ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದ ಕುಡಿಗಳು ಕೂಡಾ ಸ್ಯಾಂಡಲ್ ವುಡ್ ಎಂಬ ಬಣ್ಣದ ಲೋಕವನ್ನು ಪ್ರವೇಶಿಸುವ ಟ್ರೆಂಡ್ ಆರಂಭವಾಗಿದೆ. ಈಗಾಗಲೇ 2nd ಹಾಫ್’​​​ ಚಿತ್ರದ ಮೂಲಕ ರಿಯಲ್ ಸ್ಟಾರ್ ಅವರ ಅಣ್ಣನ ಮಗ ನಿರಂಜನ್​​ ಚಿತ್ರರಂಗಕ್ಕೆ ತಮ್ಮ ಅಡಿಯನ್ನು ಇಟ್ಟಿದ್ದಾರೆ. ಅದರ ಬೆನ್ನಲ್ಲೇ ಈಗ ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಐಶ್ವರ್ಯ ಸ್ಯಾಂಡಲ್​ವುಡ್​​ ಪ್ರವೇಶ ಮಾಡಿದ್ದಾರೆ. ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ನಟನೆಯ ‘ಹೌರಾಬ್ರಿಡ್ಜ್’ ಎಂಬ ಸಿನಿಮಾದ ಶೀರ್ಷಿಕೆಯನ್ನು ‘ದೇವಕಿ’ ಎಂದು ಬದಲಾವಣೆ ಮಾಡಲಾಗಿದ್ದು ಇದೇ ಚಿತ್ರದ ಮೂಲಕ ಉಪೇಂದ್ರ ದಂಪತಿಗಳ ಕುಡಿ ಅವರ ಮಗಳು ಐಶ್ವರ್ಯ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅವರ ಚಿತ್ರ ಜೀವನದ ಅಥವಾ ನಟನಾ ಕೌಶಲ್ಯ ಪ್ರದರ್ಶಿಸುವ ಕಲಾ‌ ಜೀವನಕ್ಕೆ ಈ ಚಿತ್ರ ಅಡಿಪಾಯವನ್ನು ಹಾಕಲು ಹೊರಟಿದೆ ಎಂದು ಹೇಳಬಹುದು.

ನಿನ್ನೆಯಷ್ಟೇ ‘ದೇವಕಿ’ ಚಿತ್ರದ ಟೀಸರ್ ಹಾಗೂ ಐಶ್ವರ್ಯ ಉಪೇಂದ್ರ ಅವರ ಲುಕ್ ಲಾಂಚ್ ಮಾಡಲಾಗಿದೆ. ಚಿತ್ರದ ಟ್ರೈಲರನ್ನು ರಿಯಲ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿದರು. ಇನ್ನು ಅವರ ಮಗಳು ಐಶ್ವರ್ಯ ಅವರ ಫಸ್ಟ್ ಲುಕನ್ನು ಬಟರ್ ಫ್ಲೈ ಖ್ಯಾತಿಯ ನಟಿ ಪಾರುಲ್ ಯಾದವ್ ಅವರು ಲಾಂಚ್ ಮಾಡುವ ಮೂಲಕ ಉಪೇಂದ್ರ ಹಾಗೂ ಅವರ ಕುಟುಂಬಕ್ಕೆ ಜೊತೆಗೆ ಹೊಸ ಚಿತ್ರ ‘ದೇವಕಿ’ ಹಾಗೂ ಸಂಪೂರ್ಣ ಚಿತ್ರತಂಡಕ್ಕೆ ಯಶಸ್ಸಿನ ಹಾರೈಸಿದರು. ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಅವರಿಗೆ ಮಕ್ಕಳಾಗಿದ್ದರೂ ಅವರೊಬ್ಬ ಅಪ್ಪಟ ಕಲಾವುದೆಯಂತೆ ತಮ್ಮ ಬ್ಯೂಟಿಯನ್ನು ಕಾಪಾಡಿಕೊಂಡಿದ್ದಾರೆಂಬ ಮೆಚ್ಚುಗೆ ಮಾತುಗಳನ್ನು ಪಾರುಲ್ ಅವರು ಆಡಿದ್ದಾರೆ. ಪ್ರಿಯಾಂಕ ಅವರಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುವ ನಟ ಉಪೇಂದ್ರ ಅವರನ್ನು ಪಾರೂಲ್ ಹೊಗಳಿದ್ದಾರೆ.

ಈ ಚಿತ್ರದಲ್ಲಿ ಪ್ರಿಯಾಂಕ ಅವರ ಪಾತ್ರದ ಹೆಸರು ಕೂಡಾ ದೇವಕಿ ಆಗಿದ್ದು, ಇದೇ ಹೆಸರು ಚಿತ್ರಕ್ಕೆ ಬಹಳ ಸೂಕ್ತವಾದುದು ಎನಿಸಿದ ಕಾರಣ ಹೌರಾಬ್ರಿಡ್ಜ್ ಬದಲಾಗಿ ‘ದೇವಕಿ’ ಎಂದು ಶೀರ್ಷಿಕೆ ಬದಲಾವಣೆ ಮಾಡಿರುವ ಬಗ್ಗೆ ನಿರ್ದೇಶಕ ಲೋಹಿತ್ ಸ್ಪಷ್ಟೀಕರಣ ನೀಡಿದ್ದಾರೆ. ಹೆಚ್.ಸಿ. ವೇಣುರವರ ಛಾಯಾಗ್ರಹಣ ಚಿತ್ರಕ್ಕಿದ್ದು, ನೋಬಿನ್ ಪೌಲ್ ಸಂಗೀತ ಅಳವಡಿಸಿದ್ದಾರೆ. ನಿರ್ಮಾಪಕರಾಗಿ ಮೂವರು ಸಾಫ್ಟ್‌ವೇರ್ ಎಂಜಿನಿಯರ್​​​​ಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ಚಿತ್ರವು ಬಹು ಬೇಗ ಅಂದರೆ ಮುಂದಿನ‌ ತಿಂಗಳು ಚಿತ್ರ ತೆರೆಗೆ ಬರಲಿದೆ.

ಪ್ರಿಯಾಂಕಾ ಉಪೇಂದ್ರ ಜೊತೆ ಮಗಳು ಐಶ್ವರ್ಯ ನಟಿಸಿರುವ ದೇವಿಕಾ ಚಿತ್ರದ ಟೀಸರ್ ಇಲ್ಲಿದೆ ನೋಡಿ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here