ಕನ್ನಡ ಚಿತ್ರರಂಗದಲ್ಲೀಗ ಮಲ್ಟಿಸ್ಟಾರ್ ಮೇನಿಯಾ ಸುರುವಾಗಿದೆ.ದೊಡ್ಡ ದೊಡ್ಡ ಸ್ಟಾರ್ ಗಳೆಲ್ಲಾ ಒಂದೇ ಚಿತ್ರದಲ್ಲಿ ಅಭಿನಯಿಸಿ ಗೆಲ್ಲುತ್ತಿದ್ದಾರೆ ,ಇತ್ತೀಚಿನ ದೊಡ್ಮನೆ ಹುಡ್ಗ , ಮಫ್ತಿ ,ಕುರುಕ್ಷೇತ್ರ ,ದಿ ವಿಲನ್, ಮುಕುಂದ ಮುರಾರಿ ಚಿತ್ರಗಳಲ್ಲಿ ಮಲ್ಟಿಸ್ಟಾರ್ ಗಳು ಒಟ್ಟಾಗಿ ನಟಿಸಿದ್ದರು.ಈಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಬಿಗ್ ಬಜೆಟ್ ನ ಬಿಗ್ ಸ್ಟಾರ್ ಗಳು ಒಟ್ಟಾಗಿ ಕಾಣಿಸಿಕೊಳ್ಳಲು ಕಥೆ ತಯಾರಿಯಲ್ಲಿದೆ. ಕುರುಕ್ಷೇತ್ರ ಮೂಲಕ ದೊಡ್ಡ ಕಲಾವಿದರನ್ನೆಲ್ಲಾ ಒಟ್ಟಿಗೆ ಸೇರಿಸಿ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಮುನಿರತ್ನ ಈ ಹೊಸ ವಿಷಯವನ್ನು ಇಂದು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ.ಇದೇ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ , ಸುದೀಪ್ ಮತ್ತು ಉಪೇಂದ್ರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು ಈ ಚಿತ್ರಕ್ಕೆ ಚಾಣಾಕ್ಷ ಚಂದ್ರಗುಪ್ತ ಎಂದು ಹೆಸರನ್ನು ಕೂಡ ಫಿಕ್ಸ್ ಮಾಡಲಾಗಿದೆ ಎಂದು ಕುರುಕ್ಷೇತ್ರ ಚಿತ್ರದ ನಿರ್ಮಾಪಕರ ಮುನಿರತ್ನ ತಿಳಿಸಿದ್ದಾರೆ.ಚಿತ್ರದ ಕಥೆ ಸಿದ್ಧಪಡಿಸಲಾಗುತ್ತಿದ್ದು ಕಥೆ ಸಿದ್ಧವಾಗುತ್ತಿದ್ದಂತೇ ಈ ಮೂರು ಸ್ಟಾರ್ ಗಳನ್ನು ಒಪ್ಪಿಸುವ ಜವಬ್ದಾರಿ ನನ್ನದು ಎಂದು ಮುನಿರತ್ನ ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಈ ಮೂರು ಸ್ಟಾರ್ ನಟರ ಅಭಿಮಾನಿಗಳು ಸಂಭ್ರಮದಲ್ಲಿ ಇದ್ದು ಆದಷ್ಟು ಬೇಗ ಶುರುವಾಗಲಿ ಎಂದು ಕಾಯುತ್ತಿದ್ದು ಸದ್ಯದಲ್ಲೇ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here