ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಆಗಾಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಜೊತೆಗೆ ಮಾದ್ಯಮಗಳಲ್ಲಿ ಕೂಡಾ ಈ ಬಗ್ಗೆ ವಿಚಾರಗಳನ್ನು ತಿಳಿಸುವ ಮೂಲಕ ಜನರಿಗೆ ರಸ್ತೆ ಸುರಕ್ಷತೆ ಹಾಗೂ ವಾಹನ ಚಾಲನೆ ಮಾಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ, ಸುರಕ್ಷತಾ ಕ್ರಮಗಳ ಬಗ್ಗೆ ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ. ಆದರೂ ಹಲವರು ವಾಹನ ಚಾಲನೆ ಮಾಡುವಾಗ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ಬೈಕ್ ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು , ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ಇರುವುದು, ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ ಹೀಗೆ ಸುರಕ್ಷತೆಗೆ ಜನರು ಅಷ್ಟಾಗಿ ಗಮನ ನೀಡುತ್ತಿಲ್ಲ.

ರಸ್ತೆಗಳಲ್ಲಿ ಈ ರೀತಿ ಸುರಕ್ಷರಾ ಕ್ರಮ ಉಲ್ಲಂಘನೆ ಮಾಡಿದವರನ್ನು ಟ್ರಾಫಿಕ್ ಪೋಲೀಸರು ಹಿಡಿದು ದಂಡ ವಿಧಿಸುತ್ತಾರೆ. ಇಂತಹುದೇ ಇಂದು ಘಟನೆಯಲ್ಲಿ ಪೋಲಿಸರು ಒಬ್ಬ ದ್ವಿಚಕ್ರ ವಾಹನ ಚಾಲಕನನ್ನು ಹೆಲ್ಮೆಟ್ ಧರಿಸದೆ ಇರುವುದಕ್ಕೆ ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ಹಾಗೆ ಆತನನ್ನು ನಿಲ್ಲಿಸಿದ್ದಕ್ಕೆ ಹೆಲ್ಮೆಟ್ ಧರಿಸದೆ ತಪ್ಪು ತಾನೇ ಮಾಡಿದ್ದರೂ ವಾಹನ ಚಾಲಕ ಪೋಲಿಸರ ಮೇಲೆ ಗಲಾಟೆ ಮಾಡಿದ್ದಾನೆ. ಗಾಡಿ ನಂದು, ಅದಕ್ಕೆ ಬಂಡವಾಳ ಹಾಕಿರೋನು ನಾನು , ಪೆಟ್ರೋಲ್ ಹಾಕಿಸಿರೋನು ನಾನು ನೀವ್ಯಾರು ನನ್ನ ಕೇಳೋಕೆ, ಎಷ್ಟು ಧೈರ್ಯ ಇದ್ದರೆ ನನ್ನ ಏಯ್ ಅಂತ ಕರೀತೀರ ಎಂದೆಲ್ಲಾ ಕೂಗಾಡಿದ್ದಾನೆ. ಆತನ ಹುಚ್ಚಾಟದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ನಾನು ಸತ್ತರೆ ನಮ್ಮ ಕುಟುಂಬಕ್ಕೆ ನಷ್ಟ ನಿಮಗೇನು ಎಂದಿರುವ ಆತ ಮೋದಿ ಬಂದರೂ ಹೆದರೋಲ್ಲ ನಾನು, ಎಸ್ಪಿ, ಡಿಎಸ್ಪಿ ಎಲ್ಲರನ್ನೂ ನೋಡಿದ್ದೀನಿ ಎನ್ನುತ್ತಾ ಕಳೆದ ಎಂಟು ವರ್ಷದಿಂದ ನಾನು ಬೈಕ್ ಓಡಿಸ್ತಾ ಇದ್ದೀನಿ, ನನಗೇನೂ ಆಗಿಲ್ಲ, ಮುಂದೇನೂ ಆಗಲ್ಲ ಎಂದವನು, ಪೋಲಿಸರ ಮೇಲೆ ಹಲ್ಲೆ ಮಾಡಲು ಒಂದು ಕಲ್ಲನ್ನು ಎತ್ತಿಕೊಂಡು ಬಂದಿದ್ದಾನೆ. ತಕ್ಷಣ ಆತನನ್ನು ನಿಯಂತ್ರಿಸಲು ಬಂದ ಪೋಲಿಸರನ್ನು ಹೊಡೆಯಲು ಹೋಗಿದ್ದಾನೆ. ನಿಜಕ್ಕೂ ರಸ್ತೆ ಸುರಕ್ಷತೆಯ ನೈತಿಕ ಜ್ಞಾನ ಇಲ್ಲದ ಇಂತಹವರಿಗೆ ಏನೆನ್ನಬೇಕೋ ತಿಳಿಯದಂತಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here