ಭಾರತೀಯ ಬ್ಯಾಂಕ್​ಗಳಿಗೆ ಪಂಗನಾಮ ಹಾಕಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್​ ಮಲ್ಯ ಹೆಗಲ ಮೇಲೆ ಬ್ಯಾಟಿಂಗ್ ದಿಗ್ಗಜ ಕ್ರಿಸ್​ಗೇಲ್ ಕೈ ಹಾಕಿದ್ದಾರೆ. ಹಾಗಂತ ಮಲ್ಯ ಅವ್ಯವಹಾರದಲ್ಲಿ ಗೇಲ್ ಭಾಗಿಯಾಗಿದ್ದಾರೆ ಅಂತ ಭಾವಿಸಬೇಡಿ. ಮಲ್ಯ ಹೆಗಲ ಮೇಲೆ ಕೈ ಹಾಕಿ ತೆಗೆಸಿಕೊಂಡಿರುವ ಫೋಟೋವೊಂದನ್ನ ಟ್ವೀಟ್ ಮಾಡಿರುವ ಗೇಲ್, ‘ಗ್ರೇಟ್​ ಕ್ಯಾಚ್​ ಅಪ್​ ವಿತ್ ಬಿಗ್​ ಬಾಸ್’ ಅಂತ ಕ್ಯಾಪ್ಷನ್ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಲ್ಯ, ‘ಯುನಿವರ್ಸಲ್ ಬಾಸ್ ಹಾಗೂ ನನ್ನ ಆತ್ಮೀಯ ಮಿತ್ರನ ಜೊತೆ ಒಂದು ಫೋಟೋ’ ಅಂತ ಹೇಳಿದ್ದಾರೆ. ಅಲ್ಲದೇ ತಮ್ಮನ್ನು ಚೋರ್ ಅಂತ ಕರೆಯುವವರಿಗೂ ಕಮೆಂಟ್​ನಲ್ಲಿಯೇ ಉತ್ತರಿಸಿರೋ ಮಲ್ಯ, ನಿಮ್ಮ ಬ್ಯಾಂಕ್​ಗಳನ್ನು ಹೋಗಿ ಕೇಳಿ ನಾನು ಸಂಪೂರ್ಣ ಸಾಲವನ್ನ ಹಿಂದಿರುಗಿಸಲು ಸಿದ್ಧನಿದ್ದೇನೆ ಅಂತ ಕಳೆದ ಒಂದು ವರ್ಷದಿಂದ ಹೇಳುತ್ತಿದ್ದೇನೆ.

ಈಗ ನಿರ್ಧರಿಸಿ ಯಾರು ಚೋರ್ ಅಂತ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು, ಗೇಲ್ ಈ ಫೋಟೋ ಟ್ವೀಟ್​ಗೆ ಟ್ವಿಟ್ಟಿಗರಿಂದ ತಹರೇವಾರಿ ಕಮೆಂಟ್ ಬಂದಿದ್ದು. ಮೊದಲು ನಿಮ್ಮ ಪರ್ಸ್ ಚೆಕ್ ಮಾಡ್ಕೊಳ್ಳಿ ಬಾಸ್​ ಅಂತ ವ್ಯಂಗ್ಯವಾಡಿದ್ದಾರೆ. ಈ ಫೋಟೋಗೆ ಅನೇಕ ಟ್ವೀಟಿಗರು ಚೋರ್​​ ಎಂದು ಪ್ರತಿಕ್ರಿಯಿಸಿದ್ದರು. ಇಂತಹ ಟ್ವೀಟ್​ಗೆಗಳಿಗೆ ಬೇಸತ್ತು ನಂತರ ರೀಟ್ವೀಟ್​​ ಮಾಡಿರುವ ಮಲ್ಯ ಸಿಡಿಮಿಡಿ ತೋರಿದ್ದಾರೆ.

ನನ್ನನ್ನು ಚೋರ್​​ ಎಂದು ಕರೆಯುವವರು ಮೊದಲು ಸತ್ಯ ಹಾಗೂ ವಾಸ್ತವ ಏನೆಂಬುದನ್ನು ಅರಿತು ನಂತರ ಮಾತನಾಡಿದರೆ ಒಳಿತು. ಕಳೆದ ಒಂದು ವರ್ಷದಿಂದ ನಿಮ್ಮ ಬ್ಯಾಂಕುಗಳಿಗೆ ಪೂರ್ತಿ ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ಅದನ್ನು ಪಡೆದುಕೊಳ್ಳಲು ನಿರಾಕರಿಸುತ್ತಿರುವ ನಿಮ್ಮ ಬ್ಯಾಂಕ್​ಗಳನ್ನು ಏಕೆ ಹಾಗೆ ಮಾಡುತ್ತಿವೆ ಎಂದು ಪ್ರಶ್ನಿಸಿ. ನಂತರ ಯಾರು ಚೋರ್​​ ಎಂದು ನಿರ್ಧರಿಸಿ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here