ವೀರಪ್ಪನ್ ಈ ಹೆಸರು ಬಹುತೇಕ ಎಲ್ಲರಿಗೂ ತಿಳಿದ ಹೆಸರೇ. ಕುಖ್ಯಾತ ಕಾಡುಗಳ್ಳನಾಗಿ ಸರ್ಕಾರ ಹಾಗೂ ಪೋಲಿಸರಿಗೆ ತೊಂದರೆ ನೀಡುತ್ತಾ ಹತನಾದ ಇದೇ ವೀರಪ್ಪನ್ ನ ಪುತ್ರಿ ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವೀರಪ್ಪನ್ ಅವರ ಮಗಳು ವಿದ್ಯಾ ರಾಣಿ ತಮಿಳು ನಾಡಿನ ಕೃಷ್ಣಗಿರಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಪಿ.ಮುರುಳಿಧರ್ ರಾವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾ ರಾಣಿ ಅವರ ಜೊತೆಗೆ ಪಿಎಂಕೆ ಪಕ್ಷದ ಸುಮಾರು ಒಂದು ಸಾವಿರ ಕಾರ್ಯಕರ್ತರು ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಕ್ಷಕ್ಕೆ ಸೇರ್ಪಡೆಯಾದ ನಂತರ ವಿದ್ಯಾ ರಾಣಿಯವರು ಮಾತನಾಡುತ್ತಾ ತಾನು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ, ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳನ್ನು ನೋಡಿ, ಅವರಿಂದ ಪ್ರೇರಣೆ ಪಡೆದಿದ್ದು, ಅದಕ್ಕಾಗಿಯೇ ತಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾಗಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೂಡಾ ತನ್ನನ್ನು ಪಕ್ಷಕ್ಕೆ ಸೇರುವಂತೆ ಕೇಳಿದ್ದರು. ಆದರೆ ಆಗ ನಿರ್ಧಾರವನ್ನು ಮಾಡಲಾಗಿರಲಿಲ್ಲ. ಈಗ ಸರಿಯಾದ ಕಾಲವು ಕೂಡಿ ಬಂದಿದ್ದು, ಬಿಜೆಪಿ ಗೆ ಸೇರ್ಪಡೆಯಾಗಿದ್ದಾನೆ‌. ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲರಿಗಾಗಿ ಸೇವೆ ಮಾಡುವೆ ಎಂದಿದ್ದಾರೆ.

ವಿದ್ಯಾ ರಾಣಿ ಅವರು ಪಕ್ಷಕ್ಕೆ ಸೇರುವ ಮುನ್ನ ಕೃಷ್ಣಗಿರಿಯಲ್ಲಿ ಕಳೆದ ಒಂದು ವರ್ಷದಿಂದಲೂ ಕೂಡಾ ಟ್ಯೂಷನ್ ಸೆಂಟರ್ ಒಂದನ್ನು ನಡೆಸುತ್ತ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬೆಂಬಲವನ್ನು ನೀಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ಇನ್ನು ತಮಿಳುನಾಡಿನ ಬಿಜೆಪಿ ಕಾರ್ಯದರ್ಶಿ ಕೆ.ಎಸ್.ನರೇಂದ್ರನ್ ಅವರು ವಿದ್ಯಾ ಅವರ ಸೇವೆಯನ್ನು ಬಿಜೆಪಿ ಪರಿಗಣಿಸುತ್ತದೆ ಎನ್ನುತ್ತಾ ವಿದ್ಯಾ ಅವರಿಗೆ ಯಾವ ಹುದ್ದೆ ನೀಡುವುದು ಎಂಬುದನ್ನು ಅತಿ ಶೀಘ್ರದಲ್ಲೇ ನಿರ್ಧಾರ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here