ಟಿಕ್ ಟಾಕ್ ಇಂದು ಒಂದು ಬಹಳ ಪ್ರಮುಖವಾದ ಸಾಮಾಜಿಕ ಜಾಲತಾಣ ಆಗಿ ಹೋಗಿದೆ.‌ ಇದರ ಮೂಲಕ ಸಾಮಾನ್ಯ ಎನಿಸಿಕೊಂಡವರು ಕೂಡಾ ತಮ್ಮ ಪ್ರತಿಭೆಯನ್ನು ವಿಡಿಯೋ ಮೂಲಕ ತೋರಿಸಿ ದಿನ ಕಳೆಯುವುದರ ಒಳಗೆ ಜನಪ್ರಿಯರಾಗುತ್ತಿರುವುದು ಕೂಡಾ ಎಲ್ಲರಿಗೂ ತಿಳಿದಿದೆ. ಇನ್ನು ಸೆಲೆಬ್ರಿಟಿ ಗಳು ಕೂಡಾ ಟಿಕ್ ಟಾಕ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅಭಿಮಾನಿಗಳು ತಮ್ಮ ಅಭಿಮಾನ ನಟ ನಟಿಯರ ವಿಡಿಯೋಗಳನ್ನು ನೋಡಿ ಸಂತಸ ಪಡುತ್ತಾರೆ. ಈಗ ಅಂತಹುದೇ ಒಂದು ವಿಡಿಯೋ ಎಲ್ಲರ ಗಮನವನ್ನು ಸೆಳೆದಿದೆ.

ಸ್ಯಾಂಡಲ್ ವುಡ್ ನ ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿ ಸ್ಪಂದನ ಅವರ ಜೊತೆ ಕನ್ನಡದ ಎರಡು ಜನಪ್ರಿಯ ಹಾಡುಗಳಿಗೆ ಟಿಕ್ ಟಾಕ್ ವಿಡಿಯೋ ಮಾಡಿದ್ದಾರೆ. ವಿಡಿಯೋ ದಲ್ಲಿ ಪತಿ ಪತ್ನಿ ಇಬ್ಬರೂ ಬಹಳ ಚೆನ್ನಾಗಿ ಹಾಡಿಗೆ ಎಕ್ಸ್ ಪ್ರೆಷನ್ ನೀಡುತ್ತಾ, ಹೆಜ್ಜೆ ಹಾಕಿದ್ದಾರೆ. ಕರಾಟೆ‌ ಕಿಂಗ್ ಶಂಕರ್ ನಾಗ್ ಹಾಗೂ ಭವ್ಯ ಅವರ ಜನಪ್ರಿಯ ಹಾಡು ಗೀತಾಂಜಲಿ ಹಾಡಿಗೆ ವಿಜಯ್ ರಾಘವೇಂದ್ರ ಮತ್ತು ಅವರು ಪತ್ನಿ ಸ್ಪಂದನ ಅವರು ಹೆಜ್ಜೆ ಹಾಕಿದ್ದಾರೆ. ಅಲ್ಲದೆ ಇನ್ನೊಂದು ಇಂಪಾದ ಹಾಡಿಗೆ ಕೂಡಾ ಅವರು ಹೆಜ್ಜೆ ಹಾಕಿದ್ದಾರೆ.

ಡಾ.ರಾಜ್ ಕುಮಾರ್ ಹಾಗೂ ಮಂಜುಳ ಅವರ ಅಭಿನಯದ ಜನಪ್ರಿಯ ಹಾಡು ಜೀವ ಹೂವಾಗಿದೆ, ಭಾವ ಜೇನಾಗಿದೆ ಹಾಡಿಗೆ ಕೂಡಾ ಈ ದಂಪತಿ ಹೆಜ್ಜೆ ಹಾಕಿದ್ದು, ಅವರ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿರುವುದು ಮಾತ್ರವೇ ಅಲ್ಲದೆ, ಅನೇಕರ ಮೆಚ್ಚುಗೆಯನ್ನು ಕೂಡಾ ಪಡೆಯುತ್ತಿದೆ. ಇಬ್ಬರ ನಡುವಿನ ಕೆಮಿಸ್ಟ್ರಿ ಬಹಳ ಅಂದವಾಗಿ ಮೂಡಿ ಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here