ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಇಡೀ ದೇಶವು ಸಜ್ಜಾಗಿದೆ. ಆದರೆ ಇದರಲ್ಲಿ ಹಗಲು, ಇರುಳು ಎನ್ನದೇ ಶ್ರಮದಾನ ‌ನೀಡುತ್ತಿದ್ದಾರೆ ವೈದ್ಯಕೀಯ ಸಿಬ್ಬಂದಿಗಳು. ಕೊರೊನಾ ಸೋಂಕಿತರ ಚಿಕಿತ್ಸೆಗೆ ನಿಂತಿರುವ ವೈದ್ಯರು, ದಾದಿಯರು ಹಾಗೂ ಇತರೆ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಸೋಂಕು ಪೀಡಿತರ ಸೇವೆಯಲ್ಲಿ ತೊಡಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ವೈದ್ಯರಿಗೆ ಸೂಕ್ತವಾದ ಆಹಾರವನ್ನು ಒದಗಿಸಲು ಮುಂಬೈನ ತಾಜ್ ಹೋಟೆಲ್ ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಆಹಾರವನ್ನು ಪೂರೈಕೆ ಮಾಡುವ ಕಾರ್ಯವನ್ನು ಮಾಡತೊಡಗಿತ್ತು. ಈಗ ಅಂತಹುದೇ ಒಂದು ಕಾರ್ಯ ನಮ್ಮ ರಾಜ್ಯದಲ್ಲಿ ಕೂಡಾ ನಡೆದಿದೆ.

ಈ ವಿಷಯವನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸಿ.ಎನ್. ಅವರು ತಮ್ಮ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಾಜ್ ಹೊಟೇಲ್ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಆಹಾರ ಪೂರೈಕೆ ಮಾಡಿರುವುದನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ “ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗೆ ಉತ್ತಮ ಲಂಚ್ ಬಡಿಸಿದ್ದಕ್ಕಾಗಿ ತಾಜ್‌ಹೋಟೆಲ್ಸ್ ಗ್ರೂಪ್‌ನ ಸನ್ನೆಯನ್ನು ಬಹಳವಾಗಿ ಪ್ರಶಂಸಿಸುತ್ತೇವೆ.”

“ಆಸ್ಪತ್ರೆಯ ಸಿಬ್ಬಂದಿ ಮತ್ತು ಎಲ್ಲಾ ವೈದ್ಯಕೀಯ ವೃತ್ತಿಪರರು COVID19 ಪೀಡಿತ ರೋಗಿಗಳಿಗೆ ಗುಣಮಟ್ಟದ ಆರೈಕೆ ನೀಡಲು ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನಗಳಿಗೆ ನನ್ನ ಆಳವಾದ ಅಭಿನಂದನೆಗಳು!” ಎಂದು ಕೂಡಾ ಅವರು ಟ್ವೀಟ್ ಮಾಡುವ ಮೂಲಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಎಲ್ಲಾ ವೈದ್ಯಕೀಯ ವೃತ್ತಿಪರರಿಗೂ ಕೂಡಾ ಅಭಿನಂದನೆಗಳನ್ನು ಕೂಡಾ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here