ಕಾಲಚಕ್ರ ಸ್ಯಾಂಡಲ್ ವುಡ್ ನಲ್ಲಿ ತೆರೆ ಮೇಲೆ ಬರಲು ಅದ್ದೂರಿಯಾಗಿ ಸಿದ್ಧವಾಗುತ್ತಿರುವ ಭರ್ಜರಿ ಸಿನಿಮಾ‌ ಇದು. ರಶ್ಮಿ ಫಿಲ್ಮ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ವಸಿಷ್ಠ ಎನ್ ಸಿಂಹ ಅವರು ನಾಯಕನಾಗಿ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಸಿನಿಮಾದ ನಿರ್ದೇಶನ ಸಾರಥ್ಯವನ್ನು ವಹಿಸಿದ್ದಾರೆ ಸುಮಂತ್ ಕ್ರಾಂತಿ ಅವರು. ಲಾಕ್ ಡೌನ್ ನಂತರದಲ್ಲಿ ಸಿನಿಮಾ ಕಾರ್ಯಗಳು ಸ್ತಬ್ಧವಾದಾಗಿನಿಂದ ಹೊಸ ಸಿನಿಮಾ, ಹೊಸ‌ ಹಾಡುಗಳನ್ನು ನೋಡಲು ಹಾತೊರೆಯುತ್ತಿದ್ದ ಸಿನಿ ಪ್ರೇಮಿಗಳಿಗಾಗಿ ಇಂದು ವರ ಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು ಕಾಲಚಕ್ರ ಸಿನಿಮಾ ತಂಡದವರು ಭರ್ಜರಿ ಹಬ್ಬದೂಟದಂತಹ ಹಾಡೊಂದನ್ನು ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ಸಾರೆ.

ಕಾಲ ಚಕ್ರ ಸಿನಿಮಾದ “ತರಗೆಲೆ ಸಂಸಾರ ತರವಲ್ಲ ತರವಲ್ಲಾ” ಎಂಬ ಅದ್ಬುತ ಹಾಡು ಯೂ ಟ್ಯೂಬ್ ನಲ್ಲಿ ಹುಚ್ಚೆಬ್ಬಿಸುತ್ತಿದೆ. ಹಾಡಿನ ಪ್ರಮುಖ ಆಕರ್ಷಣೆಯು ಅದರ ಅದ್ದೂರಿ ಮೇಕಿಂಗ್ ಆಗಿದ್ದು, ಈ ಅದ್ದೂರಿತನಕ್ಕೆ ಭರ್ಜರಿಯಾದ ಮೆರುಗನ್ನು ನೀಡಿದೆ ಗುರುಕಿರಣ್ ಅವರ ಸಂಗೀತ, ಇನ್ನು ಹಾಡನ್ನು ತನ್ನ ಸಿರಿಕಂಠದಿಂದ ಹಾಡಿ ಜೀವ ತುಂಬಿದ್ದಾರೆ ಗಾಯಕ ಕೈಲಾಶ್ ಖೇರ್. ಇನ್ನು ಹಾಡಿಗೆ ತಕ್ಕಂತಹ ನೃತ್ಯ ಸಂಯೋಜನೆ ಕೂಡಾ ಬಹಳ ಆಕರ್ಷಕವಾಗಿದ್ದು ನೋಡುಗರ ಮನಸ್ಸನ್ನು ಸೆಳೆದಿಡುವ ತಾಕತ್ತು ಈ ಹಾಡಿನಲ್ಲಿದೆ ಎ‌ಂಬುದು ನಿಜ.

ಈ ಹಾಡಿಗೆ ಅತ್ಯದ್ಭತವಾದ ಪದಗಳೊಂದಿಗೆ ಒಂದು ಉತ್ಕೃಷ್ಟ ಸಾಹಿತ್ಯದ ಸವಿಯನ್ನು ನೋಡುಗರು ಪಡೆಯುವ ಹಾಗೆ ಹಾಡನ್ನು ಬರೆದಿದ್ದಾರೆ ಸಂತೋಷ್ ನಾಯಕ್. ಒಂದೊಂದು ಸಾಲು ಕೂಡಾ ಜೀವನದ ವಾಸ್ತವ ಅಥವಾ ಕಟು ಸತ್ಯವನ್ನು ನಮ್ಮ ಮುಂದೆ ಅನಾವರಣ ಮಾಡುತ್ತಾ, ಹೌದಲ್ಲವೇ ಇದೆಲ್ಲಾ ನಿಜವಲ್ಲವೇ ಎಂದು ಆಲೋಚಿಸುವಂತೆ ಮಾಡುವ ಹಾಡಿನ ಸಾಲುಗಳು ನಿಜಕ್ಕೂ ಅರ್ಥಪೂರ್ಣ ಎನಿಸಿದೆ. ಕಾಲಚಕ್ರ ಸಿನಿಮಾದ ಈ ಹಾಡು ಒಂದೆಡೆ ಮನರಂಜನೆ ಜೊತೆಗೆ ಇನ್ನೊಂದೆಡೆ ಮನಮೋಹಕ ಸಾಹಿತ್ಯದ ಜೊತೆಗೆ ಎಲ್ಲರನ್ನೂ ರಂಜಿಸುತ್ತಿದೆ.ಈ ಬೊಂಬಾಟ್ ಹಾಡು ನೋಡಿ… ಕಾಲಚಕ್ರ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರೊಟ್ಟಿಗೆ ರಕ್ಷಾ, ದೀಪಕ್ ಶೆಟ್ಟಿ ಅವರು ಕೂಡಾ ನಟಿಸಿದ್ದು, ಸಿನಿಮಾದ ಹಾಡು ನೋಡಿದರೆ ಸಿನಿಮಾ‌ ಒಂದು ಜಾದೂ ಅಂತು ಖಚಿತವಾಗಿ ಮಾಡಲಿದೆ ಎಂದು ನಿರೀಕ್ಷೆ ಮಾಡಬಹುದಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here