ಬೆಂಗಳೂರು,ಸೆ.30: ತಮಿಳುನಾಡಿಗೆ ನೀರು ಹರಿಸದಂತೆ ನಿನ್ನೆ ಕನ್ನಡ ಪರ ಸಂಘಟನೆಗಳು ಸೇರಿದ ವಿವಿಧ ಸಂಘಟನೆಗಳು ಇಡೀ ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಅದರಂತೆ ನಿನ್ನೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೂ ಇಡೀ ಕರ್ನಾಟಕದಲ್ಲಿ ಬಂದ್ ಗೆ ಸಂಪೂರ್ಣವಾಗಿ ಬೆಂಬಲ ಸಿಕ್ಕಿತು.
ಇದರ ಬೆನ್ನಲ್ಲೇ ನೆನ್ನೆ ಮಧ್ಯಾಹ್ನ ದೆಹಲಿಯಲ್ಲಿ ತಮಿಳುನಾಡಿಗೆ ಅಕ್ಟೋಬರ್ 15ರವರೆಗೆ 3,000 ನೀರು ಹರಿಸುವಂತೆ ಸಿಡಬ್ಲ್ಯೂಎಂಎ ಆದೇಶ ನೀಡಿದೆ.
ಈ ಆದೇಶವನ್ನು ಖಂಡಿಸಿ ಇಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ಚಳುವಳಿ ನಡೆಸಲಿದ್ದಾರೆ. ಅಕ್ಟೋಬರ್ 5 ಕ್ಕೆ ರಂದು ಬೆಂಗಳೂರಿನಿಂದ ವಾಹನಗಳಲ್ಲಿ ಕೆಆರ್ ಎಸ್ ಗೆ ತೆರಳಿ ಪ್ರತಿಭಟನೆ ನಡೆಸಲಿದ್ದಾರೆ. ಕಾವೇರಿ ನದಿ ನೀರು ವಿಚಾರದಲ್ಲಿ ನಿರಂತರವಾಗಿ ಹೋರಾಟವನ್ನು ನಡೆಸುತ್ತೇವೆ ಎಂದು ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.
ಅಲ್ಲದೆ ನಿನ್ನೆ ಕರ್ನಾಟಕ ಬಂದ್ ವೇಳೆ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಅವರು ದುಃಖವನ್ನು ಧರಿಸಿ ತಲೆಯ ಮೇಲೆ ಖಾಲಿವನ್ನು ಹೊತ್ತುಕೊಂಡು ಭಿನ್ನವಾದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.