ಡಾ ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾಗಿ 50 ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜನವರಿ 2 2018 ರಂದು ಉಡುಪಿ ಮಠಾಧೀಶರು, ಊರ ನಾಗರಿಕರು ಮತ್ತು ಭಕ್ತ ಮಹನೀಯರ ಸಹಯೋಗದಲ್ಲಿ ಡಾ|| ಹೆಗ್ಗಡೆ ಅಭಿನಂದನಾ ಸಮಾರಂಭ ಜರಗಿತು.

ಈ ಸಂಧರ್ಭ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮಾಡದ ಸತ್ಕಾರ್ಯವಿಲ್ಲ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಅರೋಗ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ದೇಶವ್ಯಾಪ್ತಿಯಾಗಿ ವಿಸ್ತರಿಸಿ, ಹೆಗ್ಗಡೆಯವರು ದೇಶವನ್ನೇ ಧರ್ಮಸ್ಥಳವನ್ನಾಗಿಸಿದ್ದಾರೆ. ಅವರು ಭಾರತ ರತ್ನ ಗೌರವಕ್ಕೆ ಪಾತ್ರರಾಗಿ ದೇಶದ ರತ್ನವಾಗಬೇಕು. ಎಂದು ಉಡುಪಿ ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶುಭ ನುಡಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here