ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ನೆರೆ‌ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ಭಾನುವಾರ ಧರ್ಮಸ್ಥಳ ಧರ್ಮಾಧಿಕಾರಿಗಳು ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆ ಭೇಟಿ ನೀಡಿದರು.

ಕಳೆದ ಒಂದು ವಾರದ ಮಹಾ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ಕೆಲವು ನದಿ ತೀರದಲ್ಲಿರುವ ಪ್ರದೇಶಗಳಲ್ಲಿ ಅಪಾರ ಹಾನಿ ಉಂಟಾಗಿದ್ದು, ಹಲವರು ಮನೆ ಜಮೀನು ಕಳೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದಾರೆ.

 

 

ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಲಾಯಿಲ ಕರ್ನೋಡಿ ಉಜಿರೆ SDM ಕಾಲೇಜಿನ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಬೆಳಿಗ್ಗೆ ಭೇಟಿ ನೀಡಿದರು.

ಹಾಗೆಯೇ ಇಂದು ವೀರೇಂದ್ರ ಹೆಗ್ಗಡೆಯವರು ಕಿಲ್ಲೂರು, ಕೊಲ್ಲಿ, ದಿಡುಪೆ, ಕುಕ್ಕಾವು, ಬಳಿಕ ಚಾರ್ಮಾಡಿಗೆ ಭೇಟಿ ನೀಡಿದ್ದಾರೆ.

ಸಂತ್ರಸ್ತ ಕೇಂದ್ರದಲ್ಲಿದ್ದವರ ಮಾಹಿತಿ ಪಡೆದ ಪೂಜ್ಯ ಹೆಗ್ಗಡೆಯವರು, ನಷ್ಟ ಸಂಭವಿಸಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಸಂತೃಸ್ತರು ತಮ್ಮ ಮನೆಗಳಲ್ಲಿದ್ದ ಚಿನ್ನಾಭರಣ, ದಾಖಲೆ ಪತ್ರಗಳು ಕಳೆದುಹೋಗಿರುವ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿಗಳ ಬಳಿ ಅಳಲು ತೋಡಿಕೊಂಡರು.

ರಾಜ್ಯದ ಹಲವೆಡೆ ಮಹಾಮಳೆಯಿಂದ ಹಾನಿಗೊಳಗಾಗದ ಸಂತ್ರಸ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಸದಸ್ಯರು ಮತ್ತು ಯೋಜನೆಯ ಸಿಬ್ಬಂದಿಗಳು ನೆರವಿಗೆ ತೆರಳುವಂತೆ ಸೂಚಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here