ಉತ್ತರಾಖಂಡದ ಕೆಚ್ಚೆದೆಯ ಸೈನಿಕರು ದೇಶವನ್ನು ರಕ್ಷಿಸುವ ವಿಷಯ ಬಂದಾಗಲೆಲ್ಲಾ ತಮ್ಮ ಧೈರ್ಯ ಸಾಮರ್ಥ್ಯವನ್ನು ತೋರಿದ್ದಾರೆ. ಈಗ ಮತ್ತೊಮ್ಮೆ ಈ ವೀರ ಯೋಧರು ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಉತ್ತರಾಖಂಡದ ಇಬ್ಬರು ಕೆಚ್ಚೆದೆಯ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಇಬ್ಬರು ಸೈನಿಕರು ಗಡಿಯಲ್ಲಿ ಉಗ್ರರ ಜೊತೆ ನಡೆದ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ವಾಸ್ತವವಾಗಿ, ಮತ್ತೊಮ್ಮೆ ಗಡಿಯಲ್ಲಿ ಭಯೋತ್ಪಾದಕರ ದುಷ್ಕೃತ್ಯದ ಪಿತೂರಿಗಳು ಪ್ರಾರಂಭವಾಗಿದ್ದು, ಸೇನೆ ಕೂಡ ಭಯೋತ್ಪಾದಕರ ದುಷ್ಕೃತ್ಯಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದು, ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು 5 ಉಗ್ರರನ್ನು ಕೊಂದು ಹಾಕಿದೆ.

ಈ ಉಗ್ರರ ವಿರುದ್ಧ ನಡೆದ ಈ ಹೋರಾಟದಲ್ಲಿ ಸುಬೇದಾರ್ ಸೇರಿದಂತೆ ಐದು ಸೈನಿಕರು ಪ್ರಾಣ ತ್ಯಾಗ ‌ಮಾಡಿದ್ದಾರೆ. ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಜವಾನ್ ದೇವೇಂದ್ರ ಸಿಂಗ್ ಮತ್ತು ಪೌರಿ ಗರ್ವಾಲ್ ಮೂಲದ ಪ್ಯಾರಾ ಟ್ರೂಪರ್ ಅಮಿತ್ ಕುಮಾರ್ ಹುತಾತ್ಮರಾದ ಯೋಧರಾಗಿದ್ದಾರೆ. ಆ ಸ್ಥಳದಿಂದ ದೊಡ್ಡ ಪ್ರಮಾಣದ ಸಿಡಿ ಮದ್ದುಗುಂಡಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಸೈನ್ಯದ ಅಧಿಕಾರಿಗಳು ಈ ಘಟನೆ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಪ್ರದೇಶಕ್ಕೆ ಸಂಬಂಧಿಸಿದ್ದು ತಿಳಿಸಿದ್ದಾರೆ.

ಶಮ್ಸ್ಬರಿ ಶ್ರೇಣಿಯಿಂದ ಉಗ್ರರು ಭಾರತೀಯ ಭೂಪ್ರದೇಶಕ್ಕೆ ಕಾಲಿಟ್ಟರು ಎನ್ನಲಾಗಿದ್ದು, ಇಲ್ಲಿನ ಎಲ್ಲ ಭಯೋತ್ಪಾದಕರು ಸೆಕ್ಟರ್‌ನ ಪೋಸ್ವಾಲ್ ಪ್ರದೇಶದ ಗುರ್ಜರ್ ಧೋಕ್‌ನಲ್ಲಿ ತಲೆಮರೆಸಿಕೊಂಡಿದ್ದರು. ಭಾರತೀಯ ಸೇನೆಗೆ ಅದರ ಸುಳಿವು ಸಿಕ್ಕ ಕೂಡಲೇ ಸೈನ್ಯವು ಭಯೋತ್ಪಾದಕರನ್ನು ಮಟ್ಟ ಹಾಕಲು ತನ್ನ ಕಾರ್ಯಾಚರಣೆ ಆರಂಭಿಸಿತು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಇಬ್ಬರು ವೀರ ಯೋಧರು ಹುತಾತ್ಮರಾಗಿದ್ದು, ದೇಶದ ಈ ಧೈರ್ಯಶಾಲಿ ಪುತ್ರರಿಗೆ ನಮ್ಮ ಭಾವಪೂರ್ಣ ನಮನ ಅರ್ಪಿಸಿ. ಅವರ ಕುಟುಂಬಗಳಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ದೇವರು ನೀಡಲಿ ಎಂದು ಪ್ರಾರ್ಥಿಸೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here