅವರ ಸಹಾಯಕರು ಎಲ್ಲಾ ಹೇಳಿ ಕೊಡ್ತಾ ಇದ್ರಂತೆ. ಅದಕ್ಕೆ ಪ್ರೇಮ ಅವರಿಗೆ ಉಪೇಂದ್ರ ಮೇಲೆ ತುಂಬಾ ಕೋಪ ಇತ್ತಂತೆ.

ಈ ವಿಷಯವನ್ನು ಉಪೇಂದ್ರ ಅವರು ಕೂಡಾ ಹೇಳಿದ್ದಾರೆ. ಓಂ ಚಿತ್ರದ ಸಮಯದಲ್ಲಿ ಪ್ರೇಮ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಕೋಪ‌ ಇತ್ತು, ನಾನು ತುಂಬಾ ಟಾರ್ಚರ್ ಕೊಟ್ಟಿದೆ ಎಂದು ಉಪೇಂದ್ರ ಅವರೇ ಹೇಳಿದ್ದಾರೆ. ಇನ್ನು ಉಪೇಂದ್ರ ಅವರ ಮೇಲೆ ತನಗಿದ್ದ ಈ ಕೋಪದ ವಿಚಾರವನ್ನು ಪ್ರೇಮ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಎಷ್ಟೇ ಕೋಪ ಇದ್ದರೂ ಸಿನಿಮಾ ನೋಡಿದ ನಂತರ ಅದೆಲ್ಲಾ‌ ಮರೆಯಾಗಿರುವುದು ಸಹಜ. ಏಕೆಂದರೆ ಓಂ ಕನ್ನಡ ಚಿತ್ರರಂಗದಲ್ಲಿ ಒಂದು ದಾಖಲೆಯನ್ನೇ ಬರೆಯಿತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here