‘ಸರಿಗಮಪ’ ಸಿಂಗಿಂಗ್ ರಿಯಾಲಿಟಿ ಶೋ ಈಗಾಗಲೇ ನಾಡಿನ ಸುಪ್ರಸಿದ್ಧ ಶೋ ಗಳಲ್ಲಿ ಒಂದಾಗಿದೆ. ನಾಡಿನ ಉದ್ದಗಲಕ್ಕೂ ಹರಡಿದೆ ಈ ಕಾರ್ಯಕ್ರಮದ ಜನಪ್ರಿಯತೆ. ಈ ಹಾಡುಗಾರಿಕೆಯ ಕಾರ್ಯಕ್ರಮದಲ್ಲಿ ಹಾಡುವ ಪ್ರತಿಭಾವಂತರು ಪ್ರಮುಖ ಆಕರ್ಷಣೆಯಾದರೆ, ಮತ್ತೊಂದು ಆಕರ್ಷಣೆಯೆಂದರೆ ಅದು ಶೋ ನ ತೀರ್ಪುಗಾರರು. ಗಾಯಕರಾದ ವಿಜಯ್ ಪ್ರಕಾಶ್, ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ನಾಡಿನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರಾಗಿದ್ದಾರೆ. ಇವರೊಟ್ಟಿಗೆ ಮಹಾಗುರುಗಳ ಸ್ಥಾನದಲ್ಲಿ ಇದ್ದಾರೆ ನಾದ ಬ್ರಹ್ಮ ಹಂಸಲೇಖ ಅವರು‌. ಆದರೆ ಕೆಲವು ವಾರಗಳಿಂದ ಮೂರು ಜನ ತೀರ್ಪುಗಾರರಲ್ಲಿ ವಿಜಯ್ ಪ್ರಕಾಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಅವರ ಜಾಗ ಖಾಲಿಯಾಗಿಯೇ ಇದೆ.

ವಿಜಯ್ ಪ್ರಕಾಶ್ ಅವರ ಗೈರು ಹಾಜರಿಯು ಅವರ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ. ವಿಜಯ್ ಪ್ರಕಾಶ್ ಅವರು ಕಾರ್ಯಕ್ರಮಕ್ಕೆ ಏಕೆ ಗೈರಾಗಿದ್ದಾರೆ ಎಂಬುದ‌ನ್ನು ತಿಳಿಯಲು ವೀಕ್ಷಕರು ನೀವು ಏಕೆ ಕಾರ್ಯಕ್ರಮಕ್ಕೆ ಬರುತ್ತಿಲ್ಲ? ಹಾಗೂ ಯಾವಾಗ ಹಿಂದಿರುಗುವಿರಿ ಎಂದು ವೀಕ್ಷಕರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಪ್ರಶ್ನಿಸಿದ್ದಾರೆ. ವೀಕ್ಷಕರಿಂದ ಬಂದ ಪ್ರಶ್ನೆಗಳಿಗೆ ವಿಜಯ್ ಪ್ರಕಾಶ್ ಪ್ರತಿಕ್ರಿಯಿಸುವ ಮೂಲಕ ಎಲ್ಲರ ಅನುಮಾನ ಹಾಗೂ ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ. ತಾನು ಮುಂದಿನ ವಾರ ಕಾರ್ಯಕ್ರಮಕ್ಕೆ ಮರಳುತ್ತಿರುವುದಾಗಿ ಅವರು ಉತ್ತರ ನೀಡಿದ್ದಾರೆ.

ಅಷ್ಟೇ ಅಲ್ಲದೆ ಇಷ್ಟು ದಿನ ಅವರು ತಾನೇಕೆ ಬರಲಿಲ್ಲ ಎಂಬುದನ್ನು ಕೂಡ ಕಾರ್ಯಕ್ರಮದಲ್ಲೇ ಹೇಳುತ್ತೇನೆ ಎಂದು ಅವರು ರೀ-ಟ್ವೀಟ್ ಮಾಡಿದ್ದಾರೆ. ಏಪ್ರಿಲ್ 7 ರಂದು ವಿಜಯ್ ಪ್ರಕಾಶ್ ಅವರ ತಂದೆ ವಿದ್ವಾನ್ ಎಲ್ ರಾಮಶೇಷ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆ ಸಂದರ್ಭದಲ್ಲಿ ವಿಜಯ್ ಅವರು ಅಮೆರಿಕ ಪ್ರವಾಸದಲ್ಲಿದ್ದರು. ಆದರೆ ತಂದೆಯು ನಿಧನರಾದ ಸುದ್ದಿ ತಿಳಿದ ಕೂಡಲೇ ಅವರು ಅಮೆರಿಕದಿಂದ ವಾಪಸಾಗಿದ್ದರು. ಬಹುಶಃ ಕೆಲವು ವೈಯಕ್ತಿಕ ಕಾರಣಗಳಿಂದ ಅವರು ಅವೆಲ್ಲವನ್ನೂ ಸರಿದೂಗಿಸಿ ಈಗ ಮತ್ತೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಸಿಂಗಿಂಗ್ ಶೋ ಸರಿಗಮಪ ಕ್ಕೆ ವಾಪಸಾಗುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here