ದೇಶಾದ್ಯಂತ ಕೊರೊನ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು 21ದಿನಗಳ ಕಾಲ ಲಾಕ್ ಡೌನ್  ನಿಯಮ ಜಾರಿಗೆ ತಂದಿದೆ. ಈ ನಿಯಮದಿಂದಾಗಿ ಹಲವಾರು ಜನರು ಹಸಿವಿನಿಂದ ಬಳಲುತ್ತಿದ್ದು  ಸರ್ಕಾರ ಹಾಗೂ ಜನರ ಆರ್ಥಿಕ ಸ್ಥಿತಿಯೂ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ತಮ್ಮಿಂದಾಗುವ ಸಹಾಯವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನೀಡುವಂತೆ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳು ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಹಲವಾರು ಜನರು ತಮ್ಮಿಂದ ಆಗುವ ಸಹಾಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಣದ ಮೂಲಕ

ಹಾಗೂ ಅಗತ್ಯ ಸಾಮಗ್ರಿಗಳ ಮೂಲಕ ನೆರವು ನೀಡಿದ್ದರು. ಇನ್ನು ನಮ್ಮ ಕನ್ನಡ ಚಿತ್ರರಂಗದ ಹಲವಾರು ನಾಯಕ ನಾಯಕಿಯರು ಸಹ ತಮ್ಮಿಂದಾಗುವ ಸಹಾಯಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಿನ್ನೆ ಕನ್ನಡ ಚಿತ್ರರಂಗದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ಹಣ ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳ ಅಧಿಕೃತವಾಗಿ ಟ್ವೀಟ್ ಮೂಲಕ ವಿಜಯ ಪ್ರಕಾಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು ಇದಕ್ಕೆ ಪ್ರತ್ಯುತ್ತರ ನೀಡಿರುವ ವಿಜಯಪ್ರಕಾಶ್ ಅವರು ಜನರು ಕೊಟ್ಟಿರುವ ಹಣದಲ್ಲಿ ಸಹಾಯ ಮಾಡಿದ್ದೇನೆ ಎನ್ನುವ ಮೂಲಕ ಹೃದಯವಂತಿಕೆಯ ಮಾತುಗಳನ್ನು ಆಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಗಾಯಕ ವಿಜಯ್​ ಪ್ರಕಾಶ್​ ‘ಕೆರೆಯ ನೀರನು ಕೆರೆಗೆ ಚೆಲ್ಲೀ ವರವ ಪಡೆದವರಂತೆ ಕಾಣಿರೊ. ಜನರು ನನಗೆ ನೀಡಿರುವ ಪ್ರೀತಿಯ ಬೊಗಸೆಯಿಂದ ಚಿಕ್ಕ ಸೇವೆ. ನಾವೆಲ್ಲರೊ ಕೈ ಜೋಡಿಸಿದರೇ ಕರೊನಾ ನ ಗೆಲ್ಲಬಹುದು‘ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪಿಎಂ ಪರಿಹಾರ ನಿಧಿ ಹಾಗೂ ಕೆಲ ರಾಜ್ಯಗಳ ಪರಿಹಾರ ನಿಧಿಗೆ ಕೈಲಾದಷ್ಟು ದೇಣಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆ..

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here