ಐ ಲವ್ ಯೂ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಅವರು ಒಂದು ಹಾಡಿನಲ್ಲಿ ಬೋಲ್ಡ್ ಆಗಿ ನಟಿಸಿರುವುದು ಈಗ ಎಲ್ಲರಿಗೂ ತಿಳಿದ ವಿಷಯವೇ. ಇನ್ನು ಈ ಹಾಡಿನ ದೃಶ್ಯಗಳ ಬಗ್ಗೆ ನಟಿ ಇತ್ತೀಚಿಗೆ ನಾನು ಹಾಗೇ ಕಾಣಿಸಿಕೊಂಡಿದ್ದರಿಂದ ನನ್ನ ತಂದೆ ತಾಯಿಗೆ ಬಹಳ ನೋವಾಗಿದೆ, ಅವರು ನನ್ನನ್ನು ಇನ್ನೂ ಚಿಕ್ಕ ಮಗುವಿನಂತೆ ನೋಡುತ್ತಾರೆ. ಆದರೆ ತೆರೆಯ ಮೇಲೆ ನನ್ನನ್ನು ಆ ರೀತಿ ನೋಡಿ ಅವರು ಅದನ್ನು ಸಹಿಸಿಕೊಳ್ಳದಾದರು. ಅದಕ್ಕೆ ನಾನು ಕ್ಷಮೆ ಕೇಳುವುದಾಗಿ ಅವರು ಕಣ್ಣೀರು ಸುರಿಸಿದ್ದರು. ಇದು ದೊಡ್ಡ ಸುದ್ದಿಯಾಗಿದ್ದು ಕೂಡಾ ವಾಸ್ತವವಾಗಿದೆ.

ಇದಕ್ಕೆ ಚಿತ್ರದ ನಾಯಕ ನಟ ರಿಯಲ್ ಸ್ಟಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಚಿತಾ ರಾಮ್ ಅವರು ಇದೇ ಮೊದಲ ಬಾರಿಗೆ ಇಂತಹುದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಪಾತ್ರವನ್ನು ಜನ ಮೆಚ್ಚಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರಿಗೂ ಕೂಡಾ ರಚಿತ ಅವರ ಪಾತ್ರ ಇಷ್ಟವಾಗಿದೆ. ಸ್ವತಃ ಅವರ ತಾಯಿಯೇ ಅವರ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಅವರ ತಂದೆಯವರಿಗೆ ಇಷ್ಟವಾಗಲಿಲ್ಲ ಎಂದು ನೋವಾಗಿದೆ ಎಂದು ಹೇಳಿದ್ದಾರೆ. ಆದರೆ ಅವರ ತಂದೆಯವರಿಗೂ ಗೊತ್ತಿದೆ ಸಿನಿಮಾ ಬೇರೆ, ಜೀವನ ಬೇರೆ ಅಂತ. ಕಲಾವಿದರೆಂದ ಮೇಲೆ ಹೀಗೆ ಕೆಲವು ಸನ್ನಿವೇಶಗಳು ಬರುತ್ತವೆ ಎಂದಿದ್ದಾರೆ.

ಅವರು ಮಾತು ಮುಂದುವರೆಸಿ ಅವರಿಗೆ ಇಷ್ಟವಿಲ್ಲದಿದ್ದರೆ ಆಗಲೇ ಅದನ್ನು ಹೇಳಬಹುದಿತ್ತು ಎಂದಿದ್ದಾರೆ. ಅಲ್ಲದೆ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಕಲಾವಿದರೇ ಎಂತೆಂಥಾ ಪಾತ್ರಗಳನ್ನೆಲ್ಲಾ ಮಾಡಿದ್ದಾರೆ. ಇದು ಕೂಡಾ ಒಂದು ಪಾತ್ರ ಅಷ್ಟೆ. ಅದನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಇದನ್ನೊಂದು ದೊಡ್ಡ ವಿಷಯವನ್ನಾಗಿ ಮಾಡುವ ಅಗತ್ಯವಿಲ್ಲ. ಫ್ಯಾಮಿಲಿ ಸಮೇತ ಬಂದು ಈ ಸಿನಿಮಾವನ್ನು ನೋಡಿ ಎಂದು ಅವರು ಪ್ರೇಕ್ಷಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here