ನಮಾಮಿ ಗಂಗಾ ಯೋಜನೆಯ ಪರಿಶೀಲನೆಗಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಗಂಗಾ ಘಾಟಿಗೆ ತೆರಳಿದ್ದರು. ಈ ವೇಳೆಯಲ್ಕಿ ಪ್ರಧಾನಿ ನರೇಂದ್ರ ಮೋದಿಯವರು ಮೆಟ್ಟಿಲನ್ನು ಹತ್ತಿ ನಡೆಯುವಾಗ ಅಚಾನಕ್ಕಾಗಿ ಮೆಟ್ಟಿಲನ್ನು ಎಡವಿ ಬಿದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ನಮಾಮಿ ಗಂಗಾ ಯೋಜನೆಯ ಬಗ್ಗೆ ಸ್ವತಃ ಪರಿಶೀಲನೆ ನಡೆಸುವ ಉದ್ದೇಶದಿಂದ ಕಾನ್ಪುರದ ಗಂಗಾ ಘಾಟಿಗೆ ತೆರಳಿದ್ದರು. ಆಗ ಮೆಟ್ಟಿಲುಗಳನ್ನು ಹತ್ತುವ ವೇಳೆ ಎಡವಿ ಬಿದ್ದಿದ್ದು, ಅವರು ಬಿದ್ದಿದ್ದು ನೋಡಿದ ಕೂಡಲೇ ಅವರ ಜೊತೆಗಿದ್ದ ಭದ್ರತಾ ಸಿಬ್ಬಂದಿ ಮೋದಿಯವರು ತಕ್ಷಣವೇ ಅವರನ್ನು ಮೇಲೆ ಎತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಬೆಳಿಗ್ಗೆಯೇ ಕಾನ್ಪುರಕ್ಕೆ ಆಗಮಿಸ ರಾಷ್ಟ್ರೀಯ ಗಂಗಾ ಮಂಡಳಿಯೊಂದಿಗೆ ಒಂದು ಸಭೆ ನಡೆಸಿದ ನಂತರ ಗಂಗಾ ಸ್ವಚ್ಛತೆಯನ್ನು ತಾನೇ ಖುದ್ದಾಗಿ ಪರಿಶೀಲಿಸುವ ಸಲುವಾಗಿ ಹೋಗಿದ್ದರು‌. ಅಲ್ಲಿ ಗಂಗಾ ಸ್ವಚ್ಛತೆ ಪರಿಶೀಲಿನೆಗೆ ಮುಂದಾದ ಸಂದರ್ಭದಲ್ಲಿ ಮೆಟ್ಟಿಲುಗಳನ್ನು ಹತ್ತುವಾಗ ಎಡವಿ ಬಿದ್ದಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈಗ ಇದೇ ಘಟನೆಯನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರು ಟೀಕೆ ಮಾಡಲು ಆರಂಭಿಸಿದ್ದಾರೆ.

ಅವರು ಪ್ರಧಾನಿ ಯನ್ನು ಟೀಕಿಸುತ್ತಾ ಮೋದಿಯವರು ಕೆಳಗೆ ಬಿದ್ದ ವಿಡಿಯೋವನ್ನು ಭಾರತದ ಆರ್ಥಿಕತೆಗೆ ಹೋಲಿಸಿ, ವಿಡಿಯೋವನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಪಾಕ್ ನವರ ಎಂದು ಹೇಳಿಕೊಂಡ ಕೆಲವರು ಕೂಡಾ ನರೇಂದ್ರ ಮೋದಿಯವರ ಬಗ್ಗೆ ವಿಡಿಯೋಗಳನ್ನು ಮಾಡುತ್ತಾ ಅದರಲ್ಲಿ ಮೋದಿಯವರ ಬಗ್ಗೆ ಹಾಸ್ಯ ಮಾಡುತ್ತಾ ಈ ಸನ್ನಿವೇಶವನ್ನು ಕೂಡಾ ನಗೆ ಪಟಲಾಗುವಂತೆ ಚಿತ್ರಣ ಮಾಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here