ಕನ್ನಡ ಪರ ಹೋರಾಟಗಾರ ಎಂದೇ ಹೆಸರಾಗಿರುವ ವಾಟಾಳ್ ನಾಗರಾಜ್ ಅವರು ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳಲ್ಲಿ ಜನರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದರು. ಅವರು ಸಾರ್ವಜನಿಕರಿಗೆ ಅಲ್ಲದೇ ಹೋದರೂ ಪರವಾಗಿಲ್ಲ ಅರ್ಚಕರು, ಮೌಲ್ವಿಗಳು ಹಾಗೂ ಪಾದ್ರಿಗಳಿಗೆ ಅವಕಾಶವನ್ನು ಮಾಡಿಕೊಡಿರೆಂದು ಸರ್ಕಾರದ ಮುಂದೆ ತನ್ನ ಬೇಡಿಕೆಯನ್ನು ಇಟ್ಟಿದ್ದರು‌. ಅಷ್ಟಕ್ಕೇ ಸುಮ್ಮನಾಗದ ವಾಟಾಳ್ ನಾಗರಾಜ್ ಅವರು ಸರ್ಕಾರದ ಆದೇಶವನ್ನು ಪಾಲಿಸದೆ, ಅದನ್ನು ಮುರಿಯುವ ಪ್ರಯತ್ನಕ್ಕೆ ಕೂಡಾ ಕೈ ಹಾಕಿದ್ದರು.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ಎಲ್ಲರನ್ನು ಕೂಡಾ ಅವರವರ ಮನೆಗಳಲ್ಲೇ ಇರಿ ಎನ್ನುವ ಆದೇಶವನ್ನು ಕೂಡಾ ನೀಡಲಾಗಿದೆ. ಆದರೆ ವಾಟಾಳ್ ನಾಗರಾಜ್ ಅವರು ತಮ್ಮ ಆಗ್ರಹದತ್ತ ಸರ್ಕಾರದ ಗಮನವನ್ನು ಸೆಳೆಯುವ ಸಲುವಾಗಿ ಲಾಕ್ ಡೌನ್ ಅನ್ನು ಮೀರಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಏಕಾಂಗಿಯಾಗಿ ಸತ್ಯಾಗ್ರಹ ಮಾಡಲು ಮುಂದಾಗಿದ್ದರು.‌ ಸದ್ಯಕ್ಕೆ ಹೊರಗೆ ಬರುವುದೇ ಕಾನೂನು ಉಲ್ಲಂಘನೆ ಎನ್ನುವಾಗ ಸತ್ಯಾಗ್ರಹ ಎನ್ನುವುದು ದೊಡ್ಡ ವಿಷಯವೇ ಸರಿ.

ವಾಟಾಳ್ ನಾಗರಾಜ್ ಅವರು ಈ ನಡೆಯನ್ನು ಗಮನಿಸಿ, ವಾಟಾಳ್ ನಾಗರಾಜ್ ಅವರನ್ನು ಪೋಲಿಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ಪೋಲಿಸರ ಪರಿವೀಕ್ಷಣೆಯಲ್ಲಿ ವಾಟಾಳ್ ನಾಗರಾಜ್ ಅವರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ. ವಾಟಾಳ್ ನಾಗರಾಜ್ ಅವರನ್ನು ಈ ಸಂದರ್ಭದಲ್ಲಿ ಗೃಹಬಂಧನದಲ್ಲಿ ಇಡದೇ ಅನ್ಯ ಮಾರ್ಗವಿಲ್ಲ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here