ಉತ್ತರ ಕರ್ನಾಟಕ ಬೇರೆ  ಮಾಡುವ ಬೆಂಕಿ‌ ಹಚ್ಚಿದ್ದಾನೆ  ಎಂದು ಏಕವಚನದಲ್ಲಿಯೇ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಏಕವಚನದಲ್ಲೇ ಉಮೇಶ್ ಕತ್ತಿ ಮಾತನಾಡಿದ್ದಾರೆ. ಇಂದು ಬೆಳಗಾವಿಯಲ್ಲಿ ನಡೆದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಸಂಬಂಧ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಉಮೇಶ್ ಕತ್ತಿ‌ ಅವರು ಮಾತನಾಡಿ ಇಂದು ಉತ್ತರ ಕರ್ನಾಟಕ ಹೊತ್ತಿ ಉರಿಯುತ್ತಿರುವುದಕ್ಕೆ ಅಂದು ಕುಮಾರಸ್ವಾಮಿ ಅವರು ನೀಡಿದ ಆ ಹೇಳಿಕೆಯೇ ಕಾರಣ ಅಂದು ಕುಮಾರಸ್ವಾಮಿ ಅವರು ಮಾತನಾಡುವಾಗ ಏನು ಅವರಿಗೆ ಪ್ರತ್ಯೇಕ ರಾಜ್ಯ ಬೇಕ ಪ್ರತ್ಯೇಕ ರಾಜ್ಯ ಮಾಡಿಕೊಟ್ಟರೆ ಅದನ್ನು ನಿಭಾಯಿಸಲು ಸಾಧ್ಯವೇ

ಎಂದು ಹೇಳಿಕೆ ಕೊಟ್ಟು ನಂತರ ಉತ್ತರ ಕರ್ನಾಟಕ ಭಾಗದ ಜನರು ನನಗೆ ಓಟ್ ಹಾಕಿಲ್ಲ ಅಂತಹದರಲ್ಲಿ‌ ನನ್ನ ವಿರುದ್ದ ಹೇಗೆ ಮಾತನಾಡುತ್ತಾರೆ ಎಂದು ಹೇಳಿದ್ದರು. ಈಗ ಅವರ ಹೇಳಿಕೆಗಳೇ ಇಂದು  ಉತ್ತರ ಕರ್ನಾಟಕ ಭಾಗದ ಜನರು  ತುರುಗಿಬೀಳಕು ಕಾರಣ ಎಂದು ಮಾತನಾಡಿದ ಉಮೇಶ್ ಕತ್ತಿ ಮಾತನಾಡುವಾಗ ಕುಪಿತಗೊಂಡು ಉತ್ತರ ಕರ್ನಾಟಕ ಬೇರೆ ಮಾಡುವ ಬೆಂಕಿ ಹಚ್ಚಿದ್ದಾನೆ ಅವನು ಪ್ರತ್ಯೇಕ ರಾಜ್ಯ ಕೊಡಲಿ ನಾವು ನೋಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೆ ಚ್ ಡಿ ಕುಮಾರಸ್ವಾಮಿ ವಿರುದ್ದ ಉಮೇಶ್ ಕತ್ತಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here