ಕೊರೊನಾ ರೋಗ ಎಲ್ಲೆಲ್ಲೂ ಹರಡುವಾಗಲೇ ಈ ವಿಷಯದ ಬಗ್ಗೆ ಒಂದು ಹೊಸ ಜಿಜ್ಞಾಸೆ ಹುಟ್ಟಿ ಕೊಂಡಿದೆ. ಆಂಧ್ರದಲ್ಲಿ ತನ್ನ ಶಕ್ತಿ ಹಾಗೂ ತನ್ನ ಆಧ್ಯಾತ್ಮಿಕತೆ ಹೆಸರಾದ ವೀರ ಬ್ರಹ್ಮಯ್ಯನವರು ಆಂಧ್ರದಲ್ಲಿ ಅವರು ವೀರಬ್ರಹ್ಮೇಂದ್ರ ಎಂದೇ ಹೆಸರಾದವರು, ಅವರು ಬರೆದಿರುವ ಕಾಲಜ್ಞಾನ ಬಹಳಷ್ಟು ಪ್ರಸಿದ್ಧ. ಅದರಲ್ಲಿ ಅವರು ಭವಿಷ್ಯದಲ್ಲಿ ನಡೆಯುವ ಅನೇಕ ವಿಚಾರಗಳನ್ನು ಬರೆದಿದ್ದು ಅದೆಲ್ಲಾ ನಡೆದಿದೆ ಎಂಬುದು ಹಲವರ ಅಂಬೋಣ. ಅದರಂತೆ ಈಗ ವೀರ ಬ್ರಹ್ಮಯ್ಯನವರ ಕಾಲಜ್ಞಾನದಲ್ಲಿ ಈಶಾನ್ಯದಿಂದ ಹರಡುವ ರೋಗವೊಂದರ ಬಗ್ಗೆ ಅವರು ಹೇಳಿರುವ ವಿಚಾರ ಮುನ್ನೆಲೆಗೆ ಬಂದಿದೆ.

ಈಶಾನ್ಯ ದಿಕ್ಕಿನಲ್ಲಿ ವಿಷಗಾಳಿ ಹುಟ್ಟಿತಯ್ಯಾ.. ಲಕ್ಷಮಂದಿ ಪ್ರಜೆಗಳು ಸತ್ತರಯ್ಯಾ.. ಕೋರಂಟಿ ಅನ್ನೋ ರೋಗ ಕೋಟಿ ಮಂದಿಗೆ ತಗುಲಿ ಕೋಳಿ ಹಾಗೆ ಕೂಗಿ ಸತ್ತರಯ್ಯಾ’. ಇದು ವೀರಬ್ರಹ್ಮೇಂದ್ರಸ್ವಾಮಿಯ ಕಾಲಜ್ಞಾನಂ ಕೃತಿಯಲ್ಲಿ ತೆಲುಗಿನಲ್ಲಿ ಇರುವ ಸಾಲುಗಳ ಅನುವಾದ.
ವೀರ ಬ್ರಹ್ಮಯ್ಯನವರು ತಮ್ಮ ಕಾಲ ಜ್ಞಾನದಲ್ಲಿ ಶತಮಾನಗಳ ಹಿಂದೆಯೇ ಈಶಾನ್ಯದಿಂದ ಹರಡುವ ರೋಗದ ಬಗ್ಗೆ ಬರೆದಿದ್ದಾರೆ.. ಭಾರತದ ಈಶಾನ್ಯದಲ್ಲಿ ಇದೆ ಚೈನಾ.. ಇದು ಕಾಕತಾಳೀಯವೋ ಅಥವಾ ಅವರು ಹೇಳಿರುವುದು ಕೊರೊನಾ ಬಗ್ಗೆಯಾ ಎಂಬ ಮಾತುಗಳು ಹುಟ್ಟಿಕೊಂಡಿದೆ.

ವೀರ ಬ್ರಹ್ಮಯ್ಯನವರು ಈ ರೋಗವನ್ನು ಕೋರಂಟಿ ಎಂದು ಕರೆದಿದ್ದಾರೆ. ಈಗ ಹರಡಿರುವ ವೈರಸ್ ಕೊರೊನಾ ಎಂಬಂತೆ ಇದೆ. ಅದಕ್ಕೆ ಹಲವರು ವೀರ ಬ್ರಹ್ಮಯ್ಯನವರು ಹೇಳಿರುವ ಮಾತು ಸತ್ಯ ಎಂದರೆ, ಅನೇಕರು ಅದಕ್ಕೂ ಇದಕ್ಕು ತಳಕು ಹಾಕುವ ಅಗತ್ಯ ಇಲ್ಲ. ಇದೊಂದು ಕಾಕತಾಳೀಯ ಅಷ್ಟೇ ಎಂದು ವಾದಿಸುತ್ತಿದ್ದಾರೆ. ಒಟ್ಟಾರೆ ಕೊರೊನಾ ಈಗ ಆಸ್ತಿಕರು ಮತ್ತು ನಾಸ್ತಿಕರ ನಡುವೆ ಒಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here