ಸತ್ತ ನಂತರ ಶವ ಸಂಸ್ಕಾರದ ವಿಧಾನಗಳು ಹಲವರಲ್ಲಿ ಹಲವು ವಿಧದಲ್ಲಿದೆ. ಕೆಲವರು ಚಿತೆಗೆ ಬೆಂಕಿ ಇಟ್ಟು ಶವವನ್ನು ಸುಟ್ಟರೆ, ಮತ್ತೆ ಕೆಲವರು ಹೂತು ಸಮಾಧಿ ಮಾಡುತ್ತಾರೆ. ಹೀಗೆ ನೆಲದಲ್ಲಿ ಹೂತು ಶವಸಂಸ್ಕಾರ ಮಾಡುವ ವಿಧಾನದಲ್ಲಿ ಸಾಮಾನ್ಯವಾಗಿ ಊರಿನ ಹೊರಗೆ ಸ್ಮಶಾನದಲ್ಲಿ ಅಲ್ಲಿ ಹೆಣವನ್ನು ಸಮಾಧಿ ವ್ಯವಸ್ಥೆ ಇರುತ್ತದೆ. ಆದರೆ ಭಾರತದ ಒಂದು ಹಳ್ಳಿಯಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಹಲವು ಕುಟುಂಬಗಳು ತಮ್ಮ ಮನೆಯಲ್ಲಿ ಮರಣ ಹೊಂದಿದವರನ್ನು ತಮ್ಮ ಮನೆಗಳಲ್ಲೋ, ಮನೆಯಿಂದ ಹೊರಗೆ ಅಂಗಳದಲ್ಲೋ ಅಥವಾ ಮನೆಗಳ ಹಿಂದೆ , ಮುಂದೆ ಸಮಾಧಿ ಮಾಡುವ ಪದ್ಧತಿ ಇಟ್ಟು ಕೊಂಡಿದ್ದಾರೆ.

ಹೀಗೆ ಮನೆಗಳಲ್ಲೇ, ಮನೆಗಳ ಬಳಿಯೇ ಶವಸಂಸ್ಕಾರ ಮಾಡುವ ಆ ಹಳ್ಳಿ ಇರುವುದು ಉತ್ತರ ಪ್ರದೇಶದ ಆಗ್ರಾದ ಬಳಿಯ ಅಂಚೇರಾ ಬ್ಲಾಕ್ ನ‌ ಚಾಹ್ ಪೊಖಾರ್ ಎಂಬಲ್ಲಿ ಇದೆ. ಇಲ್ಲಿ ವಾಸವಾಗಿರುವವರಲ್ಲಿ ಬಹುತೇಕ ಇಸ್ಲಾಂ‌ ಧರ್ಮದವರಾಗಿದ್ದು, ಇಲ್ಲಿ ಮನೆಗಳಲ್ಲಿ ಯಾರಾದರೂ ಮರಣ ಹೊಂದಿದರೆ ಅವರು ಬೇರೆ ದಾರಿಯಿಲ್ಲದೆ ಶವವನ್ನು ತಮ್ಮ ಸ್ವಂತ ಜಾಗಗಳಲ್ಲೇ ಸಂಸ್ಕಾರ ಮಾಡಬೇಕಾಗುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಮನೆಗಳ ಒಳಗೆ, ಸುತ್ತ ಮುತ್ತ ಎಲ್ಲಾ ಕಡೆ ಸಮಾಧಿಗಳೇ ಇದೆ.

ಇದಕ್ಕೆ ಪ್ರಮುಖವಾದ ಕಾರಣ ಅವರಿಗೆ ಸ್ಮಶಾನದ ಜಾಗ ಇಲ್ಲದಿರುವುದು. ಸರ್ಕಾರಕ್ಕೆ ಇವರು ಮನವಿ ಮಾಡಿಕೊಂಡರು ಕೂಡಾ ಇದುವರೆವಿಗೂ ಸ್ಮಶಾನಕ್ಕೆ ಜಾಗವೇ ಸಿಗದ ಕಾರಣ , ಅಲ್ಲಿನ ಮನೆಗಳ ಹಿಂದೆ ಮುಂದೆ ಎಲ್ಲಾ ಹೆಣಗಳನ್ನು ಹೂತಿಡಲಾಗಿದೆ. ಪರಿಸ್ಥಿತಿ ಹೇಗಿದೆಯೆಂದರೆ ಹೆಂಗಸರು ಮಕ್ಕಳನ್ನು ಹೂತ ಸ್ಥಳದ ಪಕ್ಕದಲ್ಲೇ ಅಡುಗೆ ಮಾಡುತ್ತಾರೆ. ಮನೆಯ ಹಿತ್ತಲಲ್ಲಿ ಹಿರಿಯರು ಮಂಚದ ಮೇಲೆ ಮಲಗಿರುವುದು ಕೂಡಾ ಅಲ್ಲಿ ಸಮಾಧಿಗಳ ಪಕ್ಕದಲ್ಲೇ. ಇನ್ನು ಮನೆಗಳ ಒಳಗೆ ಕೂಡಾ ಸಮಾಧಿ ಮಾಡಲಾಗಿದೆ. ಅಲ್ಲಿನ ಕೆಲವರು ನಮ್ಮಂತಹ ಬಡವರಿಗೆ ಸಾವಿನಲ್ಲೂ ಗೌರವವಿಲ್ಲ ಎಂದು ಬೇಸರ ಪಡುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here