ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ. ನಟನಾಗಿ, ನಿರ್ದೇಶಕನಾಗಿ ತನ್ನದೇ ಆದ ಛಾಪು ಮೂಡಿಸಿರುವ, ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದೆಲ್ಲದರ ನಡುವೆ ಜನ ಸೇವೆ ಮಾಡುವ ಉದ್ದೇಶದಿಂದ ಪ್ರಜಾಕೀಯ ಎಂಬ ಪಕ್ಷವೊಂದನ್ನು ಕಟ್ಟಿದ್ದರು ರಿಯಲ್ ಸ್ಟಾರ್. ಈ ಪಕ್ಷ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದಲ್ಲ. ಅದು ಉಪೇಂದ್ರ ಅವರ ಕನಸಿನ ಕೂಸು.  ಅವರ ಯೋಜನೆಗಳ‌‌‌ ಮೂರ್ತ ಸ್ವರೂಪ.  ತಾವು ಜನರಿಗಾಗಿ, ತಮ್ಮ ಅಭಿಮಾನಿಗಳಿಗಾಗಿ  ಏನಾದರೊಂದು ಒಳ್ಳೆಯದನ್ನು ಮಾಡಬೇಕೆಂಬ ಮಹದಾಸೆಯಿಂದ ಉತ್ತಮ ಧ್ಯೇಯದಿಂದ ಪ್ರಜಾಕೀಯ ಎಂಬ ಪಕ್ಷವನ್ನು ಹುಟ್ಟುಹಾಕಿದ್ದರು. ರಿಯಲ್ ಸ್ಟಾರ್ ಅವರು ಯಾವುದೇ ಕೆಲಸವನ್ನಾಗಲೀ ಆಲೋಚಿಸದೆ ಮಾಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.

 

ಆದರೆ ಈಗ ದೊರೆತಿರುವ ಮಾಹಿತಿಯ ಪ್ರಕಾರ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ರಾಜಕೀಯ ಜೀವನದಿಂದ ಮತ್ತೆ ಚಿತ್ರರಂಗಕ್ಕೆ ಬರಲಿದ್ದಾರಾ? ಪ್ರಜಾಕೀಯ ಪಕ್ಷವನ್ನು ನಿಲ್ಲಿಸಿ ಮತ್ತೆ ತಮ್ಮ ಸಿನಿಮಾ‌ ಕೆರಿಯರ್ ಕಡೆ ಸಕ್ರಿಯವಾಗಿ ತೊಡಗಿಕೊಳ್ಳುವರಾ ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಏಕೆಂದರೆ ಬಹಳ ಹಿಂದಿನಿಂದಲೂ ಅವರ ಅಭಿಮಾನಿಗಳು ಅವರಿಗೆ ನಿರ್ದೇಶನದ ಕಡೆ ಗಮನ ಹರಿಸಿ  ಎಂದು ಬೇಡಿಕೆಯನ್ನು ಇಟ್ಡಿದ್ದರು. ಇನ್ನು ಉಪೇಂದ್ರ ಅವರು ಕೂಡಾ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ ಎಂಬ ಹೇಳಿಕೆಗಳು ಕೂಡಾ ಕೇಳಿ ಬಂದಿದ್ದವು.

ಅದು ಅಲ್ಲದೆ ಉಪೇಂದ್ರ ಅವರು ಒಂದರ ಹಿಂದೆ ಒಂದರಂತೆ ಚಿತ್ರಗಳಲ್ಲಿ ತೊಡಗಿಕೊಂಡಿರುವ ಕಾರಣ ಅವರಿಗೆ ಪ್ರಜಾಕೀಯದಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಅಭಿಮಾನಿಗಳಿಗೆ ರೀಟ್ವೀಟ್ ಮಾಡುವ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ , ಅಭಿಮಾನಿಗಳಿಂದ ಪ್ರಜಾಕೀಯ, ಅವರೇ ಬೇಡವೆಂದರೆ ಪ್ರಜಾಕೀಯ ಇಲ್ಲ ಎಂದಿದ್ದಾರೆ. ಅಲ್ಲದೆ ರಜನಿಕಾಂತ್ ಅಭಿನಯದ 2.0 ಚಿತ್ರದ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ನಿರ್ದೇಶಕ ಶಂಕರ್ ಕೂಡಾ ತಮಗೆ ಉಪೇಂದ್ರ ಸ್ಪೂರ್ತಿ ಎಂದು ಹೇಳಿದನ್ನು ಅಭಿಮಾನಿಗಳು ಅವರಿಗೆ ಹೇಳುವ ಮೂಲಕ ನಿರ್ದೇಶನಕ್ಕೆ ಇಳಿಯುವಂತೆ ಕೇಳಿರುವ ಹಿನ್ನೆಲೆಯಲ್ಲಿ, ಉಪೇಂದ್ರ ಅವರು ಪ್ರಜಾಕೀಯದ ಬದಲು, ಮತ್ತೆ ಸಿನಿಮಾ ರಂಗದಲ್ಲಿ ಸಕ್ರಿರರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here