ಪ್ರಜಾಕೀಯದ ಮೂಲಕ ರಾಜಕೀಯಕ್ಕೆ ಕಾಲಿಟ್ಟಿರುವ ನಟ ಉಪೇಂದ್ರ ಅವರು ಇಂದು ಕರೆ ಕೊಟ್ಟಿರುವ ಪ್ರಜಾಕೀಯಕ್ಕಾಗಿ #UPPforKARNATAKA ಟ್ವಿಟರ್ ಅಭಿಯಾನ ಈಗ ದೇಶಾದ್ಯಂತ ಟಾಪ್ ಟ್ರೆಂಡಿಂಗ್ ನಲ್ಲಿದೆ.ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳುವಂತೆ ಈ ಟ್ರೆಂಡಿಂಗ್ ನ ಮೂಲ ಉದ್ದೇಶ ಪ್ರಜಾಕೀಯದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಮತ್ತು ವಿಚಾರಗಳನ್ನು ಅನಿಸಿಕೆಗಳನ್ನು ಈಗ ಹ್ಯಾಷ್ ಟ್ಯಾಗ್  ಮೂಲಕ ಬಳಸಿ ತಿಳಿಸುವುದು ಇದರ ಮೂಲ ಉದ್ದೇಶವಾಗಿದೆ. ಉಪೇಂದ್ರ ಅವರು ಈ ಟ್ವಿಟ್ಟರ್ ಅಭಿಯಾನಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಅದರಲ್ಲಿ ಅವರು ಸತ್ ಪ್ರಜೆ ಕುರಿತಾಗಿ ಮಾಡಿರುವ ಟ್ವೀಟ್ ಗಳನ್ನು ಜನರನ್ನು ಗಮನ ಸೆಳೆಯುತ್ತಿವೆ.

ಇನ್ನು ಉಪೇಂದ್ರ ಅವರು ಪ್ರಜಾಕೀಯಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ನಟ-ನಟಿಯರ ಅಭಿಮಾನಿಗಳು ಸಹ ಸಾಥ್ ನೀಡಿದ್ದು ಟ್ವಿಟರ್ ನಲ್ಲಿ  #UPPforKARNATAKA   ಹಾಕಿ ಉಪೇಂದ್ರ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಪ್ರತಿ ಬಾರಿ ಹೊಸ ಕನಸು ,  ಹೊಸ ಯೋಜನೆಗಳನ್ನು ಜನರ ಮುಂದೆ ತೆರೆದಿಡುವ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಮೂಲಕ ರಾಜಕೀಯದಲ್ಲಿ ಬದಲಾವಣೆ ತರಲು ಹೊರಟಿರುವುದು ಎಲ್ಲರಿಗೂ ತಿಳಿದಿದೆ.

ಆದರೆ ಈ ವಿಚಾರವನ್ನು ಮತ್ತಷ್ಟು ಜಾಗೃತವಾಗಿ ಜನರಿಗೆ ತಲುಪಿಸುವ ಸಲುವಾಗಿ ಅಭಿಯಾನ ಆರಂಭಿಸಿದ್ದು ಇದರಲ್ಲಿ ಉಪೇಂದ್ರ ಹಾಗೂ ಅವರ ಅಭಿಮಾನಿಗಳು ಯಶಸ್ವಿಯಾಗಿದ್ದಾರೆ. ಮುಂಬರುವ ಕರ್ನಾಟಕದ ಉಪ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದಿಂದ ಸ್ಪರ್ಧಿಗಳು ಸ್ಪರ್ಧಿಸಲಿದ್ದು ಪ್ರಜಾಕಿಯ ಪಕ್ಷಕ್ಕೆ ಈ ಬಾರಿ ಜನರು ಮತ ನೀಡುತ್ತಾರಾ ಕಾದುನೋಡಬೇಕಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here